News Kannada
Wednesday, October 05 2022

ಕರ್ನಾಟಕ

ಅಂಬರೀಶ್ ಹುಟ್ಟೂರಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ - 1 min read

Photo Credit :

ಅಂಬರೀಶ್ ಹುಟ್ಟೂರಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

ಭಾರತೀನಗರ: ಗ್ರಾಮೀಣ ಗಂಡು ಕಲೆಯಾದ ಕಬಡ್ಡಿ ಕ್ರೀಡೆ ಮಂಡ್ಯ ಪ್ರದೇಶದ ಗಂಡು ಮೆಟ್ಟಿನ ಕ್ರೀಡೆ ಎಂದೇ ಪ್ರಸಿದ್ದಗೊಂಡಿದೆ. ಅದರಲ್ಲೂ ಗ್ರಾಮೀಣ ಕ್ರೀಡೆಗಳಿಗೆ ತವರಿನಂತಿರುವ ದೊಡ್ಡರಸಿನಕೆರೆ ಗ್ರಾಮದಲ್ಲಿ ಇದೀಗ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಇಡೀ ಗ್ರಾಮ ಸಜ್ಜಾಗಿ ನಿಂತಿದೆ.

ಕಳೆದ ಎಂಟು ವರ್ಷಗಳಿಂದ ಪ್ರತೀ ವರ್ಷ ವಿಜೃಂಭಣೆಯಿಂದ ನಡೆಯುತ್ತಾ ಬಂದಿರುವ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಈ ವರ್ಷ ನ.23, 24ರಂದು 2 ದಿನಗಳ ಕಾಲ ಕ್ರೀಡಾಭಿಮಾನಿಗಳಿಗೆ ಕಬಡ್ಡಿಯ ರಸದೌತಣ ನೀಡಲಿದೆ. ಗ್ರಾಮದ ಶ್ರೀ ಕಾಳಿಕಾಂಬ ಯುವ ಕ್ರೀಡಾ ಬಳಗದಿಂದ ನಡೆಸುವ ಪಂದ್ಯಾವಳಿ ಶಾಸಕ ಡಿ.ಸಿ. ತಮ್ಮಣ್ಣ ಅವರ ಪುತ್ರ ಸಂತೋಷ್ ತಮ್ಮಣ್ಣ ಅವರ ನೇತೃತ್ವದಲ್ಲಿ ನಡೆಯಲಿದ್ದು, ದಿವಂಗತ ಅಂಬರೀಶ್‍ರವರ ಸ್ವಗ್ರಾಮವಾಗಿರುವ ಕಾರಣ ಹೆಚ್ಚು ಮಂದಿ ಕ್ರೀಡಾಪಟುಗಳು 8ನೇ ವರ್ಷದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಕ್ರೀಡಾಪಟುಗಳನ್ನು ಈಗಾಗಲೇ ಆಹ್ವಾನಿಸಲಾಗಿದ್ದು, ಮೈಸೂರು, ಮಂಡ್ಯ, ಹಾಸನ, ರಾಮನಗರ, ಚಿಕ್ಕಮಗಳೂರು, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ಸುಮಾರು 65ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದು, ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಎರಡು ದಿನವೂ ಕೂಡ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿವುದು.

ಕಳೆದ 7 ವರ್ಷಗಳಿಂದಲೂ ನಿರಂತರವಾಗಿ ಪಂದ್ಯಾವಳಿಯನ್ನು ನಡೆಸುತ್ತಿದ್ದು, ಹೊನಲು ಬೆಳಕಿನ ಪಂದ್ಯಾವಳಿಯಾಗಿರುವ ಕಾರಣ ಇಡೀ ಗ್ರಾಮವನ್ನು ವಿದ್ಯುತ್ ದ್ದೀಪಗಳಿಂದ ಅಲಂಕರಿಸಲಾಗುತ್ತಿದೆ. ತುಂಬಾ ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ನಡೆಸಿಕೊಂಡು ಬರುತ್ತಿರುವ ಕಾರಣ, ಮಂಡ್ಯ, ಮೈಸೂರು ಸೇರಿದಂತೆ ವಿವಿಧೆಡೆಗಳಿಂದಲೂ ಸಹಸ್ರಾರು ಮಂದಿ ಕ್ರೀಡಾಭಿಮಾನಿಗಳು ಗ್ರಾಮಕ್ಕೆ ಆಗಮಿಸಲಿದ್ದಾರೆ ಎಂದು ವ್ಯವಸ್ಥಾಪಕರಲ್ಲೊಬ್ಬರಾದ ಡಿ.ಎಂ.ಮಂಚೇಗೌಡ ಮತ್ತು ತಂಡ ತಿಳಿಸಿದರು.

ಕಳೆದ ಏಳು ವರ್ಷಗಳಿಂದಲೂ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಇದು ಕಬಡ್ಡಿ ಪ್ರಿಯರಿಗೆ ವಿಶೇಷವಾಗಿದೆ. ಗ್ರಾಮೀಣ ಪ್ರತಿಭೆಯನ್ನು ಹೊರತೆಗೆಯುವುದು ಮತ್ತು ಗ್ರಾಮೀಣ ಕ್ರೀಡೆಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಕ್ರೀಡಾಕೂಟ ನಡೆಸಲಾಗುತ್ತಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣನವರು ಸಹ ತಿಳಿಸಿದರು.

ಇದುವರೆಗೂ ನಿರಂತರವಾಗಿ ಯಾವುದೇ ಅಹಿತರ ಘಟನೆಗೆ ಆಸ್ಪದ ನೀಡದೆ ಅಚ್ಚುಕಟ್ಟಾಗಿ ಪಂದ್ಯಾವಳಿ ನಡೆದು ಬಂದಿದೆ. ಮಾಜಿ ಸಚಿವ ದಿ.ಅಂಬರೀಶ್‍ರವರ ಸ್ವರಣಾರ್ಥವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ  ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಸಂತೋಷ್‍ತಮ್ಮಣ್ಣ ಸೇರಿದಂತೆ ಹಲವಾರು ಮಂದಿ ರಾಜಕೀಯ ಮುಖಂಡರು, ಸಮಾಜ ಸೇವಕರು, ಗ್ರಾಮದ ಮುಖಂಡರು ಪ್ರೋತ್ಸಾಹ ನೀಡುತ್ತಿರುವ ಕಾರಣ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು.

ಈ ಬಾರಿ 8ನೇ ವರ್ಷದ ಪಂದ್ಯಾವಳಿ ಗ್ರಾಮದ ಕಾಳಿಕಾಂಬ ಪ್ರೌಢಶಾಲೆ ಆವರಣದಲ್ಲಿ ನ.23ರಂದು ಉದ್ಘಾಟನೆಯಾಲಿದೆ. ಪ್ರಥಮ ಬಹುಮಾನವಾಗಿ 20 ಸಾವಿರ ರೂ, ದ್ವಿತೀಯ 15 ಸಾವಿರ, ತೃತೀಯ 10 ಸಾವಿರ ಹಾಗೂ 5 ಸಾವಿರ ರೂ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

See also  ಉಳ್ಳಾಲ ತೀರಕ್ಕೆ ತೇಲಿಬಂದ ಲಂಗರು ಹಾಕಿದ್ದ ಬೋಟ್

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9886381010, 9035906040ಗೆ ಸಂಪರ್ಕಿಸಬೇಕೆಂದು ಕೋರಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು