News Kannada
Thursday, September 29 2022

ಕರ್ನಾಟಕ

ಕುಶಾಲನಗರ ಜಾತ್ರೋತ್ಸವ: 3 ದಿನಗಳ ಗೋ ಪ್ರದರ್ಶನ ಸಂಪನ್ನ - 1 min read

Photo Credit :

ಕುಶಾಲನಗರ ಜಾತ್ರೋತ್ಸವ: 3 ದಿನಗಳ ಗೋ ಪ್ರದರ್ಶನ ಸಂಪನ್ನ

ಮಡಿಕೇರಿ: ಕುಶಾಲನಗರ ಜಾತ್ರೋತ್ಸವ ಅಂಗವಾಗಿ ಏರ್ಪಡಿಸಿದ್ದ 99ನೇ ಗೋಪ್ರದರ್ಶನ ಸಮಾರೋಪ ಸಮಾರಂಭ ಮಂಗಳವಾರ ನಡೆಯಿತು.

3 ದಿನಗಳ ಕಾಲ ನಡೆದ ದನಗಳ ಜಾತ್ರೆಯಲ್ಲಿ ಪಾಲ್ಗೊಂಡಿದ್ದ 160 ಕ್ಕೂ ಅಧಿಕ ರಾಸುಗಳ ಪ್ರದರ್ಶನ ನಡೆಯಿತು. ಬಳಿಕ ಉತ್ತಮ ರಾಸುಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿಜೇತ ರಾಸುಗಳು, ಸಾಕು ಪ್ರಾಣಿಗಳ ಮಾಲೀಕರಿಗೆ ದೇವಾಲಯ ಸಮಿತಿ ವತಿಯಿಂದ ಬಹುಮಾನ ವಿತರಣೆ ನಡೆಯಿತು.

ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಜಾನುವಾರುಗಳನ್ನು ಹಾಲು ಹಲ್ಲಿನ ಜೋಡಿ ಹಳ್ಳಿಕಾರ್ ಕರುಗಳು, ಎರಡು ಹಲ್ಲಿನ ಜೋಡಿ ಹಳ್ಳಿಕಾರ್ ಎತ್ತುಗಳು, ನಾಲ್ಕು ಹಲ್ಲಿನ ಜೋಡಿ ಹಳ್ಳಿಕಾರ್ ಎತ್ತುಗಳು, ಬಾಯಿ ಕೂಡಿದ ಜೋಡಿ ಹಳ್ಳಿಕಾರ್ ಎತ್ತುಗಳು, ಹಾಲು ಹಲ್ಲಿನ ಹಳ್ಳಿಕಾರ್ ಬೀಜದ ಹೋರಿ, ಎರಡು ಹಲ್ಲಿನ ಹಳ್ಳಿಕಾರ್ ಬೀಜದ ಹೋರಿ, ನಾಲ್ಕು, ಆರು ಹಲ್ಲಿನ ಹಳ್ಳಿಕಾರ್ ಬೀಜದ ಹೋರಿ, ಮಿಶ್ರತಳಿ ಬೀಜದ ಹೋರಿ, ಮಿಶ್ರತಳಿ ಜೋಡಿ ಎತ್ತುಗಳು, ಜರ್ಸಿ ಹಸುಗಳು, ಕಡಸುಗಳು, ಕರುಗಳು, ಹೆಚ್.ಎಫ್.ಹಸುಗಳು, ಕಡಸುಗಳು, ಕರುಗಳು, ಜೋಡಿ ಹಳ್ಳಿಕಾರ್ ಕಡಸುಗಳು, ಹಾಲು ಕುಡಿಯುವ ಹಳ್ಳಿಕಾರ್ ಕರುಗಳು, ಬೀಜದ ಕೋಣ, ಮಿಶ್ರತಳಿ ಹಸುಗಳು, ಕಡಸುಗಳು, ನಾಟಿ ಹಸು, ಕರು, ಕಡಸುಗಳ ವಿಭಾಗ ರಚಿಸಿ ಪಶುವೈದ್ಯಾಧಿಕಾರಿಗಳ ತಂಡ ಪರಿಶೀಲಿಸಿ ಆಯ್ಕೆಗೊಳಿಸಿದರು. ಸಾಕುಪ್ರಾಣಿಗಳ ಪ್ರದರ್ಶನ ಮತ್ತು ಆಯ್ಕೆ ನಡೆಯಿತು. ಪಶುಪಾಲನ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ.ಬಾದಾಮಿ, ಪಶುವೈದ್ಯಾಕಾರಿಗಳಾದ ಚೆಟ್ಟಳ್ಳಿಯ ಡಾ.ಸಂಜೀವಕುಮಾರ್ ಶಿಂಧೆ, ಕುಶಾಲನಗರದ ಡಾ.ಶ್ರೀದೇವ್, ಜಾನುವಾರು ಅಧಿಕಾರಿ ಮತ್ತು ಪರೀಕ್ಷಕರಾದ ರಾಜ್‍ಕುಮಾರ್, ಸುರೇಶ್ ರಾಸುಗಳನ್ನು ರಾಸುಗಳ ಆಯ್ಕೆ ಪ್ರಕ್ರಿಯೆ ನಡೆಸಿದರು.
ವಿವಿಧ ತಳಿಗಳ ನಾಯಿಗಳು, ಕುರಿ, ಟಗರು, ಮೊಲ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಸಾಕು ಪ್ರಾಣಿಗಳ ವಿಭಾಗದಲ್ಲಿ ಮುಧೋಳ್, ಜರ್ಮನ್ ಶೆಫರ್ಡ್, ಪಗ್, ರಾಟ್‍ವೀಲರ್, ಲಾಶಾಪ್ಸೊ ತಳಿಗಳು ಸೇರಿದಂತೆ ಸಾಮಾನ್ಯ ಜಾತಿಯ ನಾಯಿಗಳ ಪ್ರದರ್ಶನ ನೆರೆದಿದ್ದ ಜನರನ್ನು ಆಕರ್ಷಿಸಿತು.

ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿಜೇತ ರಾಸುಗಳು, ಸಾಕು ಪ್ರಾಣಿಗಳ ಮಾಲೀಕರಿಗೆ ದೇವಾಲಯ ಸಮಿತಿ ವತಿಯಿಂದ ಬಹುಮಾನ ವಿತರಣೆ ನಡೆಯಿತು.

ಈ ಸಂದರ್ಭ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಎಸ್.ಕೆ.ಶ್ರೀನಿವಾಸರಾವ್, ಎಂ.ಕೆ.ದಿನೇಶ್, ಅಮೃತ್‍ರಾಜ್, ವಿ.ಡಿ.ಪುಂಡರೀಕಾಕ್ಷ, ಎಚ್.ಎನ್.ರಾಮಚಂದ್ರ, ಡಿ.ಅಪ್ಪಣ್ಣ, ವೈ.ಆರ್.ನಾಗೇಂದ್ರ, ಪ್ರಮುಖರಾದ ಕೆ.ಎನ್.ದೇವರಾಜ್, ಎಸ್.ಎನ್.ನರಸಿಂಹಮೂರ್ತಿ, ಎಂ.ವಿ.ನಾರಾಯಣ ಮತ್ತಿತರರು ಹಾಜರಿದ್ದರು.

See also  ರಾಜ್ಯಪಾಲರನ್ನು ಭೇಟಿ ಮಾಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು