News Kannada
Tuesday, September 27 2022

ಕರ್ನಾಟಕ

ಗುಂಡ್ಲುಪೇಟೆಯಲ್ಲಿ ರಸ್ತೆ ಅವಘಡ: ಮೂವರು ಸಾವು - 1 min read

Photo Credit :

ಗುಂಡ್ಲುಪೇಟೆಯಲ್ಲಿ ರಸ್ತೆ ಅವಘಡ: ಮೂವರು ಸಾವು

ಗುಂಡ್ಲುಪೇಟೆ: ಲಾರಿ ಮತ್ತು  ಟಿವಿಎಸ್‍ ಎಕ್ಸೆಲ್ ಮೊಪೆಡ್ ನಡುವೆ ಡಿಕ್ಕಿ ಸಂಭವಿಸಿ ಲಾರಿ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಮತ್ತು ಮೊಪೆಡ್‍ನಲ್ಲಿದ್ದ ಇಬ್ಬರು ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿರುವ ಲಾರಿ ಕ್ಲೀನರ್‍ನ್ನು ಆಸ್ಪತ್ರೆಗೆ ದಾಖಲಿಸಲಾಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ  ಮೇಲುಕಾಮನಹಳ್ಳಿ ಬಳಿ ನಡೆದಿದೆ.

ತಾಲೂಕಿನ ಶಿವಪುರ ಗ್ರಾಮದ ನಿವಾಸಿ, ಟಿವಿಎಸ್‍ ಎಕ್ಸೆಲ್ ಮೊಪೆಡ್ ಸವಾರರಾದ ಕಾಳಪ್ಪ,(60) ಶಿವಪ್ಪ (67) ಹಾಗೂ ಲಾರಿ ಚಾಲಕ ಮೃತಪಟ್ಟವರು. ಇನ್ನು ಗಂಭೀರ ಗಾಯಗೊಂಡಿರುವ ಕ್ಲೀನರ್ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಳಪ್ಪ ಮತ್ತು ಶಿವಪ್ಪ ಅವರು ಶಿವಪುರ ಗ್ರಾಮದಿಂದ ಜಕ್ಕಹಳ್ಳಿ ಸಂಬಧಿಕರ ಮನೆಗೆ ಟಿವಿಎಸ್‍ಎಕ್ಸೆಲ್ ಮೊಪೆಡ್‍ನಲ್ಲಿ ತೆರಳುತ್ತಿದ್ದರು ಎನ್ನಲಾಗಿದ್ದು ಇದೇ ವೇಳೆ ಊಟಿಯಿಂದ ಮೈಸೂರಿಗೆ ತೆರಳುತ್ತಿದ್ದ ಶೀಟ್ ತುಂಬಿದ ಲಾರಿ ಎದುರಾಗಿದ್ದು ಈ ವೇಳೆ ಡಿಕ್ಕಿ ಸಂಭವಿಸಿ ಲಾರಿ ಉರುಳಿ ಹಳ್ಳಕ್ಕೆ ಬಿದ್ದಿದ್ದರಿಂದ ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿ ಚಾಲಕನನ್ನು ಹೊರ ತೆಗೆಯಲಾಯಿತಾದರೂ ಆತ ಅಷ್ಟರಲ್ಲೇ ಸಾವನ್ನಪ್ಪಿದ್ದನು. ಮೊಪೆಡ್ ಸವಾರರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಕ್ಲೀನರ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತ ಲಾರಿ ಚಾಲಕನ ಬಗ್ಗೆ ಇನ್ನಷ್ಟೆ ಮಾಹಿತಿ ತಿಳಿದು ಬರಬೇಕಿದೆ.

ಘಟನಾ ಸ್ಥಳಕ್ಕೆ ಡಿ.ವೈ.ಎಸ್.ಪಿ. ಮೋಹನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಕೇವಲ ಸರ್ಕಾರವಲ್ಲ, ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸೋಣ: ಚಿತ್ರನಟಿ ಶೃತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು