ಕೆ.ಆರ್.ಪೇಟೆ: ಕೆ.ಆರ್.ಪೇಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರಿಗೆ ಸೇರಿದ ಸಾವಿರಾರು ಸೀರೆಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡು ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ತಾಲೂಕಿನ ಸಾಕ್ಷಿಬೀಡು ಬಳಿ ನಡೆದಿದೆ.
ತಾಲೂಕಿನ ಸಾಕ್ಷಿಬೀಡು ಗ್ರಾಮದ ಬಳಿ (ಕೆ.ಎ.05, ಎಂ.ಇ.0599) ಮಾರುತಿ ಓಮ್ನಿ ಕಾರಿನಲ್ಲಿ ಚಾಲಕ ವೆಂಕಟರೆಡ್ಡಿ ಮತ್ತು ಸಾಗಿಸುತ್ತಿದ್ದ ನಾರಾಯಣಗೌಡ ಅವರ ಫೋಟೋದೊಂದಿಗೆ ದೀಪಾವಳಿ ಶುಭಾಶಯ ಕೋರುವ ಸುಮಾರು ಸಾವಿರಾರು ಸೀರೆಯುಳ್ಳ ಬಂಡಲ್ ಗಳನ್ನು ಚುನಾವಣಾ ತಪಾಸಣಾಧಿಕಾರಿ ಅಶೋಕ್ ನೇತೃತ್ವದ ಅಧಿಕಾರಿಗಳು ವಶಪಡಿಕೊಂಡಿದ್ದಾರೆ ಹಾಗೂ ಕಾರನ್ನು ಚಾಲನೆ ಮಾಡುತ್ತಿದ್ದ ವೆಂಕಟರೆಡ್ಡಿ ಹಾಗೂ ಸಹಾಯಕ ಕುಮಾರ್ ಎಂಬುವವರನ್ನು ಸೀರೆಗಳ ಬಂಡಲ್ ಸಮೇತ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ.
ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಶಿವಕುಮಾರ್ ಯಾದವ್ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.