News Kannada
Friday, March 24 2023

ಕರ್ನಾಟಕ

ಮಡಿಕೇರಿ ಕೋಟೆಯಲ್ಲಿ ಗಮನ ಸೆಳೆಯುತ್ತಿರುವ ಹಳೇ ನೋಟು, ನಾಣ್ಯಗಳ ಪ್ರದರ್ಶನ

Photo Credit :

ಮಡಿಕೇರಿ ಕೋಟೆಯಲ್ಲಿ ಗಮನ ಸೆಳೆಯುತ್ತಿರುವ ಹಳೇ ನೋಟು, ನಾಣ್ಯಗಳ ಪ್ರದರ್ಶನ

ಮಡಿಕೇರಿ: ವಿಶ್ವ ಪಾರಂಪರಿಕ ಸಪ್ತಾಹ ಪ್ರಯುಕ್ತ ಮೂರು ದಿನಗಳ ಕಾಲ ಏರ್ಪಡಿಸಿರುವ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಪಿ.ಕೆ.ಕೇಶವ ಮೂರ್ತಿ ಅವರು ಸಂಗ್ರಹಿಸಿರುವ ಹಳೇ ನೋಟುಗಳು ಹಾಗೂ ನಾಣ್ಯಗಳ 147ನೇ ಪ್ರದರ್ಶನಕ್ಕೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೆಕರ್ ಅವರು ಶುಕ್ರವಾರ ಚಾಲನೆ ನೀಡಿದರು.

ನಗರದ ಕೋಟೆ ಆವರಣದಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಹಾಗೂ ಕೋಟೆಯಲ್ಲಿ ಏರ್ಪಡಿಸಿರುವ ಕೊಡಗು ಜಿಲ್ಲೆಯ ಐತಿಹಾಸಿಕ ಮತ್ತು ಪಾರಂಪರಿಕ ಕಟ್ಟಡಗಳ ಛಾಯಾಚಿತ್ರ ಪ್ರದರ್ಶನವನ್ನು ಎಸ್‍ಪಿ ಉದ್ಘಾಟಿಸಿದರು.

ಪ್ರದರ್ಶನದಲ್ಲಿ ಮೈಸೂರು ಒಡೆಯರು, ಬಹುಮನಿ ಸುಲ್ತಾನರು, ಕುಶಾನರು, ಶಾತವಾಹನರು, ಪಾಂಡ್ಯರು, ಮೊಘಲರ ಕಾಲದ ನಾಣ್ಯಗಳು, ವಿವಿಧ ರಾಷ್ಟ್ರಗಳ ನೋಟುಗಳು ವಸ್ತು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.

ಪಿ.ಕೆ.ಕೇಶವ ಮೂರ್ತಿ ಅವರು ಅಪರೂಪದ ನಾಣ್ಯ ನೋಟುಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುತ್ತಿರುವುದು ವಿಶೇಷವಾಗಿದೆ. 1992 ರಲ್ಲಿ ನಗರದಲ್ಲಿ ಆರಂಭಿಸಿದ ಮೊದಲ ಪ್ರದರ್ಶನವು ಈಗ 147ನೇ ಪ್ರದರ್ಶನ ಕಾಣುತ್ತಿರುವುದು ವಿಶೇಷವಾಗಿದೆ.

ಹುಣಸೂರು ನಾಣ್ಯ ಶಾಸ್ತ್ರಜ್ಞರು ಮತ್ತು ಸಂಗ್ರಹಕಾರರಾದ ಪಿ.ಕೆ.ಕೇಶವ ಮೂರ್ತಿ ಅವರ 147 ನೇ ಪ್ರಾಚೀನ ನಾಣ್ಯ ಮತ್ತು ನೋಟುಗಳ ಪ್ರದರ್ಶನದಲ್ಲಿ ಕ್ರಿಸ್ತ ಪೂರ್ವ 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್ ಮಾರ್ಕ್ ನಾಣ್ಯಗಳು, ಗ್ರೀಕ್, ರೋಮನ್, ಕುಶಾನರು, ಗುಪ್ತ ನಾಣ್ಯಗಳು, ಶಾತವಾಹನರು, ಕದಂಬ, ಚೋಳ, ಪಾಂಡ್ಯ ಮುಂತಾದ ಪ್ರಾಚೀನ ಭಾರತದ ನಾಣ್ಯಗಳು, ಮೊಘಲ್ ಸಾಮ್ರಾಜ್ಯದ ಅಕ್ಬರ್, ಜಾಹಂಗೀರ್, ಷಹಜಹಾನ್, ಔರಂಗಜೇಬ್‍ರ ನಾಣ್ಯಗಳು, ವಿಜಯನಗರ ಸಾಮ್ರಾಜ್ಯದ ಕೃಷúದೇವರಾಯ, ಅಚ್ಚುತರಾಯ, ಪ್ರತಾಪ ದೇವರಾಯರ ನಾಣ್ಯಗಳು, ಮೈಸೂರು, ಬಿಜಾಪುರ ತಿರುವಾಂಕೂರು, ಹೈದರಾಬಾದ್, ಕಛ್, ಬರೋಡ, ಗ್ವಾಲಿಯರ್, ಮೇವಾರ ಮುಂತಾದ ಭಾರತೀಯ ರಾಜ್ಯ ಸಂಸ್ಥಾನಗಳ ನಾಣ್ಯಗಳು, ಸ್ವಾತಂತ್ರ್ಯ ಪೂರ್ವದ ಬ್ರಿಟೀಷ್, ಪೋರ್ಚ್‍ಗೀಸರ ಮತ್ತು ಸ್ವಾತಂತ್ರ್ಯ ಭಾರತದ ನಾಣ್ಯ, ನೋಟುಗಳು, ಸ್ಮರಣಾರ್ಥ ಬಿಡುಗಡೆಯಾದ 100, 50, 20, 10 ರೂ.ಗಳ ನಾಣ್ಯಗಳು, ಚಲಾವಣೆಯಿಂದ ಹಿಂತೆಗೆದುಕೊಂಡ ಸಾವಿರ ರೂಪಾಯಿ ನೋಟುಗಳು, ನೂರಾರು ದೇಶ-ವಿದೇಶಗಳ ನಾಣ್ಯಗಳು, ತಾಮ್ರ, ಚಿನ್ನ, ಬೆಳ್ಳಿ, ಸೀಸ ಹಾಗೂ ಹಿತ್ತಾಳೆ ಮುಂತಾದ ಲೋಹಗಳ ನಾಣ್ಯಗಳು, ನೂರಾರು ದೇಶ-ವಿದೇಶದಿಂದ ಮಾಡಿದ ನೋಟುಗಳು, ಇತ್ತೀಚಿನ ಪ್ಲಾಸ್ಟಿಕ್ ನೋಟುಗಳು, ನೂರಾರು ವರ್ಷಗಳ ಹಿಂದಿನ ಛಾಪಾ ಕಾಗದಗಳು ಮತ್ತಿತರವನ್ನು ವೀಕ್ಷಿಸಬಹುದಾಗಿದೆ.

ಕ್ರಿ.ಶ.1730 ರಿಂದ ಕ್ರಿ.ಶ.1907 ಕಾಲಕ್ಕೆ ಸೇರಿದ ಕೊಡಗು ಜಿಲ್ಲೆಯ ವಿವಿಧ ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳು ಮತ್ತು ಕಟ್ಟಡಗಳ ಛಾಯಾಚಿತ್ರಗಳ ಪ್ರದರ್ಶನವನ್ನು ನಾಣ್ಯ ಸಂಗ್ರಹಕಾರರಾದ ಡಾ.ಎಂ.ಜಿ. ಪಾಟ್ಕಾರ್‍ರವರು ಉದ್ಘಾಟಿಸಿದ್ದರು. ಡಾ.ಜಯಲಕ್ಷ್ಮಿ ಪಾಟ್ಕಾರ್ ಮತ್ತು ಸರ್ಕಾರಿ ವಸ್ತ್ತುಸಂಗ್ರಹಾಲಯದ ಕ್ಯೂರೇಟರ್ ರೇಖಾ ಮತ್ತು ಇತರರು ಪಾಲ್ಗೊಂಡಿದ್ದರು.

ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆಗೆ ಹಳೇ ನಾಣ್ಯಗಳು ಹಾಗೂ ಕೊಡಗಿನ ಹಳೇ ನಾಣ್ಯಗಳನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು.

See also  ದತ್ತಾಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು: ಹಿಂದೂಪರ ಸಂಘಟನೆಗಳ ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು