News Kannada
Thursday, September 29 2022

ಕರ್ನಾಟಕ

ಸಂತೆ ಸ್ಥಳಾಂತರ ವಿರೋಧಿಸಿ ರೈತರ ಪ್ರತಿಭಟನೆ - 1 min read

Photo Credit :

ಸಂತೆ ಸ್ಥಳಾಂತರ ವಿರೋಧಿಸಿ ರೈತರ ಪ್ರತಿಭಟನೆ

ಮದ್ದೂರು: ಪಟ್ಟಣದ ಶ್ರೀ ಉಗ್ರನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಯನ್ನು ಹಳೇ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿ ಇಲ್ಲಿನ ವ್ಯಾಪಾರಿಗಳು ಹಾಗೂ ರೈತರು ಅಧಿಕಾರಿಗಳ ವಿರುದ್ಧ ಮಂಗಳವಾರ ಪ್ರತಿಭಟನೆ ಮಾಡಿದರು.

ಸಂತೆ ಸ್ಥಳಾಂತರ ಮಾಡಲು ಮುಂದಾಗಿರುವ ಪುರಸಭಾ ಅಧಿಕಾರಿಗಳ ಕ್ರಮ ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ರೈತರು ಹಾಗೂ ವ್ಯಾಪಾರಿಗಳು ಯವುದೇ ಕಾರಣಕ್ಕೆ ಬೇರೆ ಕಡೆ ಸಂತೆ ಮಾಡಲು ಮಾಡುವುದಿಲ್ಲ. ಬೇರೆ ಕಡೆ ಸಂತೆ ಮಾಡಿದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸುಮಾರು 20 ವರ್ಷಗಳಿಂದ ಸಂತೆ ಮಾಡುತ್ತಿದ್ದು, ನಮ್ಮಿಂದ ಇಲ್ಲಿ ಯಾರಿಗೂ ತೊಂದರೆಯಾಗುತ್ತಿಲ್ಲ. ಜತೆಗೆ ಇಲ್ಲಿ ಮರದ ನೆರಳು, ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯ ಇದೆ. ಬಸ್ ನಿಲ್ದಾಣದಲ್ಲಿ ಸಂತೆ ಮಾಡಿದರೆ ಅಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯ ಇಲ್ಲ, ಬಿಸಿಲಿನಲ್ಲಿ ತರಕಾರಿಗಳನ್ನು ಇಟ್ಟರೆ ಅವು ಒಣಗಿ ಹೋಗುತ್ತವೆ. ಆದ್ದರಿಂದ ಅಲ್ಲಿ ಸಂತೆ ನಡೆಸುವುದು ಅಸಾಧ್ಯ ಎಂದು ತಿಳಿಸಿದರು.

ನಂತರ ಸಂತೆ ಆವರಣದಿಂದ ತರಕಾರಿಗಳನ್ನು ವಾಹನಗಳ ಸಮೇತ ತಾಲೂಕು ಕಚೇರಿಗೆ ಆವರಣ ತಂದು ಸಂತೆಯನ್ನು ಬೇರೆ ಕಡೆಗೆ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿ ಕೆಲಕಾಲ ತಾಲೂಕು ಕಚೇರಿಗೆ ಆವರಣದಲ್ಲಿ ಪ್ರತಿಭಟನೆ ಮಾಡಿದರು.

See also  ಆಫ್ರಿಕನ್ ಕ್ಯಾಟ್ ಫಿಶ್ ಮಾರಾಟ ಅಪರಾಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು