News Kannada
Thursday, September 29 2022

ಕರ್ನಾಟಕ

ಕಾಂಗ್ರೆಸ್ ಆಯೋಜಿಸಿದ ಸಂವಿಧಾನ ದಿನಾಚರಣೆಗೆ ಕಾಂಗ್ರೆಸ್ಸಿಗರೇ ಗೈರು! - 1 min read

Photo Credit :

ಕಾಂಗ್ರೆಸ್ ಆಯೋಜಿಸಿದ ಸಂವಿಧಾನ ದಿನಾಚರಣೆಗೆ ಕಾಂಗ್ರೆಸ್ಸಿಗರೇ ಗೈರು!

ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ರಾಜೀವ್  ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮಡಿಕೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ಸಿಗರೇ ಗೈರಾದ ಪ್ರಸಂಗ ನಡೆಯಿತು.

ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಚಾಲಕ ತೆನ್ನೀರ ಮೈನಾ ಮಾತನಾಡಿ, ಸಂವಿಧಾನ ದಿನಾಚರಣೆಗೆ ಕಾಂಗ್ರೆಸ್ಸಿಗರೇ ಅತ್ಯಲ್ಪ ಸಂಖ್ಯೆಯಲ್ಲಿ ಬಂದಿರುವುದು ನಿರಾಶೆ ಮೂಡಿಸಿದೆ. ದಿಲ್ಲಿಯಿಂದ ಮುಂಜಾನೆ ಹೊರಟು ಮಡಿಕೇರಿಗೆ ಬ್ರಿಜೇಶ್ ಕಾಳಪ್ಪ ತಲುಪಿದ್ದಾರೆ. ಆದರೆ, ಮಡಿಕೇರಿ ವ್ಯಾಪ್ತಿಯಲ್ಲಿರುವ ಕಾಂಗ್ರೆಸ್ಸಿಗರೇ ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮಮಟ್ಟದಲ್ಲಿಯೂ ಸಂವಿಧಾನದ ಅರಿವಿನ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸುವುದಾಗಿಯೂ ತೆನ್ನೀರ ಮೈನಾ ಹೇಳಿದರು.

ಬಿಜೆಪಿ ದೇಶದ ಪ್ರಜಾತಂತ್ರಕ್ಕೆ ಕಪ್ಪುಚುಕ್ಕೆ: ಬ್ರಿಜೇಶ್ ಕಾಳಪ್ಪ

ಮಹಾರಾಷ್ಟ್ರದಲ್ಲಿ ನಡುರಾತ್ರಿ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಬಿಜೆಪಿಯು ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿರುವುದು ಸ್ಪಷ್ಟವಾಗಿದ್ದು, ಲೂಟಿಕೋರರಂತೆ ರಾತ್ರಿ ಅಧಿಕಾರ ಹಿಡಿಯುವ ಮೂಲಕ ದೇಶದ ಪ್ರಜಾತಂತ್ರಕ್ಕೇ ಕಪ್ಪು ಚುಕ್ಕೆ ತಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ  ಬಿಜೆಪಿಯ ವಿರುದ್ಧ ಕಿಡಿ ಕಾರಿದ್ದಾರೆ.

ಮಡಿಕೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಂಯುಕ್ತಾಶ್ರಯದಲ್ಲಿ ಆಯೋಜಿತ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ,  ಮಹಾರಾಷ್ಟ್ರದಲ್ಲಿ ನಡುರಾತ್ರಿ 11 ಗಂಟೆಗೆ ರಾಜಕೀಯ ಪ್ರಕ್ರಿಯೆಗಳು ನಡೆದಿದೆ. ಮುಂಜಾನೆ ವೇಳೆ ಸರ್ಕಾರ ರಚಿಸಲು ರಾಜ್ಯಪಾಲರು ಆದೇಶ ನೀಡಿದ್ದಾರೆ. ಅಂತೆಯೇ ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪದಗ್ರಹಣ ಕೈಗೊಂಡಿದ್ದಾರೆ. ಭಾರತದಂಥ ಪ್ರಜಾತಂತ್ರಕ್ಕೆ ವಿಶ್ವದಲ್ಲಿಯೇ ಹೆಸರಾದ ದೇಶದಲ್ಲಿ ಈ ರೀತಿ ರಾತ್ರೋರಾತ್ರಿ ಸರ್ಕಾರ ರಚಿಸುವ ಜರೂರತ್ತೇನಿತ್ತು. ಮಧ್ಯರಾತ್ರಿ ಕಾರ್ಯಾಚರಣೆ ನಡೆಸುವವರು ದರೋಡೆಕೋರರು, ಲೂಟಿಕೋರರು, ಕಳ್ಳರಾಗಿದ್ದಾರೆ. ತಾವೂ ಕೂಡ ಇವರಿಗಿಂತ ಕಡಮೆಯಿಲ್ಲ ಎಂದು ಬಿಜೆಪಿ ಮುಖಂಡರು ಮಹಾರಾಷ್ಟ್ಪ ಪ್ರಕರಣದಲ್ಲಿ ನಿರೂಪಿಸಿದ್ದಾರೆ ಎಂದೂ ಬ್ರಿಜೇಶ್ ಆರೋಪಿಸಿದರು.

 ಸುಪ್ರಿಂಕೋರ್ಟ್ ತನ್ನ ನಡಾವಳಿಗೆ ಛಿಮಾರಿ ಹಾಕೀತು ಎಂಬ ಯೋಚನೆಯನ್ನಾದರೂ ಮಹಾರಾಷ್ಟ್ರ ರಾಜ್ಯಪಾಲರು ಮಾಡಬೇಕಿತ್ತು. ಆದರೆ ಅಧಿಕಾರ ನೀಡುವ ಮಹಾದಾಸೆಯಿಂದ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಬಿಜೆಪಿಗೆ ಅಧಿಕಾರವನ್ನು ನಿಯಮ ಮೀರಿ ನೀಡಿದ್ದಾರೆ. ಇದೀಗ ಸುಪ್ರಿಂಕೋರ್ಟ್ ಆ ರಾಜ್ಯದ ಸಂರಕ್ಷಣೆಗೆ ಬಂದಿರುವುದು ಸ್ವಾಗತಾರ್ಹ ಎಂದೂ ಬ್ರಿಜೇಶ್ ಹೇಳಿದರು.

See also  ಪರಸ್ತ್ರೀಗೆ ಮುತ್ತಿಡುವ ದೃಶ್ಯ ವಾಟ್ಸ್‌ ಅಪ್‌ ಸ್ಟೇಟಸ್‌ ಗೆ ಹಾಕಿ ಪ್ರಾಣ ಕಳೆದುಕೊಂಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು