ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯನ್ನು ಖಂಡಿಸಿ ಕಾಸರಗೋಡು – ತಲಪಾಡಿ ನಡುವೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಖಾಸಗಿ ಬಸ್ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ.
ಮಂಗಳವಾರ ಕಾಸರಗೋಡು ಸರಕಾರಿ ಅತಿಥಿ ಗೃಹದಲ್ಲಿ ಮಂಜೇಶ್ವರ ಶಾಸಕ ಎಂ .ಸಿ ಖಮರುದ್ದೀನ್ ಸುಮ್ಮುಖದಲ್ಲಿ ನಡೆದ ಸಭೆಯಲ್ಲಿ ಲಭಿಸಿದ ಭರವಸೆಯಂತೆ ಮುಷ್ಕರ ಹಿಂದೆಗೆದುಕೊಳ್ಳಲು ತೀರ್ಮಾನಿಸಲಾಯಿತು.
ಗುತ್ತಿಗೆದಾರ ಶರೀಫ್ ಬೇರ್ಕ, ಬಸ್ ಮಾಲಕರ ಪ್ರತಿನಿಧಿಗಳಾದ ಕೆ. ಗಿರೀಶ್, ಶಂಕರ ನಾಯ್ಕ್, ಎನ್ . ಎಂ. ಹುಸೈನಾರ್ , ಮುಹಮ್ಮದ್ ಕುಂಞ, ಪಿ .ಎ ಸುಬ್ಬಣ್ಣ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಡಿಸೆಂಬರ್ 15ರೊಳಗೆ ತಲಪಾಡಿಯಿಂದ ಕಾಸರಗೋಡು ತನಕ ರಸ್ತೆ ಡಾಮರೀಕರಣ ಗೊಳಿಸುವ ಬಗ್ಗೆ ಲಭಿಸಿದ ಭರವಸೆಯಂತೆ ಮುಷ್ಕರವನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಲಾಯಿತು.