ಚಾಮರಾಜನಗರ: ಜ್ವರದಿಂದ ಬಳಲುತ್ತಿದ್ದ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಉಯಿಲನತ್ತ ಗ್ರಾಮದಲ್ಲಿ ನಡೆದಿದ್ದು, ಡೆಂಗ್ಯೂ ರೋಗದ ಶಂಕೆ ವ್ಯಕ್ತವಾಗಿದೆ.
ಹನೂರು ತಾಲೂಕಿನ ಉಯಲನತ್ತ ಗ್ರಾಮದ ಗೀತಾ(21) ಶಂಕಿತ ಡೆಂಗ್ಯೂಗೆ ಬಲಿಯಾದ ಯುವತಿಯಾಗಿದ್ದಾಳೆ.
ಈಕೆ ಕಳೆದ ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಳು. ಮನೆಯವರು ಮಾಮೂಲಿ ಜ್ವರವೆಂದು ಮಾತ್ರೆ ನುಂಗುತ್ತಾ ತೆಪ್ಪಗಾಗಿದ್ದರು. ಆದರೆ ಜ್ವರ ಉಲ್ಭಣಗೊಂಡು ಸಾವನ್ನಪ್ಪಿದ್ದಾಳೆ ಇದ್ದಕ್ಕಿದ್ದಾಗೆ ಜ್ವರದಿಂದ ಸಾವನ್ನಪ್ಪಿರುವುದರಿಂದ ಡೆಂಗ್ಯೂನಿಂದ ಸಾವನ್ನಪ್ಪಿರ ಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈಗಾಗಲೇ ಉಯಲಿನತ್ತ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿದ್ದು, ಡೆಂಗ್ಯೂ ಆಗಿರಬಹುದಾ ಎಂಬ ಸಂಶಯ ಜನರನ್ನು ಕಾಡುತ್ತಿದೆ.
ಆದರೆ ಈ ಬಗ್ಗೆ ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ಜತೆಗೆ ಜೀವ ಭಯದ ಭೀತಿಯಲ್ಲಿರುವ ಗ್ರಾಮಸ್ಥರು, ತಮ್ಮ ಅಳಲು ತೋಡಿಕೊಂಡಿದ್ದಾರೆ.