ಕಾಸರಗೋಡು: ಸ್ಕೂಟರ್ ಮತ್ತು ಪಿಕಪ್ ವ್ಯಾನ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಸವಾರ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಆರಿಕ್ಕಾಡಿ ಗುಡ್ಡೆಯ ಮುಹಮ್ಮದ್ ಶರೀಫ್ ( 34) ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಗ್ಗೆ ಬಂದ್ಯೋಡು ಸಮೀಪದ ಅಡ್ಕ ಎಂಬಲ್ಲಿ ಅಪಘಾತ ನಡೆದಿತ್ತು .
ಶರೀಫ್ ಅವರು ತನ್ನ ಪತ್ನಿ ಮನೆಯಿಂದ ನಾದಿನಿ ಮುನೀರಾ ಜೊತೆ ಬಂದ್ಯೋಡು ಕಡೆಗೆ ಬರುತ್ತಿದ್ದಾಗ ಅಪಘಾತ ನಡೆದಿದ್ದು , ಶರೀಫ್ ಗಂಭೀರ ಗಾಯಗೊಂಡಿದ್ದರು. ಅಪಘಾತದಲ್ಲಿ ಮುನೀರಾ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.