ಮಡಿಕೇರಿ: ವಿರಾಜಪೇಟೆ ಪಟ್ಟಣದ ಪಂಜರುಪೇಟೆ ಬಸ್ ತಂಗುದಾಣದಲ್ಲಿ ವಿನಾಶದಂಚಿನಲ್ಲಿರುವ ವಿಶೇಷ ಆಮೆಯೊಂದನ್ನು ಮಾರಾಟ ಮಾಡಲು ಯತ್ನಸುತ್ತಿದ್ದ ವ್ಯಕ್ತಿಯನ್ನು ವಿರಾಜಪೇಟೆ ಸಿಐಡಿ ಅರಣ್ಯ ಸಂಚಾರಿದಳ ಬಂಧಿಸಿದೆ.
ಭಾಗಮಂಡಲದ ನಿವಾಸಿ ಮಹೇಶ ಎಂಬಾತನೇ ಬಂಧಿತ ಆರೋಪಿ. ರಾತ್ರಿ ವೇಳೆ ಆಮೆಯನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಸಂದರ್ಭ ಸಿಐಡಿ ಅರಣ್ಯ ಸಂಚಾರಿದಳದ ಪೊಲೀಸರು ವಶಕ್ಕೆ ಪಡೆದರು. ಆದರೆ ಕಾರ್ಯಾಚರಣೆ ಸಂದರ್ಭ ದೂರದಲ್ಲಿ ಹೊಂಚು ಹಾಕುತ್ತಿದ್ದ ಪೊನ್ನಂಪೇಟೆ ಹಳ್ಳಿಗಟ್ಟು ನಿವಾಸಿಗಳಾದ ಉಮೇಶ್ ಹಾಗೂ ರವಿ ಕಾರು ಸಹಿತ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಿಐಡಿ ಅರಣ್ಯ ಸಂಚಾರಿದಳ ಎಸ್‍ಪಿ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.