News Kannada
Wednesday, October 05 2022

ಕರ್ನಾಟಕ

ಮಡಿಕೇರಿಯಲ್ಲಿ ವಿನೂತನ ಆಹಾರ ಮೇಳ: ಯುವ ಬಾಣಸಿಗರಿಂದ ಸ್ವಾದಿಷ್ಟ ತಯಾರಿಕೆ - 1 min read

Photo Credit :

ಮಡಿಕೇರಿಯಲ್ಲಿ ವಿನೂತನ ಆಹಾರ ಮೇಳ: ಯುವ ಬಾಣಸಿಗರಿಂದ ಸ್ವಾದಿಷ್ಟ ತಯಾರಿಕೆ

ಮಡಿಕೇರಿ: ಫ್ರಾನ್ಸ್, ಅಮೇರಿಕಾ, ರಷ್ಯಾ ಸೇರಿದಂತೆ ವಿವಿಧ ದೇಶಗಳ ವಿಶಿಷ್ಟ ಖಾದ್ಯಗಳು.. ಕೊಡಗಿನ ವಿಭಿನ್ನ ತಿನಿಸುಗಳು… ಒಂದಕ್ಕಿಂತ ಒಂದು ವಿನೂತನ ಆಹಾರ ಪದಾರ್ಥಗಳು…. ಬಾಯಿಯಲ್ಲಿ ನೀರುರಿಸುವಂಥ ವೈವಿಧ್ಯಮಯ ಖಾದ್ಯ ವೈಭವ ಮಡಿಕೇರಿಯಲ್ಲಿ ಗಮನ ಸೆಳೆಯಿತು.

ಕೊಡಗಿನಲ್ಲಿರುವ ಏಕೈಕ ಹೋಟೇಲ್ ಮ್ಯಾನೇಜ್ ಮೆಂಟ್ ಕಾಲೇಜು ಮಡಿಕೇರಿಯ ಕೂರ್ಗ್ ಇನ್ಸ್ ಟಿಟ್ಯೂಟ್ ಆಫ್ ಹಾಸ್ಟಿಟಾಲಿಟಿ ಸೈನ್ಸ್ ವತಿಯಿಂದ ಆಯೋಜಿತವಾಗಿದ್ದ ಆಹಾರ ಮೇಳ -2019ರಲ್ಲಿ ಇಂಥ ಹಲವು ವೈವಿಧ್ಯಮಯ ಖಾದ್ಯಗಳ ರುಚಿ ಸಂದರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಕಾಲೇಜಿನ ವಿದ್ಯಾಥಿ9ಗಳು ತಾವು ಕಲಿತ ಖಾದ್ಯ ತಯಾರಿಕೆ ವಿದ್ಯೆಯನ್ನು ಆಹಾರ ಮೇಳದಲ್ಲಿ ಪ್ರದರ್ಶಿಸಿದರು. ಜಿಲ್ಲೆಯ ವಿವಿಧ ಪದವಿ ಪೂವ9 ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರೂ ಬಂದು ತಿನಿಸುಗಳ ಸ್ವಾದ ಸವಿದರು.

ಆಹಾರ ಮೇಳ-2019ರ ಅಂಗವಾಗಿ ಚಿಕನ್, ಮಟನ್, ಮೀನಿನ ವಿವಿಧ ವಿಶೇಷ ತಯಾರಿಕೆಗಳು, ಪಾಸ್ಟಾ, ಕೇಕ್ ಸೇರಿದಂತೆ ಹಲವಾರು ವೈವಿಧ್ಯಮಯ ತಿನಿಸುಗಳನ್ನು ಯಾವುದೇ ವೃತ್ತಿಪರ ಬಾಣಸಿಗರಿಗೆ ಕಮ್ಮಿಯಿಲ್ಲದಂತೆ ವಿದ್ಯಾರ್ಥಿಗಳು ತಯಾರಿಸಿದ್ದರು.

ಆಹಾರ ಮೇಳದ ಬಗ್ಗೆ ಮಾಹಿತಿ ನೀಡಿದ ಹೆಸರಾಂತ  ಬಾಣಸಿಗ ಆದಿತ್ಯ, ಕೂರ್ಗ್ ಇನ್ಸಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸೈನ್ಲ್ ಕಾಲೇಜಿನ ವಿದ್ಯಾರ್ಥಿಗಳು 3 ವರ್ಷಗಳ ಅವಧಿಯಲ್ಲಿ ಕಲಿತ ಖಾದ್ಯ ತಯಾರಿಕಾ ವಿಧಾನಗಳನ್ನು ಈ ಮೂಲಕ ಪ್ರದರ್ಶಿಸಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗದೊಂದಿಗೆ ವೃತ್ತಿ ನಿರತರಾಗಲು ಎಲ್ಲಾ ರೀತಿಯಲ್ಲಿ ಶಕ್ತರಿದ್ದೇವೆ ಎಂದು ಸಾಬೀತು ಪಡಿಸಿದ್ದಾರೆ. ವಿವಿಧ ದೇಶಗಳಿಗೆ ಸೇರಿದ ವಿಶಿಷ್ಟ ಖಾದ್ಯ ತಯಾರಿಕೆ ಮೂಲಕ ಈ ವಿದ್ಯಾಥಿ9ಗಳು ರೆಸಾರ್ಟ್ ನಲ್ಲಿಯೂ ಉದ್ಯೋಗ ಪಡೆಯುವಲ್ಲಿ ಸಫಲರಾಗಲಿದ್ದಾರೆ ಎಂದೂ ಭರವಸೆ ವ್ಯಕ್ತಪಡಿಸಿದರು.

 

 

ಕಾಲೇಜಿನ ಕಾರ್ಯದರ್ಶಿ  ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ಪ್ರಸ್ತುತ 27 ವಿದ್ಯಾರ್ಥಿಗಳು ಕಾಲೇಜಿನಲ್ಲಿದ್ದು, ಪ್ರಸ್ತುತ ಶೈಕ್ಷಣಿಕ ವಷ9ದಲ್ಲಿ 6 ವಿದ್ಯಾರ್ಥಿಗಳು ತರಬೇತಿ ಅವಧಿ ಮುಗಿಸಿ ಬೇರೆ ಬೇರೆ ರೆಸಾರ್ಟ್ ಗಳಲ್ಲಿ ಉದ್ಯೋಗ ಪಡೆಯಲಿದ್ದಾರೆ.  ಬಾಣಸಿಗ ವೃತ್ತಿಯಂತೆಯೇ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿ ಬೇರೆ ಬೇರೆ ರೀತಿಯ ಉದ್ಯೋಗವಕಾಶಗಳೂ ಸಾಕಷ್ಟು ರೀತಿಯಲ್ಲಿ ದೊರಕಲಿದೆ. ಸೂಕ್ತ ತರಬೇತಿ ಪಡೆದ  ವೃತ್ತಿನಿರತರಿಗೆ ಉತ್ತಮ ವೇತನವೂ ದೊರಕಲಿದೆ.  13 ತರಬೇತುದಾರರನ್ನು ಹೊಂದಿರುವ ಕೊಡಗಿನ ಪ್ರಥಮ ಮತ್ತು ಏಕೈಕ ಹೋಟೇಲ್ ಮ್ಯಾನೇಜ್ ಮೆಂಟ್ ಕಾಲೇಜು , ಹೋಟೇಲ್ ಉದ್ಯಮರಂಗದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ ಎಂದರು.

ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿನಲ್ಲಿ ಹೋಟೇಲ್, ರೆಸಾರ್ಟ್ ಗಳಲ್ಲಿ ಬಾಣಸಿಗರಿಗೆ ಸಾಕಷ್ಟು ಬೇಡಿಕೆಯಿದ್ದು ಈ ಬೇಡಿಕೆಯನ್ನು ಪೂರೈಸುವಲ್ಲಿ ಕಾಲೇಜಿನ ವಿದ್ಯಾರ್ಥಿಗಳು  ಸೂಕ್ತ ವೃತ್ತಿಪರ ತರಬೇತಿ ಹೊಂದುತ್ತಿದ್ದಾರೆ.  ಹೊಟೇಲ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಸರ್ಟಿಫೀಕೇಟ್ ಪಡೆದ ವಿದ್ಯಾಥಿ9ಗಳಿಗೆ ಉದ್ಯಮದಲ್ಲಿ ಉತ್ತಮ ವೇತನ ಸಹಿತ ಉದ್ಯೋಗ ದೊರಕುವುದು ಶತಸಿದ್ದ ಎಂದೂ ದಿನೇಶ್ ಕಾರ್ಯಪ್ಪ ಹೇಳಿದರು.  ಕೊಡಗೂ ಸೇರಿದಂತೆ ಕೊಡಗು ಜಿಲ್ಲೆಯ ಪಕ್ಕದ ಜಿಲ್ಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಕಾಲೇಜಿನಲ್ಲಿದ್ದಾರೆ ಎಂದೂ ಹೇಳಿದ ದಿನೇಶ್, ಕೊಡಗಿನ ಯುವಪೀಳಿಗೆ ಈ ಹೊಸ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆಯೂ ಸಲಹೆ ನೀಡಿದರು.  ಹೌಸ್ ಕೀಪಿಂಗ್, ಪ್ರೊಡಕ್ಷನ್, ಫ್ರಂಟ್ ಆಫೀಸ್, ಫುಡ್ ಅಂಡ್ ಬಿವರೆಜ್, ಹೋಟೇಲ್ ಲಾ, ಮಾರ್ಕೆಟಿಂಗ್, ಫೈನಾನ್ಸ್, ಹ್ಯೂಮನ್ ರಿಸೋರ್ಸ್ ವಿಭಾಗಗಳಲ್ಲಿ 3 ವರ್ಷದ  ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

See also  ನಿಖಿಲ್ ಕುಮಾರಸ್ವಾಮಿಯಿಂದ ದೇವೇಗೌಡರಿಗೆ ಸೋಲು: ಕೆ.ಎನ್.ರಾಜಣ್ಣ

 

ಕೂರ್ಗ್ ಇನ್ಸಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸೈನ್ಸ್  ಕಾಲೇಜಿನ ಆಡಳಿತ ಮಂಡಳಿ ಮ್ಯಾನೇಜಿಂಗ್ ಟ್ರಸ್ಟಿ  ನಿರ್ದೇಶಕಿ ಡಾ.ನಿರ್ಮಲಾ ಸೋಮಯ್ಯ , ಅಧ್ಯಕ್ಷ ಮಂಡೆಪಂಡ ರತನ್ ತಮ್ಮಯ್ಯ,  ಉಪಾಧ್ಯಕ್ಷ ಕೇಕಡ ಗಣಪತಿ, ಖಚಾಂಚಿ ಅಪ್ಪಾರಂಡ ವೇಣು, ಟ್ರಸ್ಟಿಗಳಾದ ಕೇಕಡ ಗಣಪತಿ, ತಡಿಯಂಗಡ  ತಿಮ್ಮಯ್ಯ., ತರಬೇತುದಾರರು  ಆಹಾರ ಮೇಳದ ಸಂದರ್ಭ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು