News Kannada
Saturday, October 01 2022

ಕರ್ನಾಟಕ

ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ - 1 min read

Photo Credit :

ಪೋಕ್ಸೋ ಪ್ರಕರಣ: ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಕಾರವಾರ: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರು ಕೋರ್ಟ್‍ನಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಒಟ್ಟು 20 ವರ್ಷ ಜೈಲು ಹಾಗೂ 20 ಸಾವಿರ ರೂ ದಂಡ ವಿಧಿಸಿ, ಆದೇಶ ಹೊರಡಿಸಿದೆ.

ಉತ್ತರ ಕನ್ನಡ ಹಳಿಯಾಳ ತಾಲೂಕಿನ ದುರ್ಗಾನಗರದ ನಿವಾಸಿ ಪರಶುರಾಮ್ ಹೂವಪ್ಪ ಪಾಟೀಲ್ ಅಪ್ರಾಪ್ತ ಬಾಲಕಿಯಾದ 9ನೇ ತರಗತಿ ವಿದ್ಯಾರ್ಥಿನಿ ಮೇಲೆ 2017 ಸೆಪ್ಟೆಂಬರ್ ತಿಂಗಳ 15 ರಂದು ಬಲಾತ್ಕಾರ ಮಾಡಿದ್ದ. ಈ ವಿಷಯ ಯಾರಿಗಾದರೂ ತಿಳಿಸಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದ. ಆ ಬಳಿಕ ಸಾಕಷ್ಟು ಸಲ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ.

ನಂತರ ಬಾಲಕಿ 4 ತಿಂಗಳು ಗರ್ಭಿಣಿಯಾಗಿದ್ದು ಮನೆಯವರಿಗೆ ವಿಷಯ ತಿಳಿದು ಬಂದ ಮೇಲೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಳಿಯಾಳ ಸಿ.ಪಿ.ಐ. ಸುಂದ್ರೇಶ ಕೆ ಹೊಳೆಣ್ಣನವರ ತನಿಖೆ ನಡೆಸಿ ಪ್ರಕರಣ ಸಂಖ್ಯೆ: 26/2018 ರಲ್ಲಿ ಐ.ಪಿ.ಸಿ. ಕಲಂ: 376 (2) (ಎಫ್) (ಐ), 506 ಮತ್ತು ಕಲಂ:6 ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದ್ದರು.

ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ ನ್ಯಾಯಾಲಯವು ಆರೋಪಿತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಐ.ಪಿ.ಸಿ. ಕಲಂ: 376 (2) (ಎಫ್) (ಐ), 506 ಅಡಿಯಲ್ಲಿ 10 ವರ್ಷ ಶಿಕ್ಷೆ ಮತ್ತು 10,000 ದಂಡ ಹಾಗೂ ಕಲಂ:6 ಪೋಕ್ಸೋ ಕಾಯಿದೆ ಅಡಿಯಲ್ಲಿ 10 ವರ್ಷ, ಶಿಕ್ಷೆ ಮತ್ತು 10,000 ದಂಡ ವಿಧಿಸಿದ್ದು ಪ್ರಕಟವಾದ ಎರಡೂ ಶಿಕ್ಷೆಗಳು ಒಟ್ಟಾತ್ರಯದಲ್ಲಿ ಜಾರಿಗೆ ಬರುವಂತೆ ಆದೇಶಿಸಿ ಜಿಲ್ಲಾ ನ್ಯಾಯಾಧೀಶೆ ವಿಪುಲಾ ಎಂ.ಬಿ. ಪೂಜಾರಿ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರ್ಕಾರಿ ಪೋಕ್ಸೋ ಅಭಿಯೋಜಕರಾದ ಸುಭಾಷ ಪಿ. ಕೈರನ್ನ ವಾದಿಸಿದ್ದರು.

See also  ಏಕಾಂಗಿಯಾಗಿ 55ಅಡಿ ಆಳದ ಬಾವಿ ತೋಡಿದ ಯುವಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು