ಶಿವಮೊಗ್ಗ: ನಾಳೆಯಿಂದ ಫೆಬ್ರವರಿ 2020ರವರೆಗೆ ಶಿವಮೊಗ್ಗ ನವುಲೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಕ್ರಿಕೆಟ್ ಹಬ್ಬವೇ ನಡೆಯಲಿದೆ.
ನ.29 ರಿಂದ ಡಿ.2 ರವರೆಗೆ 19 ವರ್ಷದ ಒಳಗಿನ ಬಿಸಿಸಿಐ ಕೂಚ್ ಬೆಹರ್ ಟ್ರೋಫಿ ನಡೆಯಲಿದ್ದು, ಕರ್ನಾಟಕ ಮತ್ತು ಗುಜರಾತ್ ತಂಡದ ನಡುವೆ ಕ್ರಿಕೆಟ್ ಪಂದ್ಯ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೆಎಸ್ ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಅರುಣ್, ಈ ಕ್ರಿಕೆಟ್ ಪಂದ್ಯಾವಳಿ ಮಹತ್ವದ ದೇಶಿಯ ಕ್ರಿಕೆಟ್ ಪಂದ್ಯಾವಳಿ ಆಗಿದೆ. ಇದರಲ್ಲಿ ಆಡಿದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಆಟವಾಡಿದ್ದಾರೆ ಎಂದರು.
23 ವರ್ಷದೊಳಗಿನ ಕ್ರಿಕೆಟ್ ಪಂದ್ಯಾವಳಿಯು ಡಿ.11 ರಿಂದ 14 ರವರೆಗೆ ನಡೆಯಲಿದ್ದು, ಈ ಪಂದ್ಯವು ಕರ್ನಾಟಕ ಮತ್ತು ಹೈದರಾಬಾದ್ ನಡುವೆ ನಡೆಯಲಿದೆ. ಫೆ. 4 ರಂದು 7 ರವರೆಗೆ ಕರ್ನಾಟಕ ಮತ್ತು ಮಧ್ಯಪ್ರದೇಶದ ನಡುವೆ ರಣಜಿ ಪಂದ್ಯ ನಡೆಲಿದೆ ಎಂದರು.