ಕಾರವಾರ: ಬೇಜವಾಬ್ದಾರಿಯಾಗಿ ಮಾತನಾಡುವ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅನಾವಶ್ಯಕ ಹೇಳಿಕೆ ನೀಡುವ ಮೂಲಕ ಟೀಕೆ ಮಾಡುತ್ತಿದ್ದಾರೆ. ಪಕ್ಷದ ವತಿಯಿಂದ ಅವರ ವಿರುದ್ಧ ಮಾನ ನಷ್ಟ ಮೊಕ್ಕದ್ದಮೆ ಪ್ರಕರಣ ದಾಖಲಿಸುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಅವರು ಉಪಚುನಾವಣೆಯಲ್ಲಿ ಅಂಗವಾಗಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ ಪರ ಪ್ರಚಾರದ ಕಾರ್ಯಕರ್ತರ ಬೃಹತ್ ಸಮಾವೇಶದ ಕಾರ್ಯಕ್ರಮದ ಮೊದಲು ಲೊಯೋಲಾ ಕೇಂದ್ರಿಯ ವಿದ್ಯಾಲಯದ ಹತ್ತಿರ ಪತ್ರಕರ್ತರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಮಾತನಾಡಿದರು. ಮಾಜಿ ಸಿಎಂಗಳು ಅನಾವಶ್ಯಕ ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ.
15 ವಿಧಾನ ಸಭಾಕ್ಷೇತ್ರಗಳಲ್ಲಿ ಒಂದು ಸುತ್ತು ಪ್ರಚಾರವನ್ನು ಮುಗಿಸಿ ಎರಡನೆ ಸುತ್ತಿನ ಪ್ರಚಾರವನ್ನು ಯಲ್ಲಾಪುರ ಕ್ಷೇತ್ರದಿಂದ ಪ್ರಾರಂಭಿಸಿದ್ದೇನೆ. ನ. 3ರ ಒಳಗೆ ಪ್ರಚಾರ ಎಲ್ಲ ಕ್ಷೇತ್ರಗಳ ಭೇಟಿ ಮುಗಿಯುತ್ತದೆ. ವಾತಾವರಣ ನಮ್ಮ ನಿರೀಕ್ಷೆಗೆ ಮೀರಿದೆ. ಉಪಚುನಾವಣೆಯಲ್ಲಿ ಈ 15 ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಜನರು ನಮಗೆ ಕೊಟ್ಟಿದ್ದಾರೆ. ಶಿವರಾಮ ಹೆಬ್ಬಾರ ಅವರು ಎಲ್ಲ ಕ್ಷೇತ್ರಗಳಿಗಿಂತ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವಂತಾ ವಾತಾವರಣ ಈ ಕ್ಷೇತ್ರದಲ್ಲಿದೆ ಎಂದರು.
ಕಾಂಗ್ರೆಸ್ ಪಕ್ಷದವರು ಐದು ವರ್ಷ ಹಾಗೂ ಜೆಡಿಎಸ್‍ನವರು ಹದಿನಾಲ್ಕು ತಿಂಗಳು ಸರ್ಕಾರ ನಡೆಸಿದ್ದಾರೆ. ಅವರ ಸಾಧನೆ ಏನು? ಕ್ಷೇತ್ರಗಳ ಅಭಿವೃದ್ಧಿಯ ಬಗ್ಗೆ ಆಲೋಚನೆಯನ್ನು ಅವರು ಮಾಡುವುದಿಲ್ಲಾ ಮೂರು ತಿಂಗಳಿಗೊಮ್ಮೆ ಚುನಾವಣೆ ನಡೆಸುವುದೇ ಅವರ ಕುತಂತ್ರವಾಗಿದೆ. ಕರ್ನಾಟಕ ರಾಜ್ಯದ ಜನತೆ ನಾಲ್ಕು ತಿಂಗಳ ನಮ್ಮ ಒಳ್ಳೆಯ ಕೆಲಸವನ್ನು ಜನರನ್ನು ಮೆಚ್ಚಿದ್ದಾರೆ ಬರುವ ದಿನಗಳಲ್ಲಿ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಸಂಕಲ್ಪ ಹೊತ್ತಿರುವುದರಿಂದ ಎಲ್ಲ ವರ್ಗದ ಜನರಿಗೆ ಒಳ್ಳೆಯ ಯೋಜನೆಗಳನ್ನು ತಂದು ಒಳ್ಳೆಯ ಕೆಲಸ ಮಾಡಬೇಕಾಗಿದೆ ಎಂದರು. ಈ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ. ಎಸ್. ಪಾಟೀಲ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಕಲಘಟಗಿ ಶಾಸಕ ಸಿ.ಎಸ್. ನಿಂಬಣ್ಣನವರ ಇದ್ದರು.