ರಾಯಚೂರು: ಖಾಸಗಿ ಶಾಲಾ ವಾಹನ ಚಾಲಕನೊಬ್ಬ ವಿದ್ಯಾರ್ಥಿಯೊಬ್ಬನನ್ನು ವಾಹನದ ಫುಟ್ ಬೋರ್ಡ್ ನಲ್ಲಿ ನಿಲ್ಲಿಸಿ ವಾಹನ ಚಲಾಯಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279 ಮತ್ತು 336 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದ್ಯಾರ್ಥಿಯನ್ನು ವಾಹನದ ಫುಟ್ ಬೋರ್ಡ್ ನಲ್ಲಿ ನಿಲ್ಲಿಸಿಕೊಂಡು ವಾಹನ ಚಲಾಯಿಸುವ ವಿಡಿಯೋವನ್ನು ಸಾರ್ವಜನಿಕರು ಮಾಡಿದ್ದರು ಮತ್ತು ಇದನ್ನು ಪೊಲೀಸರಿಗೆ ರವಾನಿಸಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖಾಸಗಿ ಶಾಲಾ ವಾಹನ ಚಾಲಕ ರಾಮಯ್ಯ ತಿಪ್ಪಯ್ಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.