News Kannada
Saturday, October 01 2022

ಕರ್ನಾಟಕ

ಕಾಸರಗೋಡು ಜಿಲ್ಲೆಯ ವನ್ಯಜೀವಗಳ ದಾಳಿ ತಡೆಗೆ ಕ್ರಮ: ಅರಣ್ಯ ಸಚಿವ - 1 min read

Photo Credit :

ಕಾಸರಗೋಡು ಜಿಲ್ಲೆಯ ವನ್ಯಜೀವಗಳ ದಾಳಿ ತಡೆಗೆ ಕ್ರಮ: ಅರಣ್ಯ ಸಚಿವ

ಕಾಸರಗೋಡು: ಜಿಲ್ಲೆಯಲ್ಲಿ ವನ್ಯಜೀವಿಗಳ ಆಕ್ರಮಣ ನಿಯಂತ್ರಣಕ್ಕೆ ಪ್ರಬಲ ಪ್ರತಿರೋಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ರಾಜ್ಯ ಸರಕಾರ ಗಂಭೀರ ಪರಿಶೀಲನೆ ನಡೆಸುತ್ತಿದೆ ಎಂದು ಅರಣ್ಯ ಸಚಿವ ನ್ಯಾಯವಾದಿ ಕೆ.ರಾಜು ಹೇಳಿದರು.

ಗುರುವಾರ ನಗರದ ನಗರಸ ಭಾ ಸಭಾಂಗಣದಲ್ಲಿ ನಡೆದ ಅರಣ್ಯ ಅದಾಲತ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಕಾಡಾನೆಗಳ ಕಾಟ ನಿಯಂತ್ರಣಕ್ಕೆ 3.95 ಕಿಮೀ ಆನೆ ಗೋಡೆ, 71.75 ಮಿಮೀ ಸೌರಶಕ್ತಿ ತಂತಿಬೇಲಿ ನಿರ್ಮಿಸಲಾಗಿದೆ. ಈ ವರ್ಷ ನೂತನವಾಗಿ 20 ಕಿ. ಮೀ ಸೌರಶಕ್ತಿ ತಂತಿ ಬೇಲಿ ನಿರ್ಮಿಸುವ ಕ್ರಮ ಕೈಗೊಳ್ಳಲಾಗುವುದು. ಮಲೆನಾಡ ಹೆದ್ದಾರಿ ನಿರ್ಮಾಣ ಸಂಬಂಧ ಲೋಕೋಪಯೋಗಿ ಖಾತೆಯ ಸಹಭಾಗಿತ್ವದಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಪರಪ್ಪ-ದೇಲಂಪಾಡಿ ರಸ್ತೆಯ ವನಾಂತರ ಪ್ರದೇಶದ ಹಾದಿಯನ್ನು ಕಾಂಕ್ರೀಟೀಕರಣ ಗೊಳಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ಸಿ.ಸಿ.ಎಫ್ ಮುಖ್ಯಸ್ಥ ರಾಜೇಶ್ ರವೀಂದ್ರನ್ ಅವರಿಗೆ ಹೊಣೆ ನೀಡಲಾಗಿದೆ ಎಂದರು.

ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಕೆ.ಕುಂಞಿರಾಮನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್, ನಗರಸಭೆ ಅಧ್ಯಕ್ಷ ಬೀಫಾತಿಮ್ಮ ಇಬ್ರಾಹಿಂ, ಪ್ರಧಾನ ಅರಣ್ಯ ಕನ್ಸರ್ ವೇಟರ್ ದೇವೇಂದ್ರ ಕುಮಾರ್ ವರ್ಮಾ, ಸಿ.ಸಿ. ಮುಖ್ಯಸ್ಥ ರಾಜೇಶ್ ರವೀಂದ್ರನ್, ಅರಣ್ಯ ಕನ್ಸರ್ ವೇಟರ್ ಎನ್.ಟಿ.ಸಾಜನ್, ಡಿ.ಎಫ್.ಒ. ಅನೂಪ್ ಕುಮಾರ್ ಪಿ. ಕೆ., ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಅರಣ್ಯ ಇಲಾಖೆಗೆ ಸಂಬಂಧಿಸಿ ಸಾರ್ವಜನಿಕರಿಗೆ ದೂರು ಸಲ್ಲಿಸುವ ನಿಟ್ಟಿನಲ್ಲಿ ಸಚಿವರ ನೇತೃತ್ವದಲ್ಲಿಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾಗುವ ಅರಣ್ಯ ಅದಾಲತ್ ಜಿಲ್ಲೆಯಲ್ಲೂ ನಡೆಸಲಾಗಿದೆ ಎಂದು ಹೇಳಿದರು.

See also  ಹೈಸ್ಕೂಲ್ ನಲ್ಲಿ ಪಾಠ ಮಾಡಲು ಇನ್ನು ಮುಂದೆ ಸ್ನಾತಕೋತ್ತರ ಪದವಿ ಕಡ್ಡಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು