ಬೆಂಗಳೂರು: ಹೆಣ್ಣು ಮಗು ಜನಿಸಿತು ಎಂದು ಅತ್ತೆಯೊಬ್ಬಳು ಒಂಭತ್ತು ದಿನದ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ತಮಿಳ್ ಸೆಲ್ವಿ ಎಂಬುವರು ಮಗುವನ್ನು ಕಳೆದುಕೊಂಡ ತಾಯಿ ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿ ತಮಿಳು ಸೆಲ್ವಿ ಅವರು ಮಗುವಿಗೆ ಹಾಲುಣಿಸಿ ಅತ್ತೆ ಕೈಯಲ್ಲಿ ಕೊಟ್ಟು ಹೋಗಿದ್ದಾರೆ. ಈ ವೇಳೆ ಮಗುವಿನ ಕತ್ತು ಹಿಸುಕಿ ಮನೆಯ ಹಿಂಬದಿಯ ಜಾಗಕ್ಕೆ ಎಸೆದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ತಮಿಳ್ ಸೆಲ್ವಿ ಅತ್ತೆಯ ವಿರುದ್ಧ ದೂರು ನೀಡಿದ್ದಾರೆ.