ಮದ್ದೂರು: ನಿವೇಶನದ ವಿವಾದದ ದ್ವೇಷದಿಂದ ಸವರ್ಣೀಯರ ಗುಂಪೊಂದು ದಲಿತ ಮಹಿಳೆ ಮತ್ತು ಬಾಲಕಿ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಹಳ್ಳಿಕೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ದಲಿತ ಮಹಿಳೆ ಜಯಮ್ಮ, ಆಕೆಯ ತಂಗಿ ಮಗಳು ಸುಶ್ಮಿತಾ ಎಂಬುವರು ಹಲ್ಲೆಯಿಂದ ಗಾಯಗೊಂಡಿದ್ದು, ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಘಟನೆ ಸಂಬಂಧ ಪೆÇಲೀಸರು ಸವರ್ಣೀಯ ಜನಾಂಗದ ಸಿದ್ದಯ್ಯ, ಮಕ್ಕಳಾದ ಅಂಚೇಗೌಡ ಹಾಗೂ ಮಹೇಶ್ ಎಂಬುವರ ವಿರುದ್ಧ ಎಸ್.ಸಿ., ಎಸ್.ಟಿ. ದೌರ್ಜನ್ಯ ಪ್ರತಿಬಂಧಕಾಜ್ಞೆ ಕಾಯ್ದೆಯನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹಲ್ಲೆಗೊಳಗಾದ ಜಯಮ್ಮ ಹಾಗೂ ಆರೋಪಿ ಸಿದ್ದಯ್ಯ ಅಕ್ಕಪಕ್ಕದ ನಿವಾಸಿಗಳಾಗಿದ್ದಾರೆ. ಇಬ್ಬರ ನಡುವೆ ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ಕಳದೆ ಎರಡು ವರ್ಷಗಳಿಂದ ವಿವಾದವಿದೆ. ಈ ಬಗ್ಗೆ ಜಯಮ್ಮ ರಕ್ಷಣೆ ಕೋರಿ ಮದ್ದೂರು ಪೆÇಲೀಸರಿಗೆ ಹಲವಾರು ಬಾರಿ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಭಾನುವಾರ ಬೆಳಗ್ಗೆ ಮನೆ ಆವರಣವನ್ನು ಸ್ವಚ್ಛಗೊಳಿಸುತ್ತಿದ್ದ ಜಯಮ್ಮಳ ಮೇಲೆ ಸವರ್ಣೀಯರಾದ ಸಿದ್ದೇಗೌಡ, ಆತನ ಮಕ್ಕಳಾದ ಅಂಚೇಗೌಡ, ಮಹೇಶ್ ದಾಳಿ ನಡೆಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಲ್ಲದೆ, ಜಯಮ್ಮಳ ಸೀರೆ ಹಿಡಿದು ಎಳೆದಾಡಿ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ.
ಈ ವೇಳೆ ಜಯಮ್ಮಳ ರಕ್ಷಣೆಗೆ ಧಾವಿಸಿದ ಆಕೆಯ ತಂಗಿ ಮಗಳು ಸುಶ್ಮೀತಾಳ ಮೇಲೂ ಸಹ ಆರೋಪಿಗಳು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ನಂತರ ಸಾರ್ವಜನಿಕರು ಜಯಮ್ಮ ಹಾಗೂ ಸುಶ್ಮಿತಾರವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಬಂಧನಕ್ಕೆ ಆಗ್ರಹ: ಮದ್ದೂರು ತಾಲೂಕು ಹಳ್ಳಿಕೆರೆ ಗ್ರಾಮದಲ್ಲಿ ದಲಿತ ಕೋಮಿನ ಜಯಮ್ಮ ಹಾಗೂ ಸುಶ್ಮಿತಾಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಯ ಸಮನ್ವಯ ಸಮಿತಿ ಉಪಾಧ್ಯಕ್ಷ ಹುಳಿಗೆರೆಪುರ ಮಹದೇವು ಆಗ್ರಹಪಡಿಸಿದ್ದಾರೆ.
ದಲಿತ ಮಹಿಳೆ ಜಯಮ್ಮ ಮತ್ತು ಸುಶ್ಮಿತಾಳ ಮೇಲೆ ನಡೆದ ಹಲ್ಲೆ ಪ್ರಕರಣ ಗಂಭೀರ ಸ್ವರೂಪದ್ದಾಗಿದೆ. ಪೆÇಲೀಸರು ಆರೋಪಿಗಳಾದ ಮಂಚೇಗೌಡ ಹಾಗೂ ಅವರ ಮಕ್ಕಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಇಡೀ ದಲಿತ ಸಂಘಟನೆಗಳು ಪೆÇಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.