ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಡಿಸೆಂಬರ್ ೫ ರಂದು ಉಪ-ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಭಾರತ ಚುನಾವಣಾ ಆಯೋಗವು ಸದ್ರಿ ಕ್ಷೇತ್ರದ ಎಲ್ಲಾ ಮತದಾರರಿಗೆ ಅಂದುವೇತನ ಸಹಿತ ರಜೆ (ಪಾವತಿಸಿದ ರಜೆ) ಘೋಷಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯೂ ಆಗಿರುವ ಡಾ. ಹರೀಶಕುಮಾರ ಕೆ. ತಿಳಿಸಿದ್ದಾರೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಕ್ಷೇತ್ರದಲ್ಲಿ ಹಾಗೂ ಇತರೆಡೆ ಖಾಸಗಿ/ ಸರಕಾರಿ/ಅರೆ ಸರಕಾರಿ ಸಂಸ್ಥೆಗಳು, ವ್ಯಾಪಾರ, ವ್ಯವಹಾರ ಇತ್ಯಾದಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮತದಾರ ಕಾರ್ಮಿಕರಿಗೆ. ನೌಕರರಿಗೆ ಪಾವತಿಸಿದ ರಜೆಯನ್ನು ನೀಡಬೇಕು. ಮತದಾರರು ರಜೆಯ ಸೌಲಭ್ಯವನ್ನು ಪಡೆದು ಡಿಸೆಂಬರ ೫ ರಂದು ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಈ ಮೂಲಕ ಅವರು ವಿನಂತಿಸಿದ್ದಾರೆ.
ಮತದಾನ ಚಲಾಯಿಸಲು ಬಯಸುವ ಕಾರ್ಮಿಕರಿಗೆ/ನೌಕರರಿಗೆ ಪಾವತಿಸಿದ ರಜೆಯ ಸೌಲಭ್ಯ ನೀಡಲು ನಿರಾಕರಿಸುವ ಉದ್ಯೋಗದಾತ/ಮಾಲೀಕರು/ಮುಖ್ಯಸ್ಥರ ವಿರುದ್ದ ಜನ ಪ್ರತಿನಿದಿ ಕಾಯ್ದೆ ೧೯೫೧ ಕಲಂ ೧೩೫ಬ ರನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.