ಮಡಿಕೇರಿ: ದಿನದಿಂದ ದಿನಕ್ಕೆ ಕೊಡಗಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಯಲ್ಲೇ ಅಶುಚಿತ್ವದ ವಾತಾವರಣವೂ ಮಿತಿ ಮೀರುತ್ತಿದೆ.
ಮಡಿಕೇರಿ, ಮೈಸೂರು ಹೆದ್ದಾರಿ ಭಾಗದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಸಿಗರು ತಮ್ಮ ವಾಹನಗಳನ್ನು ನಿಲ್ಲಿಸಿ ಎಲ್ಲೆಂದರಲ್ಲಿ ಕಸ ಬಿಸಾಕಿ ರಸ್ತೆ ಬದಿಯನ್ನು ಕಸಮಯಗೊಳಿಸುತ್ತಿದ್ದರು.
ಇದರಿಂದ ಬೇಸತ್ತ ಗುಡ್ಡೆಹೊಸೂರು ಗ್ರಾ.ಪಂ ಪ್ರವಾಸಿಗರ ಮೇಲೆ ಕಣ್ಗಾವಲಿಡಲು ಸಿಸಿ ಕ್ಯಾಮರಾಕ್ಕೆ ಮೊರೆ ಹೋಗಿದೆ.
ಹೆದ್ದಾರಿಯ ಬದಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.