News Kannada
Wednesday, October 05 2022

ಕರ್ನಾಟಕ

ಕಾಡಾನೆ ದಾಳಿ: ದನಗಾಹಿಗೆ ಗಾಯ - 1 min read

Photo Credit :

ಕಾಡಾನೆ ದಾಳಿ: ದನಗಾಹಿಗೆ ಗಾಯ

ಹಲಗೂರು: ದನ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಸವನಹಳ್ಳಿ ಗ್ರಾಮದ ನಿವಾಸಿ ಸಿದ್ದರಾಮೇಗೌಡ ಎಂಬುವರೇ ಕಾಡಾನೆ ದಾಳಿಗೊಳಗಾದವರು. ಸಿದ್ದರಾಮೇಗೌಡ ಅವರು ಗ್ರಾಮದ  ಸತೀಶ್ ಎಂಬುವರೊಂದಿಗೆ ಬೆಳಗ್ಗೆ ದನ ಮೇಯಿಸಲು ತೆರಳಿದ್ದು, ದನ ಮೇಯಿಸಿಕೊಂಡು ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಗ್ರಾಮದ ಸಮೀಪವೇ ದಿಢೀರ್ ಎದುರಾದ ಕಾಡಾನೆ ಸಿದ್ದರಾಮೇಗೌಡರ ಮೇಲೆ ದಾಳಿ ಮಾಡಿ ಸೊಂಡಿಲಿನಿಂದ ಹೊಡೆದು ಗಾಯಗೊಳಿಸಿದೆ.

ಏಕಾಏಕಿ ನಡೆದ ದಾಳಿಯಿಂದ ಜತೆಗಿದ್ದ ಸತೀಶ್ ಅವರು ಬೆಚ್ಚಿ ಬಿದ್ದಿದ್ದು, ಭಯದಿಂದ ಸಹಾಯಕ್ಕಾಗಿ ಜನರನ್ನು ಕೂಗಿಕೊಂಡಿದ್ದಾರೆ. ಆವರು  ಬೊಬ್ಬೆ ಹೊಡೆದ ಶಬ್ದಕ್ಕೆ ಹೆದರಿದ ಕಾಡಾನೆ ಅಲ್ಲಿಂದ ಕಾಡಿನತ್ತ ಹೊರಟು ಹೋಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಗ್ರಾಮಸ್ಥರು ಗಂಭೀರ ಗಾಯಗೊಂಡಿದ್ದ ಸಿದ್ದರಾಮೇಗೌಡರನ್ನು ತಕ್ಷಣ ಸ್ಥಳೀಯ ಹಲಗೂರು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಡಾನೆ ದಾಳಿ ಮಾಡಿದ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೂಡಲೇ ಕಾಡಾನೆಯನ್ನು ಕಾಡಿಗೆ ಅಟ್ಟ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

See also  ಕೈ ಶಾಸಕರ ಮಧ್ಯೆ ಗಲಾಟೆ ಆಗಿದ್ದು ನಿಜ: ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು