News Kannada
Thursday, October 06 2022

ಕರ್ನಾಟಕ

ಸಾರ್ವಜನಿಕ ಜೀವನದಲ್ಲಿ ನಾನು ತೆರೆದ ಪುಸ್ತಕ: ಶಿವರಾಮ್ ಹೆಬ್ಬಾರ್ - 1 min read

Photo Credit :

ಸಾರ್ವಜನಿಕ ಜೀವನದಲ್ಲಿ ನಾನು ತೆರೆದ ಪುಸ್ತಕ: ಶಿವರಾಮ್ ಹೆಬ್ಬಾರ್

ಕಾರವಾರ: ನನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನ ತೆರೆದ ಪುಸ್ತಕವಿದ್ದಂತೆ. ಆದರೆ ಜಿಲ್ಲೆಯಲ್ಲಿ 25 ರಿಂದ 30 ವರ್ಷಗಳ ಕಾಲ ಆಡಳಿತ ಮಾಡಿದ ಒಬ್ಬರೆ ರಾಜ್ಯ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಿದ್ದ ಆರ್. ವಿ. ದೇಶಪಾಂಡೆ ಅವರು ಕೀಳು ಮಟ್ಟದ ರಾಜಕಾರಣ ಶೋಭೆ ತರುವುದಿಲ್ಲ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರರು ಪರೋಕ್ಷವಾಗಿ ಆರ್. ವಿ. ದೇಶಪಾಂಡೆ ವಿರುದ್ಧ ಟೀಕಾ ಪ್ರಹಾರ ಮಾಡಿದರು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಪಟ್ಟಣದ ಹಳೂರ ಮಾರಿಕಾಂಬಾ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಪ್ರಮುಖ ಬೀದಿಗಳಲ್ಲಿ ಬೃಹತ್‍ರ್ಯಾಲಿ ನಡೆಸಿ ಬಂದು ಶಿವಾಜಿ ಸರ್ಕಲ್ ನಲ್ಲಿ ಬಹಿರಂಗ ಪ್ರಚಾರದ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರ ನಾಯಕತ್ವದಲ್ಲಿ ಅದ್ವಿತೀಯ ಕೊಡುಗೆ ನೀಡುವ ಚುನಾವಣೆ ಇದು. ರಾಜ್ಯ ಸರ್ಕಾರದ ಸುಭದ್ರತೆಗೆ ನಡೆಯುವ ಈ ಉಪ ಚುನಾವಣೆ ಇದು ಕೇವಲ ಒಬ್ಬ ಅಭ್ಯರ್ಥಿಯ ಚುನಾವಣೆಯಲ್ಲ ಎಂದರು.

ಜಿಲ್ಲೆಯಲ್ಲಿ 25 ರಿಂದ 30 ವರ್ಷಗಳ ಕಾಲ ಆಡಳಿತ ಮಾಡಿದ ಅವರು ಗೆಲ್ಲುವುದಕ್ಕೋಸ್ಕರ ಸಚಿವ ಸ್ಥಾನ ಕಳೆದುಕೊಂಡ ಮೇಲೆ ಇಂತಹ ಹತಾಶ ರಾಜಕಾರಣ ಮಾಡುತ್ತ ಬಂದಿದ್ದಾರೆ. ಯಾವುದೋ ಒಂದು ಕೀಳು ದರ್ಜೆಯ ಪತ್ರಿಕೆಯಲ್ಲಿ ಏನೇನೋ ಬರೆಯಿಸಿ ತಾವು ಉಳಿಯಬೇಕು ಅನ್ನುವ ಯೋಚನೆ ಅವರ ಕನಸು ಮನಸ್ಸಿನಲ್ಲೂ ಆಗದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶಿವರಾಮ ಹೆಬ್ಬಾರರಿಗೆ ಯಡಿಯೂರಪ್ಪನವರ ಹಾಗೂ ಪ್ರಧಾನಿ ಮೋದಿಯವರ ಆಶೀರ್ವಾದವಿದೆ. ಹೆಬ್ಬಾರರಿಗೆ ಯಲ್ಲಾಪುರ ಕ್ಷೇತ್ರದ ಮತದಾರರ ಆಶೀರ್ವಾದವು ಇದೆ. ಶಿವರಾಮ ಹೆಬ್ಬಾರ ನಿಚ್ಚಳವಾಗಿ ಗೆದ್ದಾಗಿದೆ. ಫಲಿತಾಂಶದ ನಂತರ ಹೆಬ್ಬಾರ ಕ್ಯಾಬಿನೆಟ್ ಸಚಿವರಾಗುತ್ತಾರೆ ಎಂದರು.

See also  ವಾಹನ ಡಿಕ್ಕಿ ಹೊಡೆದು ಅಪರೂಪದ ಪುನುಗು ಬೆಕ್ಕು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು