News Kannada
Friday, March 24 2023

ಕರ್ನಾಟಕ

ಅಪ್ರಾಪ್ತೆಯ ಅತ್ಯಾಚಾರ: ಆರೋಪಿಗೆ ಸಾಯುವರೆಗೂ ಜೈಲು

Photo Credit :

ಅಪ್ರಾಪ್ತೆಯ ಅತ್ಯಾಚಾರ: ಆರೋಪಿಗೆ ಸಾಯುವರೆಗೂ ಜೈಲು

ಕಾಸರಗೋಡು : ಅಪ್ರಾಪ್ತ ಬಾಲಕಿ ಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಕೊನೆಯುಸಿರು ತನಕ ಸಜೆ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಇಂದು ತೀರ್ಪು ನೀಡಿದೆ. 

ಕರಿವೇಡಗಂ ಶಂಕ್ರಪಾಡಿ ಯ ವಿ . ಎಸ್ ರವೀಂದ್ರನ್ ( ೪೬) ಕಠಿಣ ಸಜೆಗೊಳಗಾದ ಆರೋಪಿ . ೨೫ ಸಾವಿರ ರೂ .ದಂಡ ವಿಧಿಸಲಾಗಿದೆ.

ಪೋಕ್ಸೋ ಕಾಯ್ದೆ ತಿದ್ದುಪಡಿ ಜಾರಿಗೆ ಬಂದ ಬಳಿಕ ರಾಜ್ಯದ ಮೊದಲ ತೀರ್ಪು ಆಗಿದೆ . ೨೦೧೮ ರ ಅಕ್ಟೋಬರ್ ಒಂಭತ್ತರಂದು ಘಟನೆ ನಡೆದಿತ್ತು .

ಆರೋಪಿಯ ಮನೆಗೆ ಆಟವಾಡಲು ಬಂದಿದ್ದ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದಲ್ಲಿ ೨೨ ಸಾಕ್ಷಿಗಳನ್ನು ವಿಸ್ತರಿಸಲಾಗಿತ್ತು. ೨೩ ದಾಖಲೆಗಳನ್ನು ಹಾಜರು ಪಡಿಸಲಾಗಿತ್ತು .

ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದು , ಡಿ ವೈ ಎಸ್ ಪಿ ಹರೀಶ್ಚಂದ್ರ ನಾಯಕ್ ಆರೋಪ ಪಟ್ಟಿ ಸಲ್ಲಿಸಿದ್ದರು . ಪ್ರಾಸಿಕ್ಯೂಟರ್ ಪರ ಪ್ರಕಾಶ್ ಅಮ್ಮಣ್ಣಾಯ ರವರು ಹಾಜರಾಗಿದ್ದರು

See also  ಪತ್ನಿಗೆ ಬೆಂಕಿ ಹಚ್ಚಿದ ಪ್ರಕರಣ:ಪತಿಗೆ ಜೀವಾವಧಿ ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು