ಗೋಕಾಕ್: ಉಪಚುನಾವಣೆ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ‘ಬಿಜೆಪಿಗೆ ಕರ್ಕೊಂಡು ಬರುತ್ತೇವೆ’ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ನಲ್ಲಿ ಮತಚಲಾವಣೆ ಮಾಡುವ ವೇಳೆ ಮಾತನಾಡಿದ ಅವರು, ಕಳೆದ ವರ್ಷದಿಂದ ಜನತೆ ಸತೀಶ್ ಜಾರಕಿಹೊಳಿ ಅವರ ನಿಜವಾದ ಬಣ್ಣ ಬಯಲಾಗಿದೆ. ಒಂದೊಮ್ಮೆ ಸಮಯದಲ್ಲಿ ಸತೀಶ್ ಅವರನ್ನು ಒಳ್ಳೆಯ ನಾಯಕ ಎದು ಹೇಳಲಾಗುತ್ತಿ. ಆದರೆ ಅಣ್ಣನ ಮುಗಿಸಲು ಹೋದ ಸತೀಶ್ ಒಬ್ಬ ‘ವೇಸ್ಟ್ ಬಾಡಿ’ ಎಂದರು.
ಮುಂಬರುವ ದಿನಗಳಲ್ಲಿ ನಾನು ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತರುತ್ತೇನೆ ಎಂದರು.
ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಜಾರಕಿಹೊಳಿ ಸಹೋದರರೇ ಪರಸ್ಪರ ಎದುರಾಳಿಗಳಾಗಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ರಮೇಶ್ ಜಾರಕಿಹೊಳೆ ಅವರೇ ಪ್ರಮುಖ ಕಾರಣ ದು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಅವರ ಆರಂಭಿಸಿದ ಭಿನ್ನಮತ ಇಂದು ಉಪಚುನಾವಣೆಗೆ ತಂದೊಡ್ಡಿದೆ.