ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಉಪಚುನಾವಣೆಯ ಹಿನ್ನೆಲೆಯಲ್ಲಿ ಮತದಾರರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 11.45ರವರೆಗೆ ಸಾವಿರಾರು ಮತದಾರರು ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿಯಲ್ಲಿ ಮತದಾನ ನಡೆಯುತ್ತಿದೆ. ಯಲ್ಲಾಪುರ ಕ್ಷೇತ್ರದ ಗುಳ್ಳಾಪುರ ಮತಗಟ್ಟೆಯಲ್ಲಿ ಜನರು ಸಾಲಿನಲ್ಲಿ ನಿಂತಿದ್ದರು. ವ್ಯಾಪ್ತಿಯಲ್ಲಿ ಬರುವ ಒಟ್ಟೂ 1064 ಮತಗಳ ಪೈಕಿ ಬೆಳಗ್ಗೆ 11 ವರೆಗೆ 400ಕ್ಕೂ ಹೆಚ್ಚ ಮತಗಳ ಚಲಾವಣೆಯಾಗಿದೆ.
ಅದರಂತೆ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಅವರು ಯಲ್ಲಾಪುರ ಕ್ಷೇತ್ರದ ಅರಬೈಲ್ ನ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಅವರ ಜೊತೆಗೆ ಪತ್ನಿ, ಮಗ ಹಾಗೂ ಸೊಸೆ ಸಹ ಬಂದು ಮತ ಚಲಾಯಿಸಿದರು. ಕ್ಷೇತ್ರದಲ್ಲಿ ವಿಕಲಚೇತರು ಸಹ ಮತದಾನ ಮಾಡಲು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅವರಿಗೆ ಚುನಾವಣಾ ಸಿಬ್ಬಂದಿಯೇ ಮತಗಟ್ಟೆ ಕರೆದೊಯ್ದು ಮತ ಚಲಾಯಿಸಲು ಸಹಕರಿಸಿದರು.