ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಕ್ಷೇತ್ರದಲ್ಲಿ ಒಟ್ಟು ಶೇ.77.52ರಷ್ಟು ಮತದಾನವಾಗಿದೆ.
ಕ್ಷೇತ್ರದಲ್ಲಿ ಒಟ್ಟು 65381 ಮಹಿಳೆಯರು ಹಾಗೂ 68182 ಪುರುಷರು ಹಾಗೂ ಮತದಾನ ಮಾಡಿದ್ದು ಯಲ್ಲಾಪುರ ತಾಲೂಕಿನ ಕೋಟೆಮನೆ ಬುಡಕಟ್ಟು ಮತಗಟ್ಟೆಯಲ್ಲಿ ಶೇ. 77.14 ಮತದಾನ ನಡೆದಿದೆ.
ಸಖಿ ಮತಗಟ್ಟೆಗಳ ಪೈಕಿ ಯಲ್ಲಾಪುರ ಕೆಜಿಎಸ್ ಶಾಲೆಯ ಮತಗಟ್ಟೆಯಲ್ಲಿ ಶೇ 83.01 ಹಾಗೂ ಮುಂಡಗೋಡ ಬಸವನಗರ ಮತಗಟ್ಟೆಯಲ್ಲಿ 68.14 ಮತದಾನವಾಗಿದೆ. ವಿಶೇಷವಾಗಿ ಶೇ.95.65ರಷ್ಟು ವಿಕಲ ಚೇತನರು ಮತದಾನ ಮಾಡುವ ಮೂಲಕ ಇತರರ ಗಮನ ಸೆಳೆದಿದ್ದಾರೆ.