News Kannada
Thursday, September 29 2022

ಕರ್ನಾಟಕ

ನಾಳೆ ಕೇರಳದ ಅತೀ ಎತ್ತರದ ಆಯಂಕಡವು ಸೇತುವೆ ಲೋಕಾರ್ಪಣೆ - 1 min read

Photo Credit :

ನಾಳೆ ಕೇರಳದ ಅತೀ ಎತ್ತರದ ಆಯಂಕಡವು ಸೇತುವೆ ಲೋಕಾರ್ಪಣೆ

ಕಾಸರಗೋಡು: ರಾಜ್ಯದ ಅತೀ ಎತ್ತರದ ಸೇತುವೆಯೊಂದು ನಾಳೆ ( ೮) ಲೋಕಾರ್ಪಣೆಗೊಳ್ಳಲಿದೆ. ಪೆರ್ಲಡ್ಕ-ಆಯಂಕಡವು-ಪೆರಿಯ ರಸ್ತೆಯಲ್ಲಿ ತೇಜಸ್ವಿನಿ ನದಿಗೆ ನಿರ್ಮಿಸಲಾಗಿರುವ ಆಯಂಕಡವು ಸೇತುವೆ ಉದ್ಘಾಟನೆಗೆ ಸಜ್ಜಾಗಿದೆ.

24 ಮೀಟರ್ ಎತ್ತರ, 150 ಮೀಟರ್ ಉದ್ದದಲ್ಲಿರುವ ಸೇತುವೆಯಲ್ಲಿ 3.800 ಕಿಮೀ ಮೆಕ್ ಡ್ಯಾಂ ನಡೆಸಿದ ಸಂಪರ್ಕ ರಸ್ತೆ ಈಗಾಗಲೇ ಪೂರ್ಣಗೊಂಡಿದೆ.

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 14 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯಾಗುವ ನಿರೀಕ್ಷೆಯಿದೆ. ಮಡಿಕೇರಿ, ಸುಳ್ಯ, ಸುಬ್ರಹ್ಮಣ್ಯ ಪ್ರದೇಶಗಳಿಂದ ಬೇಕಲಕ್ಕೆ ಬಹುಸುಲಭದಲ್ಲಿ ಆಗಮಿಸುವುದಕ್ಕೆ ಈ ಸೇತುವೆ ಪೂರಕವಾಗಿದೆ. ಜಿಲ್ಲೆಯ ದೇಲಂಪಾಡಿ, ಕಾರಡ್ಕ, ಮುಳಿಯಾರು, ಬೆಳ್ಳೂರು ಗ್ರಾಮಪಂಚಾಯತ್ ನಿವಾಸಿಗಳಿಗೆ ಪೆರಿಯ ಕೇಂದ್ರೀಯ ವಿವಿಗೆ, ಕಾಞಂಗಾಡ್ ನಗರಕ್ಕೆ ತಲಪಲು ಸುಲಭಸಾಧ್ಯ. ಎತ್ತರವಾಗಿರುವ ಸೇತುವೆ ಪ್ರಕೃತಿ ರಮಣೀಯ ಆವರಣದಲ್ಲಿರುವುದು ಜನತೆಯ ಆಕರ್ಷಣೆಗೆ ಕಾರಣವಾಗಲಿದೆ. ಸೇತುವೆಯ ಕೆಳಭಾಗವನ್ನು ಸದುಪಯೋಗಪಡಿಸಿ, ಮುಕ್ತ ಸಭಾಂಗಣ, ಫುಡ್ ಕೋರ್ಟ್, ಶೌಚಾಲಯ ಬ್ಲಾಕ್ ಇತ್ಯಾದಿಗಳನ್ನು ಮೊದಲ ಹಂತದಲ್ಲೂ, ನದಿಯ ಸೌಂದರ್ಯ ಈಕ್ಷಣೆಗೆ ಗ್ಲಾಸ್ ಬ್ರಿಜ್ ಯೋಜನೆಯನ್ನು ದ್ವಿತೀಯ ಹಂತದಲ್ಲೂ ನಿರ್ಮಿಸುವ ವಿಚಾರ ಪ್ರವಾಸೋದ್ಯಮ ಇಲಾಖೆಯ ಪರಿಶೀಲಿನೆಯಲ್ಲಿದೆ. ಎನ್.ಎಚ್.66 ಪೆರಿಯಕ್ಕೆ ತಲಪಲು 2500 ಕಿಮೀ ರಸ್ತೆಯ ಅಭಿವೃದ್ಧಿಗೆ ನಿಧಿಯನನು ಕಾಸರಗೋಡು ಅಭಿವೃಧ್ಧಿ ಪ್ಯಾಕೇಜ್ ಯೋಜನೆಯಲ್ಲಿ ಅಳವಡಿಸಲಾಗಿದೆ.

ನಾಳೆ ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇತುವೆ ಉದ್ಘಾಟಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು.

ಶಾಸಕರಾದ ಎಂ.ರಾಗೋಪಾಲನ್, ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ಸಿ.ಕಮರುದ್ದೀನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮೊದಲಾದವರು ಉಪಸ್ಥಿತರಿರುವರು. ಶಾಸಕ ಕೆ.ಕುಂಞಿರಾಮನ್ ಸ್ವಾಗತಸುವರು. ಕೋಯಿಕೋಡ್ ಬ್ರಿಜಸ್ ನೋರ್ತ್ ಸರ್ಕಲ್ ವರಿಷ್ಠ ಇಂಜಿನಿಯರ್ ಪಿ.ಕೆ.ಮಿನಿ ವಂದಿಸುವರು.

 

See also  ಉದ್ಯಮಿಯ ಹನಿಟ್ರ್ಯಾಪ್ ಮೂಲಕ ವಂಚಿಸಿದ ತಂಡದ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು