ಶಿವಮೊಗ್ಗ: ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಇಂದು ಬೆಳಿಗ್ಗೆ ಬೀರನಹಳ್ಳಿಯಲ್ಲಿ ವಾಕಿಂಗ್ ಹೋಗುವಾಗ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಶಿವಮೊಗ್ಗ ಪೆಸಿಟ್ ಇಂಜನಿಯರಿಂಗ್ ವಿದ್ಯಾರ್ಥಿನಿ ಪರಿಣಿತಾ(22) ಸಾವನ್ನಪ್ಪಿದ್ದಾಳೆ.
ಇಂದು ಬೆಳಿಗ್ಗೆ ಶಿವಮೊಗ್ಗದ ಮೆಗ್ಗಾನ್ ಬಳಿ ವಿದ್ಯಾರ್ಥಿನಿಯ ಶವವನ್ನ ಮರುಣೋತ್ತರ ಪರೀಕ್ಷೆಗೆ ತಂದಾಗ ವಿದ್ಯಾರ್ಥಿನಿಯರ ಪೋಷಕರ ಮತ್ತು ಕಾಲೇಜಿನ ಆಡಳಿತ ಮಂಡಳಿ ನಡುವೆ ಸಾವಿನ ಕುರಿತು ಮಾತಿನ ಚಕಮಕಿ ನಡೆದಿದೆ.ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಇಂಜಿನಿಯರ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ 22 ಜನರ ತಂಡವೊಂದು ಸರ್ವೆ ಕಾರ್ಯಕ್ಕಾಗಿ ಬೀರನಹಳ್ಳಿಯಲ್ಲಿ ಕ್ಯಾಂಪ್ ಹೂಡಿದ್ದರು.
ಇಂದು ಬೆಳಿಗ್ಗೆ ವಾಕಿಂಗ್ ಗೆ ತೆರಳಿದಾಗ ಅಪರಿಚಿತ ವಾಹನವೊಂದು ಪರಿಣಿತಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಈ ಸಂಬಂದ ಮರುಣೋತ್ತರ ಪರೀಕ್ಷೆ ಬಳಿ ವಿದ್ಯಾರ್ಥಿನಿಯ ಶವ ತಂದಾಗ ಪರಿಣಿತಿಯ ಪೋಷಕರು ಆಡಳಿತ ಮಂಡಳಿಯ ವಿರುದ್ದ ವಾಗ್ವಾದಕ್ಕೆ ನಿಂತಿದ್ದಾರೆ.
ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಸ್ತೆ ಅಪಘಾತವನ್ನ ಮೃತ ವಿದ್ಯಾರ್ಥಿನಿಯ ಪೋಷಕರು ನಿರಾಕರಿಸಿದ್ದಾರೆ.