ಬೆಳಗಾವಿ: ತಾಲ್ಲೂಕಿನ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ -4ರಲ್ಲಿ ಬರ್ಡೇ ಹೋಟೆಲ್ ಸಮೀಪ ಶನಿವಾರ ತಡರಾತ್ರಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕೇದನೂರ ಗ್ರಾಮದ ಸಂಜು ರಾಜಾಯಿ (29), ಪ್ರಕಾಶ ಚಂಡಕೆ (27) ಅಡಿವೆಪ್ಪ ಗುಜ್ಜನವರ (29) ಮೃತರು.
ಅವರು ಖಾನಾಪುರ ತಾಲ್ಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಹೋಗಿ ವಾಪಸಾಗುತ್ತಿದ್ದರು. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.