News Kannada
Wednesday, November 30 2022

ಕರ್ನಾಟಕ

ದಂಡದ ಬದಲಿಗೆ ಹೆಲ್ಮೆಟ್ ಉಡುಗೊರೆ   - 1 min read

Photo Credit :

ದಂಡದ ಬದಲಿಗೆ ಹೆಲ್ಮೆಟ್ ಉಡುಗೊರೆ   

ಚಾಮರಾಜನಗರ: ಸುಪ್ರೀಂ ಕೋರ್ಟ್ ಆದೇಶದ ಅನ್ವಯ ದ್ವಿಚಕ್ರ ವಾಹನ ಚಾಲನೆ ಮಾಡುವವರು ಹೆಲ್ಮೆಟ್ ಧರಿಸದೇ ಪ್ರಯಾಣ ಮಾಡುವುದು ಅಪರಾಧ ಎಂಬ ಹಿನ್ನೆಲೆಯಲ್ಲಿ ಹೆಲ್ಮೆಟ್ ಧರಿಸದೇ ಪ್ರಯಾಣ ಮಾಡುವುದು ಕಂಡು ಬಂದಲ್ಲಿ ಅವರಿಗೆ ದಂಡ ಕಟ್ಟುವ ಬದಲಾಗಿ ಹೆಲ್ಮೆಟ್ ನೀಡಲಾಗುವುದು ಎಂದು ಎಸ್ಪಿ ಆನಂದ್ ಕುಮಾರ್ ಚಾಮರಾಜನಗರದಲ್ಲಿ ತಿಳಿಸಿದರು. 

ನಗರದ ಎಸ್ಪಿ ಕಛೇರಿಯ ಮುಂಭಾಗದಲ್ಲಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವ ಸಲುವಾಗಿ ಸಂಚಾರಿ ಪೊಲೀಸರು ಅರಿವು ಜಾಥಾ ಕಾರ್ಯಕ್ರಮ ಏರ್ಪಡಿಸಿದ್ದರು. 

ಈ ಜಾಥಾಗೆ ಎಸ್ಪಿ ಆನಂದ್ ಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿ, ಇದುವರೆಗೆ ದ್ವಿಚಕ್ರ ವಾಹನಗಳಲ್ಲಿ ಅಪಘಾತವಾದಾಗ ಹೆಚ್ಚುವರಿಯಾಗಿ ತಲೆ ಭಾಗಕ್ಕೆ ಪೆಟ್ಟು ಬಿದ್ದು ತಮ್ಮ ಪ್ರಾಣ ಕಳೆದುಕೊಂಡಿರುತ್ತಾರೆ. ಅದನ್ನು ಮನಗಂಡು ಹೆಲ್ಮೆಟ್ ಧರಿಸದೇ ಪ್ರಯಾಣಿಸುವ ಪ್ರಯಾಣಿಕರಿಗೆ ದಂಡ ಹಾಕುವ ಬದಲು ಹೆಲ್ಮೆಟ್ ನೀಡುವ ಪ್ರಕ್ರಿಯೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಅಪಘಾತಗಳ ಪ್ರಮಾಣವನ್ನು ತಗ್ಗಿಸುವಂತಹ ಕ್ರಮವಾಗಿದೆ ಎಂದರು.

 ಇದುವರೆಗೆ ವಾರ್ಷಿಕವಾಗಿ 779 ಪ್ರಕರಣಗಳು ಸಂಚಾರಿ ಪ್ರಕರಣಗಳಲ್ಲಿ ದಾಖಲಾಗಿದ್ದು, 165 ಜನರು ಸಾವನ್ನಪ್ಪಿದ್ದಾರೆ. ಈ ಪ್ರಕರಣಗಳಿಂದ 1,15,672 ರೂ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

See also  ಈರುಳ್ಳಿ ಹಳದಿ ರೋಗ ಬಾಧೆ ಹತೋಟಿಗೆ ಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು