News Kannada
Tuesday, December 06 2022

ಕರ್ನಾಟಕ

ಬೆಂಕಿ ಅವಘಡ: ಮುನ್ನೆಚ್ಚರಿಕೆ ವಹಿಸಲು ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಮನವಿ

Photo Credit :

ಬೆಂಕಿ ಅವಘಡ: ಮುನ್ನೆಚ್ಚರಿಕೆ ವಹಿಸಲು ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಮನವಿ

ಮಡಿಕೇರಿ: ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಗಿಡ ಮರಗಳ ಎಲೆ ಉದುರುವಿಕೆಯಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗುತ್ತಿದೆ. ಉದುರುತ್ತಿರುವ ಎಲೆಗಳು ಬೇಗ ಬೆಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದು, ಚಳಿಗಾಲದ ಬೀಸುವ ಗಾಳಿಯು ಬೆಂಕಿಯ ಕಿಡಿಯನ್ನು ಬಹಳಷ್ಟು ಸಮಯ ಆರದಂತೆ ಕಾಯ್ದುಕೊಂಡು ಅರಣ್ಯ ಪ್ರದೇಶಕ್ಕೆ ಪಸರಿಸುವ ಸಾಧ್ಯತೆ ಇರುತ್ತದೆ.

ಆದ್ದರಿಂದ ಕಸಕ್ಕೆ ಬೆಂಕಿ ಹಾಕುವುದು, ಒಲೆಯ ಬೂದಿಯನ್ನು ಬಯಲಿನಲ್ಲಿ ಸುರಿಯುವುದು, ಬೀಡಿ-ಸಿಗರೇಟು ಸೇದಿ ನಿರ್ಲಕ್ಷ್ಯದಿಂದ ಬಿಸಾಡುವುದು, ಖಾಲಿ ಬಾಟಲಿ ಬಿಸಾಡುವುದನ್ನು ಮಾಡಬಾರದು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು ತಿಳಿಸಿದ್ದಾರೆ.

ಅಗ್ನಿ ಅವಘಡಗಳಿಗೆ ಕಾರಣರಾದವರನ್ನು ಅಗ್ನಿ ನಿರ್ಲಕ್ಷತೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಅಗ್ನಿ ಅನಾಹುತ/ ಕಾಡ್ಗಿಚ್ಚು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆಯೊಂದಿಗೆ ಕೈಜೋಡಿಸುವಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು ಮನವಿ ಮಾಡಿದ್ದಾರೆ.

See also  ಮಡಿಕೇರಿ ಆಕಾಶವಾಣಿಗೆ 26ನೇ ವರ್ಷಾಚರಣೆಯ ಸಂಭ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು