News Kannada
Tuesday, November 29 2022

ಕರ್ನಾಟಕ

ತೋಟದಲ್ಲಿ ಗಾಂಜಾ ಗಿಡಗಳು: ಮಾಲು ಸಹಿತ ವ್ಯಕ್ತಿಯ ವಶ - 1 min read

Photo Credit :

ತೋಟದಲ್ಲಿ ಗಾಂಜಾ ಗಿಡಗಳು: ಮಾಲು ಸಹಿತ ವ್ಯಕ್ತಿಯ ವಶ

ಮಡಿಕೇರಿ: ಗರಗಂದೂರು ಗ್ರಾಮದ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಅದೇ ತೋಟದ ರೈಟರ್‍ವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕರಪ್ಪ ಎಂಬುವವರ ತೋಟದಲ್ಲಿ ರೈಟರ್ ಆಗಿದ್ದ ಉಣ್ಣಿಕೃಷ್ಣ ಎಂಬುವವರೇ ಬಂಧಿತ ಆರೋಪಿ. ಖಚಿತ ಮಾಹಿತಿ ದೊರೆತ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪರಿಶೀಲನೆ ನಡೆಸಿದಾಗ ಕಾಫಿ ತೋಟದೊಳಗೆ ಅಕ್ರಮವಾಗಿ ಗಾಂಜಾಗಿಡಗಳನ್ನು ಬೆಳೆಸಿರುವುದು ಕಂಡು ಬಂತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು ಉಣ್ಣಿಕೃಷ್ಣ ಅವರನ್ನು ಮಾಲು ಸಹಿತ ವಶಕ್ಕೆ ಪಡೆದು ತೋಟದ ಮಾಲೀಕ ಶಂಕರಪ್ಪ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಮನ್ ಡಿ. ಪೆನ್ನೇಕರ್ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪ ವಿಭಾಗದ ಉಪ ಅಧೀಕ್ಷಕರಾದ ಪಿ.ಕೆ.ಮುರುಳೀಧರ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕÀ ಮಹೇಶ್, ಸುಂಟಿಕೊಪ್ಪ ಠಾಣಾ ಉಪ ನಿರೀಕ್ಷಕ ತಿಮ್ಮಪ್ಪ ಬಿ., ಎಎಸ್‍ಐ ಗಳಾದ ರಮೇಶ್, ಗಣೇಶ್ ಪಿ.ಎಂ ಹಾಗೂ ಸಿಬ್ಬಂದಿಗಳಾದ ಸತೀಶ್ ಯು.ಎ,  ಪುನೀತ್‍ಕುಮಾರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

See also  ಟಿ.ಪಿ.ರಮೇಶ್ ರಾಜೀನಾಮೆಗೆ ಹೆಚ್ಚಿದ ಒತ್ತಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು