News Kannada
Wednesday, November 30 2022

ಕರ್ನಾಟಕ

ಸಿಎಎ ಕಾಯ್ದೆಯಿಂದ ಕೊಡವರ ಅಸ್ತಿತ್ವಕ್ಕೆ ದಕ್ಕೆ : ಸಿಎನ್ ಸಿ ಆತಂಕ - 1 min read

Photo Credit :

ಸಿಎಎ ಕಾಯ್ದೆಯಿಂದ ಕೊಡವರ ಅಸ್ತಿತ್ವಕ್ಕೆ ದಕ್ಕೆ : ಸಿಎನ್ ಸಿ ಆತಂಕ

ಮಡಿಕೇರಿ: ಮುಸ್ಲೀಂಯೇತರರಾದ ಹಿಂದುಗಳು, ಸಿಖ್ಖರು, ಪಾರ್ಸಿಗಳು, ಬೌದ್ಧರು ಹಾಗೂ ಜೈನರನ್ನು ಭಾರತೀಯ ನಾಗರಿಕರೆಂದು ಪರಿಗಣಿಸಿ ಅಧಿಕೃತವಾಗಿ ನೆಲೆಯೂರಿಸಲು ಸಿಎಎ ಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹೀಗೆ ನೆಲೆ ಪಡೆಯುವವರಿಗೆ ಕೊಡಗಿನಲ್ಲೂ ಆಶ್ರಯ ನೀಡುವ ಅನಿವಾರ್ಯತೆ ಎದುರಾದಲ್ಲಿ ಮೂಲ ನಿವಾಸಿ ಕೊಡವರ ಅಸ್ತಿತ್ವಕ್ಕೆ ದಕ್ಕೆ ಬರಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನದ 371 ರ ವಿಧಿಯಡಿ ಕೊಡವರಿಗೆ ಸ್ವಾಯತ್ತತೆ ನೀಡಿದಾಗ ಮಾತ್ರ ಅತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಜನಾಂಗ ಉಳಿಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಸಿಎಎ ಕಾಯ್ದೆಯಿಂದ ಮುಸಲ್ಮಾನರಿಗೆ ಯಾವುದೇ ತೊಂದರೆ ಇಲ್ಲ, ಆದರೆ ಅತ್ಯಂತ ಸಣ್ಣ ಭೂ ಪ್ರದೇಶವಾದ ಕೊಡಗಿನಲ್ಲಿ ನೆಲೆಸಿರುವ ಮೂಲ ನಿವಾಸಿ ಕೊಡವರ ನೆಲೆಗೆ ದಕ್ಕೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಶ್ಮೀರವೂ ಭಾರತ ಒಕ್ಕೂಟಕ್ಕೆ ಪರಿಪೂರ್ಣವಾಗಿ 2019ರ ಆಗಸ್ಟ್ ಮೊದಲ ವಾರದಲ್ಲಿ ವಿಲೀನವಾಗಿ ಈ ದೇಶದ ಮುಖ್ಯ ವಾಹಿನಿಯಲ್ಲಿ ಅಂರ್ತಗತವಾಯಿತೋ ಅದೇ ರೀತಿ ಕೊಡವರಿಗೆ ಅರಿವಿದ್ದೋ ಅರಿವಿಲ್ಲದೆಯೋ 1956ರ ನವೆಂಬರ್ 1 ರಂದು ಕೊಡವರ ಜನ್ಮ ಭೂಮಿ ಕೊಡಗು ‘ಸಿ’ ರಾಜ್ಯ ವಿಶಾಲ ಕರ್ನಾಟಕವೆನ್ನುವ ಅಪ್ರಾಕೃತಿಕ ರಾಜ್ಯ್ಯ ರಚನೆ ಪರಿಕಲ್ಪನೆಯಲ್ಲ್ಲಿ ವಿಲೀನವಾಯಿತು. ಮತ್ತು ತಮ್ಮಿಷ್ಟದಂತೆ ಮನಪೂರ್ವಕವಾಗಿಯೂ ಮತ್ತು ಹೃದಯ ಪೂರ್ವಕವಾಗಿಯೂ ಸಂತೋಷದಿಂದಲೇ 1947ರಲ್ಲಿ ಭಾರತ ಒಕ್ಕೂಟದೊಳಗೆ ವಿಲೀನವಾಯಿತು. ಆದರೆ ಕಳೆದ 72 ವರ್ಷಗಳಿಂದ ಭಾರತ ಒಕ್ಕೂಟದೊಳಗೆ ಈ ದೇಶ ಪ್ರೇಮಿ ಕೊಡವರು ರಾಜ್ಯರಹಿತ ನಾಗರಿಕರಂತೆಯೂ ಮತ್ತು ಕಳೆದ 64 ವರ್ಷಗಳಿಂದ ಕರ್ನಾಟಕದ ಅಡಿಯಲ್ಲಿ ಕೊಡವರು ಪರಕೀಯರಂತೆಯೂ ಎರಡನೇ ದರ್ಜೆಯ ನಾಗರೀಕರಂತೆಯೂ ಬದುಕಬೇಕಾಗಿದ್ದು ದುರಂತ. ಕಾಶ್ಮೀರಿಗಳು ಪರಿಪೂರ್ಣ ವಿಲೀನವಾಗಿ 5 ತಿಂಗಳಲ್ಲೇ ಅವರ ಆತಂಕ ನಿವಾರಣೆಗೆ ಮುಂದಾಗಿ ಅವರಿಗೆ 371 ವಿಧಿಯ ಅಡಿ ರಕ್ಷಣೆಗೆ ಮುಂದಾಗುವುದರ ಮೂಲಕ ವಾತ್ಸಾಲ್ಯ ತೋರುತ್ತಿರುವ ಸರ್ಕಾರ ಕೊಡವರನ್ನೇಕೆ ಈ ವಾತ್ಸಾಲ್ಯ ಸೆಲೆಯ ವ್ಯಾಪ್ತಿಯಲ್ಲಿ ಇನ್ನೂ ಪರಿಗಣನೆಗೆ ತರಲಿಲ್ಲ ಏಕೆ ಎಂದು ನಾಚಪ್ಪ ಪ್ರಶ್ನಿಸಿದ್ದಾರೆ.

ಈ ಕಾಯ್ದೆಯ ಪ್ರಕಾರ ಇತರರಿಗೆ ಕೊಡಗಿನಲ್ಲಿ ನೆಲೆ ನೀಡಿದರೆ ಇಡೀ ಕೊಡಗಿನ ಜನಸಂಖ್ಯಾ ಶಾಸ್ತ್ರವೇ ಬುಡಮೇಲಾಗಲಿದ್ದು, ಸಮಾಜಿಕ ಸಂಘರ್ಷ ಏರ್ಪಡಿಲಿದೆ. ಈಗಾಗಲೇ ಕೊಡಗಿನ ಗಡಿಯಲ್ಲಿ ಟಿಬೇಟ್ ನಿರಾಶ್ರಿರಿದ್ದಾರೆ. ಆದರೆ ಅವರುಗಳಿಗೆ ನಾಗಾರಿಕತ್ವ ಹಕ್ಕು ನೀಡದೆ ಇರುವುದರಿಂದ ಆತಂಕ ಕಡಿಮೆ ಆದರೆ ಈ ಸಿ.ಎ.ಎ ಅಡಿಯಲ್ಲಿ ಬರುವ ನಿರಾಶ್ರಿತರೇ ಬೇರೆ. ಅವರಿಗೆ ನೆಲ ಸೂರಿನೊಂದಿಗೆ ಎಲ್ಲಾ ಸವಲತ್ತುಗಳನ್ನು ವಿಭಾಗಿಸಿ ಹಂಚಿದ್ದಲ್ಲಿ ನಮ್ಮ ಸ್ಥಿತಿಯೇನು ಎಂದು ಪ್ರಶ್ನಿಸಿದರು.

ಆತಂಕ ನಿವಾರಣೆಗಾಗಿ ಭಾರತದ ಈಶಾನ್ಯ ಪ್ರಾಂತ್ಯಕ್ಕೆ ನೀಡಿರುವ ಮತ್ತು ಜಮ್ಮು ಕಾಶ್ಮೀರಕ್ಕೆ ನೀಡಲಿರುವ ಸಂವಿಧಾನದ 371 ವಿಧಿಯೊಂದಿಗೆ ಸ್ವಾಯತ್ತತೆ ನೀಡಿ ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸಿ ಎಸ್.ಟಿ ಟ್ಯಾಗ್ ನೀಡಿದ್ದಲ್ಲಿ ಮಾತ್ರ ಶಾಶ್ವತ ನೆಮ್ಮದಿ ಮತ್ತು ಶಾಂತಿ ದೊರಕಲಿದೆ ಎಂದು ನಾಚಪ್ಪ ಅಭಿಪ್ರಾಯಪಟ್ಟರು.

See also  ರಾಜ್ಯ ಸರಕಾರದ ವೈಫಲ್ಯಕ್ಕೆ ಖಂಡನೆ : ಬಿಜೆಪಿಯಿಂದ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು