News Kannada
Wednesday, November 30 2022

ಕರ್ನಾಟಕ

ಸಿಎನ್‍ಸಿ ಬೇಡಿಕೆ ಬಗ್ಗೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆತಂಕ - 1 min read

Photo Credit :

ಸಿಎನ್‍ಸಿ ಬೇಡಿಕೆ ಬಗ್ಗೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆತಂಕ

ಮಡಿಕೇರಿ: ಕೊಡವರನ್ನು ಬುಡಕಟ್ಟು ಜನಾಂಗವೆಂದು ಪರಿಗಣಿಸಬೇಕೆಂಬ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯ ಬೇಡಿಕೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಘಟಕ, ಇದರಿಂದ ಕೊಡಗಿನಲ್ಲಿ ಈಗಾಗಲೇ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಆದಿವಾಸಿ ಜನಾಂಗಗಳ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ವೈ.ಕೆ.ಗಣೇಶ್ ಅವರು, ಕೊಡವರ ಮೂಲದ ಬಗ್ಗೆ ಅಧ್ಯಯನ ಮಾಡಿರುವ ಕೊಡವ ತಜ್ಞರೇ ಕೊಡವರು ಕೊಡಗಿನ ಮೂಲ ನಿವಾಸಿಗಳಲ್ಲ. ಅವರು ಕೊಡಗಿನ ಭೂ ಪ್ರದೇಶದಿಂದ ಹೊರಗಿನಿಂದ ಬಂದವರು ಮತ್ತು ಇಲ್ಲಿನ ದಟ್ಟವಾದ ಕಾಡು ಪ್ರದೇಶದಲ್ಲಿ ಮೊದಲೇ ನೆಲೆಸಿದ್ದ ಮೂಲನಿವಾಸಿಗಳೊಂದಿಗೆ ಬೆರೆತು ಜೀವಿಸಲಾರಂಭಿಸಿದ ನಂತರ ಇಲ್ಲಿನ ಭೌಗೋಳಿಕ ಸನ್ನಿವೇಶಕ್ಕೆ ಅನುಗುಣವಾಗಿ ಇಲ್ಲಿನ ಮೂಲನಿವಾಸಿಗಳೊಂದಿಗೆ ಬೆರೆತು ಅವರ ಜೀವನ ಕ್ರಮವನ್ನು ರೂಢಿಸಿಕೊಂಡವರು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಕೊಡವರನ್ನು ಬುಡಕಟ್ಟು ಜನಾಂಗದ ಪಟ್ಟಿಗೆ ಸೇರಿಸಬೇಕೆನ್ನುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

 ಜಿಲ್ಲೆಯಲ್ಲಿ ಕೊಡವ ಭಾಷೆಯನ್ನಾಡುವ 18 ಜನಾಂಗಗಳಿದ್ದು ಅವರಲ್ಲಿ ಒಂದು ವಿಭಾಗದವರಾದ ಕೊಡವರು ಇತರ ಕೊಡವ ಭಾಷಿಗರಿಗಿಂತ ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅತ್ಯಂತ ಶ್ರೀಮಂತರಾಗಿದ್ದಾರೆ. ಉಳಿದ ಜನಾಂಗದವರು ಅತ್ಯಂತ ದುರ್ಬಲರಾಗಿದ್ದು, ಬಹುತೇಕ ಮಂದಿ ಕೊಡವರ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕೊಡಗಿನಲ್ಲಿ ಕೆಂಬಟ್ಟಿ ಜನಾಂಗದವರು ಆರ್ಥಿಕವಾಗಿ ದುರ್ಬಲರಾಗಿದ್ದು, ತವ್ಮ್ಮನ್ನು ಬುಡಕಟ್ಟ ವಿಭಾಗಕ್ಕೆ ಸೇರಿಸಬೇಕೆಂದು ಬಹುಕಾಲದಿಂದ ಬೇಡಿಕೆ ಇಟ್ಟಿದ್ದರೂ ಅವರ ಬೇಡಿಕೆ ಈಡೇರಿಲ್ಲ. ಹೀಗಿರುವಾಗ ಕೊಡವರನ್ನು ಬುಡಕಟ್ಟು ಜನರೆಂದು ಪರಿಗಣಿಸುವುದಾದರೆ, ಉಳಿದ ಕೊಡವ ಭಾಷಿಗರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಲದೆ ಅವರನ್ನು ಬುಡಕಟ್ಟು ಪಟ್ಟಿಗೆ ಸೇರಿಸುವುದರಿಂದ ಈಗಾಗಲೇ ಜಿಲ್ಲೆಯಲ್ಲಿರುವ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಗಣೇಶ್ ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸುವ ಬದಲು ಅವರ ವಿವಿಧ ಬೇಡಿಕೆಗಳ ಬಗ್ಗೆ ಸರಕಾರಗಳು ಗಮನಹರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

 ಕೊಡಗಿನ ವಿಶಿಷ್ಟ ಭಾಷೆಗಳಾದ ಕೊಡವ, ಎರವ, ಕೊಡವ ಮುಸ್ಲಿಂ ಭಾಷೆಗಳ ಬೆಳವಣಿಗೆಗೆ ಸರಕಾರ ಸೂಕ್ತ ನೆರವು ನೀಡಬೇಕು. ಕೊಡವ ಭಾಷೆಯನ್ನು ಕನ್ನಡದೊಂದಿಗೆ ಜಿಲ್ಲಾ ಮಟ್ಟದಲ್ಲಿ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಎರವ ಮತ್ತು ಕೊಡವ ಮುಸ್ಲಿಂ ಭಾಷೆಗಳನ್ನು ಆಯಾ ಭಾಷಿಗರು ಗಣನೀಯ ಪ್ರಮಾಣದಲ್ಲಿರುವ ಗ್ರಾಮಗಳಲ್ಲಿ ಕನ್ನಡ, ಕೊಡವ ಭಾಷೆಗಳೊಂದಿಗೆ ಆಡಳಿತ ಭಾಷೆಯನ್ನಾಗಿ ಮಾಡಬೇಕು, ಕೊಡಗಿನ ಬಾಣೆ ಜಾಗ ಕೊಡಗಿನ  ಕೃಷಿಕರ ಖಾಸಗಿ ಸ್ವತ್ತಾಗಿದ್ದು, ಅದನ್ನು ಸರಕಾರದ ಭೂಮಿ ಎಂದು ಪರಿಗಣಿಸಿ ರೈತರನ್ನು ಹಿಂಸಿಸುವ ಪ್ರವೃತ್ತಿಯನ್ನು ಕೈಬಿಟ್ಟು ಸರಕಾರ ಅದನ್ನು ರೈತರ ಜಾಗವೆಚಿದು ಘೋಷಿಸಬೇಕು. ರಾಜ್ಯದ ಇತರ ಜಿಲ್ಲೆಗಳಲ್ಲಿರುವಚಿತೆ ಕೊಡಗಿನ ರೈತರಿಗೂ ಅವರ ಜಾಗದಲ್ಲಿರುವ ಮರದ ಮೇಲಿನ ಪೂರ್ಣ ಹಕ್ಕನ್ನು ನೀಡಬೇಕು ಎಂದು ಗಣೇಶ್ ಒತ್ತಾಯಿಸಿದರು.

See also  ಕಾಡಾನೆಗಳ ಕಾಳಗದಲ್ಲಿ ಒಂದು ಆನೆ ಸಾವು

 ಭತ್ತದ ಬೆಳೆ ಕೊಡವರ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದ್ದು, ಭತ್ತಕ್ಕೆ ಸೂಕ್ತ ಪ್ರೋತ್ಸಾಹವಿಲ್ಲದೆ ಬೆಳೆಯನ್ನು ಕೈಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಭತ್ತಕ್ಕೆ ನ್ಯಾಯವಾದ ಬೆಂಬಲ ಬೆಲೆ ಘೋಷಿಸಿದ ರೈತರಿಂದ ಖರೀದಿಸಬೇಕು. ಕಾಫಿ, ಕರಿವ್ಮೆಣಸು ಬೆಳೆ ಕೊಡಗಿನ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅದಕ್ಕೂ ನ್ಯಾಯವಾದ ಬೆಲೆ ಬೆಳೆಗಾರರಿಗೆ ಸಿಗುವಂತೆ ಸರಕಾರ ಕಾನೂನು ರೂಪಿಸಬೇಕು. ಮತ್ತು ದೇಶಕ್ಕೆ ಕರಿಮೆಣಸು ಆಮದಾಗುವುದನ್ನು ತಡೆಯಲು ಕೇಂದ್ರ ಸರಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸೈನ್ಯದಲ್ಲಿ ಸೇವೆ  ಸಲ್ಲಿಸಿದವರಿಗೆ, ಸಲ್ಲಿಸುತ್ತಿರುವವರಿಗೆ ಸೂಕ್ತ ನೆರವನ್ನ ಸರಕಾರ ನೀಡಬೇಕು. ಕೊಡಗಿನಲ್ಲಿ ಟಾಟಾ, ಬಿಬಿಟಿಸಿಯಂತಹ ಬೃಹತ್ ಕಂಪೆನಿಗಳು ಅತಿಕ್ರಮಿಸಿಕೊಂಡಿರುವ ಸರಕಾರಿ ಜಾಗಗಳನ್ನು ಕಂಡು ಹಿಡಿದು ಅವರಿಂದ ಹಿಂದಕ್ಕೆ ಪಡೆದು ಅವುಗಳನ್ನು ಮಾಜಿ ಸೈನಿಕರಿಗೆ ನೀಡುವಂತಾಗಬೇಕು. ಕೊಡಗಿನ ಗ್ರಾಮ, ಪಟ್ಟಣಗಳಲ್ಲಿ ಮೂಲ ಸೌಕರ್ಯಗಳ ಕೊರತೆಯನ್ನು ನೀಗಿಸಬೇಕು. ರಸ್ತೆಗಳನ್ನು ದುರಸ್ತಿಗೊಳಿಸಿ, ಅಗತ್ಯವಿರುವ ರೀತಿಯಲ್ಲಿ ಶಾಲೆ, ಕಾಲೇಜು , ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಬೇಕು. ಕೊಡಗಿನ ಗ್ರಾಮೀಣ ಆಟೋಟ, ಕಲೆಗಳಿಗೆ ಸೂಕ್ತ ಪ್ರ್ರೇತ್ಸಾಹ ನೀಡಬೇಕು. ನಿರಂತರ ಆನೆ ದಾಳಿಯಿಂದ ರೈತರು ನಷ್ಟಕ್ಕೊಳಗಾಗುವುದನ್ನು ತಪ್ಪಿಸಲು ಸೂಕ್ತ ಯೋಜನೆ ರೂಪಿಸಬೇಕು ಎಂದು ಗಣೇಶ್ ಅವರು ಒತ್ತಾಯಿಸಿದರು.

 ಈ ಬೇಡಿಕೆಗಳಿಗೆ ಕೊಡವರು ಹೋರಾಡುವುದರೊಂದಿಗೆ ಬುಡಕಟ್ಟು ಜನಾಂಗವಾಗಿ ತವ್ಮ್ಮನ್ನು ಪರಿಗಣಿಸಬೇಕೆಂಬ ಬೇಡಿಕೆಯನ್ನು ಕೈಬಿಡಬೇಕು. ಆ ಮೂಲಕ ಹಿರಿಯಣ್ಣನೆಂದು ಪರಿಗಣಿಸಲ್ಟಡುವವರು ಕಿರಿಯರ ಕೂಳು ಕಸಿಯಲು ಯತ್ನಿಸಬಾರದು ಎಂದು ಸಲಹೆ ಮಾಡಿದ ಅವರು, ಈ ಬೇಡಿಕೆ ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೊಡಗಿನ ಎಲ್ಲಾ ಆದಿವಾಸಿ ಸಂಘಟನೆಗಳ ಸಭೆ ಕರೆದು ಚರ್ಚಿಸುವುದರೊಂದಿಗೆ ಉಗ್ರ ಹೋರಾಟಕ್ಕೆ ಅಣಿಯಾಗುವುದಾಗಿ ಘೋಷಿಸಿದರು.

 ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಪಿ.ಜೆ.ಅಶೋಕ, ಉಪಾಧ್ಯಕ್ಷ ಚಂದ್ರ ಹಾಗೂ ಉಪ ಕಾರ್ಯದರ್ಶಿ ಜೆ.ಕೆ.ಪ್ರೇಮಾ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು