News Kannada
Thursday, December 01 2022

ಕರ್ನಾಟಕ

ಜಲಸಂರಕ್ಷಣೆ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತದಿಂದ ತಡೆಗೋಡೆ ಉತ್ಸವ - 1 min read

Photo Credit :

ಜಲಸಂರಕ್ಷಣೆ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತದಿಂದ ತಡೆಗೋಡೆ ಉತ್ಸವ

ಕಾಸರಗೋಡು:  ಜಲ ಸಂರಕ್ಷಣೆ ನಿಟ್ಟಿನಲ್ಲಿ  ಜಿಲ್ಲೆಯ ಹೊಳೆ, ತೋಡು ಸೇರಿದಂತೆ  ಹರಿಯುವ ನೀರನ್ನು  ಸಂಗ್ರಹಿಸಿಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ  ತಡೆಗೋಡೆ ಉತ್ಸವ ಎಂಬ ಯೋಜನೆಯನ್ನು ಜಿಲ್ಲಾಡಳಿತ ಹಮ್ಮಿಕೊಂಡಿದ್ದು, ಆದಿತ್ಯವಾರ ಪಿಲಿಕೋಡ್ ಗ್ರಾಮಪಂಚಾಯತ್ ನ ಪಾಡಿಕ್ಕೀಲ್-ಅಯ್ಯಂಡಾಕುಳಂ ಎಂಬಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು  ಯೋಜನೆಗೆ ಚಾಲನೆ ನೀಡಿದರು.

ತಡೆಗೋಡೆ ಉತ್ಸವ ಸಪ್ತಾಹ ಡಿ.29ರಿಂದ 2020 ಜ.2 ವರೆಗೆ ನಡೆಯಲಿದ್ದು,  ಪ್ರತಿ ಗ್ರಾಮ ಪಂಚಾಯತ್ ಹಂತದಲ್ಲೂ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ನೈಸರ್ಗಿಕ ಜಲಸಂರಕ್ಷಣೆ ಇಂದಿನ ಕಾಲಘಟ್ಟದ ಅನಿವಾರ್ಯತೆಯಾಗಿದ್ದು, ಕಾಸರಗೋಡು ಜಿಲ್ಲೆ ಇತರರಿಗೆ ಮಾದರಿಯಾಗುವ ರೀತಿ ನಡೆಯಲಿರುವ “ತಡೆಗೋಡೆ ಉತ್ಸವ” ಸಪ್ತಾಹ  ಆರಂಭಗೊಳ್ಳಲಿದೆ.  ಜಿಲ್ಲೆಯ ಎಲ್ಲ ವಿ.ಸಿ.ಬಿ.ಗಳ, ಚೆಕ್ ಡ್ಯಾಂ ಗಳ, ರೆಗ್ಯುಲೇಟರ್ ಗಳ ಶಟರ್ ಗಳನ್ನು ಮುಚ್ಚುಗಡೆ ನಡೆಸಿ ಗರಿಷ್ಠ ಮಟ್ಟದಲ್ಲಿ ಜಲಸಂರಕ್ಷಣೆ ನಡೆಸುವಂತೆ ಜಿಲ್ಲಾಧಿಕಾರಿ ಆದೇಶಿಸಿದರು. ಈಗಿರುವ ಜಲಸಂರಕ್ಷಣೆಯ ನಿರ್ಮಾಣಗಳಿಂದ ಮಾತ್ರ ಸೂಕ್ತಪ್ರಮಾಣದ ಜಲಸಂಗ್ರಹವಾಗದೇ ಇರುವ ಕಾರಣ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ ನೇತೃತ್ವದಲ್ಲಿ ತಡೆಗೋಡೆ ಮಹೋತ್ಸವ ನಡೆಸಲು ಸಿದ್ಧತೆ ಮಾಡಲಾಗಿದೆ. 12 ನದಿಗಳ ಸಹಿತ ಜಲಾಶಯಗಳನ್ನು ಅಳವಡಿಸಿ ಈ ವರ್ಷ ಜಿಲ್ಲೆಯಲ್ಲಿ 2400 ತಡೆಗೋಡೆ ನಿರ್ಮಿಸಲಾಗುವುದು. ಒಂದು ವಾರ್ಡಿನಲ್ಲಿ ಒಂದು ತಡೆಗೋಡೆ ಎಂಬ ರೀತಿ ಪಂಚಾಯತೊಂದರ 10 ವಾರ್ಡ್ ಗಳಲ್ಲಿ ತಡೆಗೋಡೆ ನಿರ್ಮಿಸಲಾಗುವುದು .                                             

ತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿ ಜಿಯೋ ರೆಫೆರೆನ್ಸ್ ವರದಿ ಜ.4 ರ ಮುಂಚಿತವಾಗಿ ಸಲ್ಲಿಸುವಂತೆ ಪಂಚಾಯತ್ ಅಧ್ಯಕ್ಷರಿಗೆ ಆದೇಶಿಸಲಾಗಿದೆ. 5 ವರ್ಷದ ಕಾಲಾವಧಿಯನ್ನು ಮುಂಗಡವಾಗಿ ಕಂಡುಕೊಂಡು ತಡೆಗೋಡೆ ನಿರ್ಮಿಸಬೇಕು. 3 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 630 ಜಲಾಶಯಗಳಲ್ಲಿ ಪೂರ್ಣರೂಪದಲ್ಲಿ ತಡೆಗೋಡೆ ನಿರ್ಮಿಸಿ, ಜಿಲ್ಲೆಯ ಜಲ ಸಂಗ್ರಹಾಗಾರಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಜೊತೆಗೆ ತಡೆಗೋಡೆಗಳಿಗೆ ಆನ್ ಲೈನ್ ಮೋನಿಟರಿಂಗ್ ಏರ್ಪಡಿಸಲು ತೀರ್ಮಾನಿಸಲಾಗಿದೆ. ಈ ಮೂಳಕ ತಡೆಗೋಡೆಗಳ ದುರಸ್ತಿ ಕಾಮಗಾರಿ ಸೂಕ್ತ ಕ್ರಮದಲ್ಲಿ ನಡೆಸಲು ಸಾಧ್ಯವಾಗಲಿದೆ.

 ತಡೆಗೋಡೆ ಉತ್ಸವದ ಯಶಸ್ಸಿಗೆ ಸ್ಥಳೀಯ ಮಟ್ಟದ ಸಂಘಟಕ ಸಮಿತಿ ರಚಿಸಲು ಮತ್ತು ಜಲಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ. ತಡೆಗೋಡೆ ಸಪ್ತಾಹದಲ್ಲಿ ನಿರ್ಮಿಸಲಾದ ತಡೆಗೋಡೆಗಳ ಕುರಿತು ಮಾಹಿತಿಗಳನ್ನು 2020 ಜ.4ರಂದು ಆಯಾ ಗ್ರಾಮಪಂಚಾಯತ್ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ನೀರಿನ ಬರಗಾಲದ ವೇಳೆ ಟಾಂಕರ್ ಲಾರಿ ಮೂಲಕ ನೀರು ಸರಬರಾಜು ನಡೆಸಲು ಅನುಮತಿ ನೀಡುವಲ್ಲಿ ಈ ತಡೆಗೋಡೆಗಳ ನಿರ್ಮಾಣ ಸಂಖ್ಯೆ ಪರಿಶೀಲನೆಯೊಂದಿಗೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಿಲಿಕ್ಕೋಡ್ ನಲ್ಲಿ  ನಡೆದ ಸಮಾರಂಭದಲ್ಲಿ  ಗ್ರಾಮ ಪಂಚಾಯತ್  ಅಧ್ಯಕ್ಷ  ಟಿ. ವಿ  ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ  ಪಿ . ಶೈಲಜಾ ,  ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್   ಜಿಲ್ಲಾ ಅಧಿಕಾರಿ    ಇ. ಪಿ  ರಾಜ್ ಮೋಹನ್ , ಎಂ . ಕುಞರಾಮನ್, ಎಂ . ಟಿ ಪಿ ಮೈಮೂನಾ , ಪಿ . ವಿ  ಚಂದ್ರನ್ , ಪಿ .ಶಾಂತಾ , ಟಿ .ಪಿ ರಾಘವನ್ , ಕೆ . ರಮೇಶನ್ , ಕೃಷಿ ಅಧಿಕಾರಿ ಪಿ . ಡಿ   ಜೆಲೆಶನ್  ಮೊದಲಾದವರು ಉಪಸ್ಥಿತರಿದ್ದರು

See also  ಕದ್ದು ಗೋಧಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಅಂಗನವಾಡಿ ಕಾರ್ಯಕರ್ತೆ: 11ಕೆ.ಜಿ. ಗೋಧಿ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು