News Kannada
Tuesday, November 29 2022

ಕರ್ನಾಟಕ

ಇರುಳಿಗರ ಕಾಲೋನಿಯಲ್ಲಿ ವಿನೂತನ ಗ್ರಾಮಸೇವೆ - 1 min read

Photo Credit :

ಇರುಳಿಗರ ಕಾಲೋನಿಯಲ್ಲಿ ವಿನೂತನ ಗ್ರಾಮಸೇವೆ

ರಾಮನಗರ: ರಾಜ್ಯದ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ, ಪ್ರಧಾನ ಮಂತ್ರಿ ಹೆಸರು ನರೇಂದ್ರ ಮೋದಿ, ರಾಷ್ಟ್ರಪತಿ ರಾಮಾನಾಥ ಕೋವಿಂದ್…..ಹೀಗೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸಿದ್ದು ಇರುಳಿಗ ಸಮುದಾಯದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು.

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಶ್ರೀ ರಾಮದೇವರ ಬೆಟ್ಟದ ತಪ್ಪಲಿನಲ್ಲಿರುವ ಇರುಳಿಗರ ಕಾಲೋನಿಯಲ್ಲಿ ಆಯೋಜಿಸಿದ್ದ ವಿನೂತನ ಗ್ರಾಮಸೇವೆ ಕಾರ್ಯಕ್ರಮದಲ್ಲಿ ರಾತ್ರಿ ವಾಸ್ತವ್ಯವಿದ್ದ ಜಿಲ್ಲಾ ವಾರ್ತಾಧಿಕಾರಿ ಎಸ್.ಶಂಕರಪ್ಪ ಅವರು ಮಕ್ಕಳೊಂದಿಗೆ ಸಹ ಭೋಜನ ಸೇವಿಸಿ ನಂತರ ನಡೆದ ಸಂವಾದದಲ್ಲಿ ಇರುಳಿಗರ ಮಕ್ಕಳ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಿಕೊಂಡರು.

ಸರ್ಕಾರದ ಸೌಲಭ್ಯಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಮಕ್ಕಳು ಶಾಲೆಯಲ್ಲಿ ಸಮವಸ್ತ್ರ, ಶೂಗಳು, ಊಟ ಮತ್ತು ಪುಸ್ತಕಗಳು ಉಚಿತವಾಗಿ ದೊರಕುತ್ತಿದ್ದು  ಶಾಲೆಯ ಮುಖ್ಯೋಪಾದ್ಯಾಯಿನಿ ಅವರು ಉತ್ತಮ ರೀತಿಯಲ್ಲಿ ನಿಗಾ ವಹಿಸಿ ವಿದ್ಯೆ ಕಲಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ತಮ್ಮ ಪೋಷಕರು ಕೂಲಿ ಮಾಡಿ ಜೀವನ ಮಾಡುತ್ತಿದ್ದಾರೆ. ನಾವು ಓದಿ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳುತ್ತೆವೆ ಎಂದು ಹೇಳಿದ ಮಕ್ಕಳು, ಪೊಲೀಸ್, ಪೋಸ್ಟ್ ಮಾಸ್ಟರ್, ಡಾಕ್ಟರ್ ಆಗುವ ಗುರಿ ಹೊಂದಿರುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕಾಗುಣಿತ, ಮಗ್ಗಿ, ಕನ್ನಡ ಹಾಗೂ ಇಂಗ್ಲೀಷ್  ಪದಗಳನ್ನು ಕುರಿತ ಕೇಳಿದ ಪ್ರಶ್ನೆಗಳಿಗೂ ಸರಾಗವಾಗಿ ಉತ್ತರ ನೀಡಿ ಗಮನ ಸೆಳೆದರು.

ವೈಯಕ್ತಿಕ ಸ್ವಚ್ಛತೆ ಹಾಗೂ ಉತ್ತಮ ನಡವಳಿಕೆ ಕುರಿತು ಜಿಲ್ಲಾ ವಾರ್ತಾಧಿಕಾರಿ ಎಸ್.ಶಂಕರಪ್ಪ ಅವರು ಮಾತನಾಡಿ, ಪ್ರತಿನಿತ್ಯ ಶುಚಿಯಾಗಿ ಶಾಲೆಗೆ ಆಗಮಿಸುವ ಜೊತೆಗೆ ಪತ್ರಿಕೆಗಳನ್ನು ಓದುವ ರಾಜ್ಯ ಮತ್ತು ದೇಶದ ಆಗು-ಹೋಗುಗಳನ್ನು ಅರಿತುಕೊಂಡು ಸಾಮಾನ್ಯ ಜ್ಞಾನವನ್ನು ಮೂಲಕ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ದಾನಿಯೊಬ್ಬರಿಂದ ಶಾಲಾ ಬ್ಯಾಗ್, ನೋಟ್ ಪುಸ್ತಕ ಹಾಗೂ ಇತರ ಪರಿಕರಗಳನ್ನು ವಿತರಿಸಲಾಯಿತು. ಹಲವು ತಿಂಗಳಿಂದ  ತಲೆಕೂದಲು ಬೆಳೆಸಿಕೊಂಡಿದ್ದ 15ಕ್ಕೂ ಹೆಚ್ಚು ಮಕ್ಕಳಿಗೆ ವಾರ್ತಾಧಿಕಾರಿ ತಮ್ಮ ಸ್ವಂತ ಖರ್ಚಿನಲ್ಲಿ ಸವಿತಾ ಸಮಾಜದವರಿಂದ ಕ್ಷೌರ ಮಾಡಿಸಿ ಶುಭ್ರತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದರು.

ರಾತ್ರಿ ಅಲ್ಲಿಯೇ ವಾಸ್ತವ್ಯಹೂಡಿ  ಇರುಳಿಗ ಮುಖಂಡ ಕೃಷ್ಣಮೂರ್ತಿ ಸೇರಿದಂತೆ ಮುಂತಾದ ಮುಖಂಡರೊಂದಿಗೆ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಕುರಿತು ಇರುಳಿUಸಮುದಾಯದ ಜನರಿಗೆ ತಿಳುವಳಿಕೆ ಮೂಡಿಸಿದರು.

See also  ಧಾನ್ ಫೌಂಡೇಷನ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು