News Kannada
Tuesday, November 29 2022

ಕರ್ನಾಟಕ

ನಂಬರ್ ಪ್ಲೇಟ್‍ಗಳಲ್ಲಿ ಹೆಸರು, ಚಿಹ್ನೆ, ಲಾಂಛನ ತೆರವಿಗೆ ಸೂಚನೆ - 1 min read

Photo Credit :

ನಂಬರ್ ಪ್ಲೇಟ್‍ಗಳಲ್ಲಿ ಹೆಸರು, ಚಿಹ್ನೆ, ಲಾಂಛನ ತೆರವಿಗೆ ಸೂಚನೆ

ಮಂಡ್ಯ: ನಿಯಮ ಬಾಹಿರವಾಗಿ ವಾಹನಗಳ ನಂಬರ್ ಪ್ಲೇಟ್‍ಗಳಲ್ಲಿ ನಮೂದಿಸಲಾಗಿದ್ದ ಹೆಸರು, ಚಿಹ್ನೆ, ಲಾಂಛನ ಇತ್ಯಾದಿಗಳನ್ನು ತೆರವುಗೊಳಿಸದಿದ್ದಲ್ಲಿ ಅಂತಹ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತಮ್ ಎಚ್ಚರಿಕೆ ನೀಡಿದರು.

ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ಸಾರಿಗೆ ಇಲಾಖೆ ಜಂಟಿ ಆಯುಕ್ತರ ಆದೇಶದ ಮೇರೆಗೆ ವಾಹನಗಳಿಗೆ ಅಳವಡಿಸಲಾಗಿದ್ದ ನಂಬರ್ ಪ್ಲೇಟ್‍ಗಳ ಮೇಲೆ ನಮೂದಿಸಿದ್ದ ಹೆಸರು, ಚಿಹ್ನೆ, ಲಾಂಛನ ತೆರವು ಕಾರ್ಯಾಚಾರಣೆ ನಡೆಸಿದ ವೇಳೆ ಮಾತನಾಡಿದ ಅವರು, ಅಪಘಾತ ಇತರೆ ಸಂದರ್ಭಗಳು ಮತ್ತು ವಾಹನಗಳ ನಂಬರ್‍ಗಳನ್ನು ನಿಖರವಾಗಿ ತಿಳಿಯುವ ಉದ್ದೇಶದಿಂದ ನಂಬರ್‍ಪ್ಲೇಟ್‍ ಗಳಲ್ಲಿ ನಂಬರ್‍ನ್ನು ಮಾತ್ರ ಅಳವಡಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ  ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.

ಕೇಂದ್ರ ಮೋಟಾರು ವಾಹನಗಳ ನಿಯಮದನ್ವಯ ಆರ್.ಟಿ.ಓ. ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ನಿಯಮಬಾಹಿರ ನಂಬರ್ ಪ್ಲೇಟ್‍ನಲ್ಲಿ ಅಳವಡಿಸಿದ್ದ ಹೆಸರು, ಇತರೆ ಚಿಹ್ನೆಗಳನ್ನು ತೆರವುಗೊಳಿಸಲಾಗುವುದು. ನಮ್ಮ ಇನ್ಸ್‍ಪೆಕ್ಟರ್‍ಗಳು, ಅಧಿಕಾರಿಗಳು ವಾಹನ ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ನಿಯಮಬಾಹಿರವಾಗಿ ಅಳವಡಿಸಿರುವ ನಂಬರ್‍ಪ್ಲೇಟ್‍ಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಅಂತಹ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುವುದು. ಇಲ್ಲವೇ ಶಿಕ್ಷೆಗೆ ಗುರಿಪಡಿಸಲಾಗುವುದು. ತಕ್ಷಣ ವಾಹನಗಳ ನಂಬರ್‍ಪ್ಲೇಟ್‍ನಲ್ಲಿ ನಮೂದಿಸಿರುವ ಹೆಸರು, ಚಿಹ್ನೆ, ಲಾಂಛನವನ್ನು ತೆರವುಗೊಳಿಸಿ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಕೋರಿದರು.

ಆರ್.ಟಿ.ಓ. ಇನ್ಸ್‍ಪೆಕ್ಟರ್‍ಗಳಾದ ಕೆ. ಜವರಯ್ಯ, ಸೈಫುದ್ದೀನ್‍ಖಾನ್ ಇತರೆ ಅಧಿಕಾರಿಗಳು ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

See also  ಉ.ಕನ್ನಡ ಕೈ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು