News Kannada
Sunday, November 27 2022

ಕರ್ನಾಟಕ

ದಲಿತನೆಂದು ದೌರ್ಜನ್ಯ: ಕಠಿಣ ಕ್ರಮ ಕೈಗೊಳ್ಳಲು ಟಿ.ಈ ಸುರೇಶ್ ಆಗ್ರಹ - 1 min read

Photo Credit :

ದಲಿತನೆಂದು ದೌರ್ಜನ್ಯ: ಕಠಿಣ ಕ್ರಮ ಕೈಗೊಳ್ಳಲು ಟಿ.ಈ ಸುರೇಶ್ ಆಗ್ರಹ

ಮಡಿಕೇರಿ: ದಲಿತನೆಂಬ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯ ಕೆಲವು ಸಿಬ್ಬಂದಿ ಸಿದ್ದೇಶ್ವರನ್ ಅವರ ಮೇಲೆ ದೌರ್ಜನ್ಯ ಎಸಗಿದ್ದು, ಆರೋಪಿಗಳ ವಿರುದ್ದ ಅಟ್ರಾಸಿಟಿ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಬೇಕು ಎಂದು ದಲಿತ ಮುಖಂಡ ಟಿ.ಈ.ಸುರೇಶ್ ಅವರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುತ್ತಿಗೆದಾರರೊಬ್ಬರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವರೆನ್ನಲಾದ ಲೋಕೋಪಯೋಗಿ ಇಲಾಖೆಯ ಐದು ಮಂದಿ ಸಿಬ್ಬಂದಿ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪರಿಶಿಷ್ಟ ಜಾತಿ-ಪಂಗಡ ದೌರ್ಜನ್ಯ (ಅಟ್ರಾಸಿಟಿ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದರು.

ನಗರದ ಸುದರ್ಶನ ವಸತಿಗೃಹದ ಹಿಂಭಾಗದ ನಿವಾಸಿ ಸಿ.ಪಿ.ಸಿದ್ದೇಶ್ವರನ್ ಅವರು ನೀಡಿದ ದೂರಿನ ಅನ್ವಯ ನಗರ ಠಾಣೆ ಪೊಲೀಸರು ಐವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಗುತ್ತಿಗೆದಾರರಾಗಿರುವ ಸಿದ್ದೇಶ್ವರನ್ ಅವರು ತಾವು ನಿರ್ವಹಿಸಿದ ಕಾಮಗಾರಿಯ ಬಿಲ್ ಪಾವತಿಸುವಂತೆ ಕೇಳಲು ನ.30ರಂದು ಲೋಕೋಪಯೋಗಿ ಇಲಾಖೆಯ ಕಚೇರಿಗೆ ತೆರಳಿದ ಸಂದರ್ಭ ಕೆಲವು ಸಿಬ್ಬಂದಿ ಜಾತಿಯ ಬಗ್ಗೆ ಪ್ರಸ್ತಾಪಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ ಏಕಾಏಕಿ ಕುತ್ತಿಗೆಗೆ ಕೈಹಾಕಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅದಾದ ಬಳಿಕ ಡಿ.23ರಂದು ಮತ್ತೆ ಬಿಲ್ ಬಗ್ಗೆ ವಿಚಾರಿಸಲು ತೆರಳಿದಾಗಲೂ ಮತ್ತೆ ಅದೇ ರೀತಿಯಾಗಿ ವರ್ತಿಸಿದ್ದಲ್ಲದೆ, ಕೆಲವು ಪತ್ರಗಳಿಗೆ ಒತ್ತಾಯಪೂರ್ವಕವಾಗಿ ಸಹಿ ಪಡೆದಿದ್ದಾರೆ ಎಂದು ಸುರೇಶ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮುದ್ದುರಾಜ್ ಉಪಸ್ಥಿತರಿದ್ದರು.

See also  ಅನಾರೋಗ್ಯದಿಂದ ಬಳಲುತ್ತಿದ್ದ ಅನಾಥೆಯನ್ನು ರಕ್ಷಿಸಿದ ಸಮಾಜ ಸೇವಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು