News Kannada
Friday, December 09 2022

ಕರ್ನಾಟಕ

ಪತ್ನಿಗೆ ಚಾಕು ಇರಿದ ಪತಿ ಪೊಲೀಸರಿಗೆ ಶರಣು

Photo Credit :

ಪತ್ನಿಗೆ ಚಾಕು ಇರಿದ ಪತಿ ಪೊಲೀಸರಿಗೆ ಶರಣು

ಶಿವಮೊಗ್ಗ: ಪತ್ನಿಯ ಮೇಲೆ ಅನುಮಾನಪಟ್ಟು ಚಾಕು ಇರಿದ ಆರೋಪಿ ಪೊಲೀಸ್ ಠಾಣೆಗೆ ಶರಣಾದ ಘಟನೆ ಮಿಳಘಟ್ಟದಲ್ಲಿ ನಡೆದಿದೆ.

ಆರ್ಮುಗಂ ಎಂಬ ವ್ಯಕ್ತಿ ಪತ್ನಿ ಅಂಜಲಿಯ ಮೇಲೆ ಅನುಮಾನ ಪಟ್ಟು ಚಾಕುವಿನಿಂದ ಬೆನ್ನಿಗೆ, ಕೈಗೆ ಹಾಗೂ ಕಾಲಿಗೆ ಇರಿದಿದ್ದಾನೆ.

ಈ ಘಟನೆಗೆ ಪತ್ನಿಯ ಮೇಲೆ ಸಂಶಯದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. 

ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಅರಮನೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಆರ್ಮುಗಂ ಒಂದು ತಿಂಗಳ ಹಿಂದೆ ತಮಿಳು ನಾಡಿಗೆ ಹೋಗಿದ್ದ ಇಂದು ವಾಪಾಸಾದ ಆರ್ಮುಗಂ ಬೆಳಿಗ್ಗೆ ಮನೆಗೆ ಬಂದೊಡನೆ ಮನೆಯ ಬಾಗಿಲು ಹಾಕಿಕೊಂಡು ಪತ್ನಿ ಯೊಂದಿಗೆ ಜಗಳವಾಡಿದ್ದಾನೆ.

ಅಂಜಲಿಯ ತಂದೆ ಮನೆಗೆ ಬಂದು ಬಾಗಿಲು ತಟ್ಟಿದರೂ ಬಾಗಿಲು ತೆರೆಯದ ಆರ್ಮುಗಂ ನಂತರ ಬಾಗಿಲು ಮುರಿದು ಒಳಗೆ ಹೋದಾಗ ಅಂಜಲಿ ರಕ್ತದ ಮಡುವಿನಲ್ಲಿ ಮಲಗಿದ್ದಳು.

ತಕ್ಷಣವೇ ಆಕೆಯನ್ನ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್ಮುಗಂ ನೇರವಾಗಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಳಘಟ್ಟದಲ್ಲಿ ನಡೆದ ಘಟನೆ ಕುರಿತು ಚಾಕು ಇರಿತಕ್ಕೆ ಒಳಗಾದ ಮಹಿಳೆಯ ಕುಟುಂಬದವರು ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

 

 

See also  ಗ್ರಾಮೀಣ ಜನರಿಗೆ ವರದಾನವಾಗಲಿದೆ ಸರ್ಕಾರದ ಕೋಳಿ ಭಾಗ್ಯ ಯೋಜನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು