News Kannada
Friday, December 02 2022

ಕರ್ನಾಟಕ

ಮಡಿಕೇರಿಯಲ್ಲಿ ಸಾವಿತ್ರಿಬಾಯಿ ಫುಲೆ ದಿನಾಚರಣೆ

Photo Credit :

ಮಡಿಕೇರಿಯಲ್ಲಿ ಸಾವಿತ್ರಿಬಾಯಿ ಫುಲೆ ದಿನಾಚರಣೆ

ಮಡಿಕೇರಿ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಸಂಯುಕ್ತಾಶ್ರಯದಲ್ಲಿ ದೇಶದ ಅಪ್ರತಿಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ದಿನಾಚರಣೆಯು ನಗರದ ಸಂತ ಮೈಕಲರ ಶಾಲೆಯಲ್ಲಿ ಶುಕ್ರವಾರ ನಡೆಯಿತು.

ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕಾರ್ಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎನ್.ಗಾಯತ್ರಿ(ಮಡಿಕೇರಿ), ಶ್ರೀಶೈಲ ಬೀಳಗಿ(ವಿರಾಜಪೇಟೆ), ಎಚ್.ಕೆ.ಪಾಂಡು(ಸೋಮವಾರಪೇಟೆ), ಕೂಡಿಗೆ ಡಯಟ್‍ನ ಹಿರಿಯ ಉಪನ್ಯಾಸಕರಾದ ಮಲ್ಲೇಸ್ವಾಮಿ ಅವರು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಚಿತ್ರಕಲಾವಿದರಾದ ಬಿ.ಆರ್.ಸತೀಶ್ ಅವರು ಸಾವಿತ್ರಿಬಾಯಿ ಫುಲೆ ಅವರ ಚಿತ್ರ ರಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ಮಾತನಾಡಿ, 1831 ಜನವರಿ 3ರಂದು ಹಿಂದುಳಿದ ಸಮುದಾಯದಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆ ಅವರು, ದೇಶದ ಇತಿಹಾಸದಲ್ಲಿ ಅತ್ಯಂತ ಮಹನೀಯರು. ಸ್ತ್ರೀ ಸ್ವಾತಂತ್ರ್ಯ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೋರಾಟ ನಡೆಸಿದರು. ಒಂಭತ್ತನೇ ವಯಸ್ಸಿನಲ್ಲಿ ಬಾಲ್ಯವಿವಾಹವಾಗಿತ್ತು. ಪತಿ ಜ್ಯೋತಿರಾವ್ ಫುಲೆ ಅವರು ವಿದ್ಯಾವಂತರಾಗಿದ್ದ ಕಾರಣ, ತಮ್ಮ ಪತ್ನಿಗೂ ಅಕ್ಷರಾಭ್ಯಾಸ ಮಾಡಿಸಿದರು. ಬಳಿಕ ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಲು ಮುಂದಾದರು. ಸಮಾಜದಲ್ಲಿ ಸಾಕಷ್ಟು ಟೀಕೆ-ಟಿಪ್ಪಣಿಗಳು ಬಂದರೂ ಸಹ ಯಾವುದಕ್ಕೂ ಸಾವಿತ್ರಿಬಾಯಿ ಫುಲೆ ಅವರು ಎದೆಗುಂದದೆ ಹೋರಾಟ ಮುಂದುವರೆಸಿದರು ಎಂದು ತಿಳಿಸಿದರು.

ದೇಶದ ಮೊದಲ ಮಹಿಳಾ ಶಿಕ್ಷಕಿಯಾಗುವುದರೊಂದಿಗೆ ಶಿಕ್ಷಕ ವೃತ್ತಿಗೆ ಹೆಚ್ಚಿನ ಘನತೆಯನ್ನು ತಂದುಕೊಟ್ಟರು. ಸ್ವಾತಂತ್ರ್ಯ ಪೂರ್ವದಲ್ಲೇ ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ ಅವರ ಸಾಧನೆ ಇಂದಿನ ಯುವ ಶಿಕ್ಷಕ ವರ್ಗಕ್ಕೆ ಸ್ಫೂರ್ತಿದಾಯಕ ಎಂದು ನುಡಿದರು.

ವಿರಾಜಪೇಟೆ ತಾಲೂಕಿನ ಸಂತ ಅನ್ನಮ್ಮ ಪ್ರೌಢಶಾಲೆಯ ಶಿಕ್ಷಕರಾದ ಕ್ಲಿಪರ್ಡ್ ಡಿ ಮೆಲ್ಲೋ ಅವರು “ಕಲಿಸು ಗುರುವೇ ಕಲಿಸು” ರಾಗ ಸಂಯೋಜನೆ ನುಡಿಸಿದರು. 

ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಕುಂತಿ ಬೋಪಯ್ಯ, ಪ್ರೌಢಶಾಲಾ ಶಿಕ್ಷಕರು ಇತರರು ಹಾಜರಿದ್ದರು. ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಎಸ್.ಟಿ.ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು. ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಲೋಕೇಶ್ ಪ್ರಾರ್ಥಿಸಿದರು.

See also  ಮಂಜೇಶ್ವರದಲ್ಲಿ ಬಾಲಕ ನಿಗೂಢ ಸಾವು?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು