News Kannada
Friday, December 02 2022

ಕರ್ನಾಟಕ

ಚಿಕಿತ್ಸೆ ನೀಡುವ ವೈದ್ಯರೇ ನಿಜವಾದ ದೇವರು!

Photo Credit :

ಚಿಕಿತ್ಸೆ ನೀಡುವ ವೈದ್ಯರೇ ನಿಜವಾದ ದೇವರು!

ಮಂಡ್ಯ: ಕೊರೊನಾ ಐಸೋಲೇಷನ್ ವಾರ್ಡ್‍ನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೇ ನಿಜವಾದ ದೇವರು ಎಂದು ಕೊರೊನಾ ಸೋಂಕಿನಿಂದ ಗುಣಮುಖರಾದ ನಗರದ ಸ್ವರ್ಣಸಂದ್ರ ಬಡಾವಣೆಯ ನಿವಾಸಿ ವೈದ್ಯರ ಕುರಿತಂತೆ ಶ್ಲಾಘನೀಯ ಮಾತುಗಳನ್ನಾಡಿದ್ದಾರೆ.

ಕೊರೊನಾ ನನಗೆ ಬಂದದ್ದು ಅನಿರೀಕ್ಷಿತ. ಈ ಸಮಯದಲ್ಲಿ ನಾನು ಹೋಂ ಹಾಗೂ ಹಾಸ್ಟೆಲ್ ಕ್ವಾರಂಟೈನ್‍ಗೆ ಒಳಗಾದೆ. ಆರಂಭದಲ್ಲಿ ಇದೊಂದು ವಿಚಿತ್ರ ಅನುಭವದಂತೆ ಕಾಣಿಸಿತು. ನನ್ನ ಜೊತೆ ನನ್ನ ತಂದೆ-ತಾಯಿ, ತಂಗಿ ಹಾಗೂ ಆಕೆಯ ಮಗಳಿಗೂ ಕ್ವಾರಂಟೈನ್ ಮಾಡಿದರು. ಸುತ್ತಮುತ್ತಲಿನ ಜನರೂ ತೊಂದರೆಗೊಳಗಾದರು. ಇದೆಲ್ಲವೂ ನನ್ನನ್ನು ಮಾನಸಿಕವಾಗಿ ಕುಗ್ಗಿಸಿದವು ಎಂದು ಹೇಳಿದರು.

ಐಸೋಲೇಷನ್ ವಾರ್ಡ್‍ಗೆ ದಾಖಲಾದ ಸಮಯದಲ್ಲಿ ಅಲ್ಲಿ ವೈದ್ಯರು ಸುರಕ್ಷಾ ಕವಚಗಳನ್ನು ಧರಿಸಿ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದರು. ಮಾನಸಿಕ ತಜ್ಞರು ಸೋಂಕಿತರ ಜೊತೆ ಕೌನ್ಸಿಲಿಂಗ್ ನಡೆಸುತ್ತಾ ಆತ್ಮಸ್ಥೆರ್ಯ ತುಂಬಿದರು. ಊಟ, ಚಿಕಿತ್ಸೆ, ಭದ್ರತೆಯಿಂದ ಹಿಡಿದು ನಮಗೆ ಯಾವುದೇ ರೀತಿಯಲ್ಲೂ ಕೊರತೆಯಾಗದಂತೆ ಉತ್ತಮ ಸಹಕಾರ ನೀಡಿದರು. ರವೆ ಇಡ್ಲಿ, ಪೊಂಗಲ್, ಬಿಸಿಬೇಳೆಬಾತ್ ಸೇರಿದಂತೆ ತಿಂಡಿ-ಊಟವನ್ನು ಚೆನ್ನಾಗಿಯೇ ನೀಡುತ್ತಿದ್ದರು. ಅದನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ನುಡಿದರು.

 

ಏ.7ರಂದು ನನಗೆ ಕೊರೊನಾ ಪಾಸಿಟೀವ್ ವರದಿ ಬಂತು. ಏ.8ಕ್ಕೆ ಆಸ್ಪತ್ರೆಗೆ ದಾಖಲಾದೆ. ಮರುದಿನದಿಂದ ಚಿಕಿತ್ಸೆ ಆರಂಭಿಸಿದರು. ಇಸಿಜಿ, ರಕ್ತದೊತ್ತಡ ಪರೀಕ್ಷೆ ನಡೆಸಿ, ಅಲ್ಲಿಂದ ಏಳನೇ ದಿನಕ್ಕೆ ರಕ್ತವನ್ನು ಪರೀಕ್ಷಿಸಿದರು. ಏ.20ಕ್ಕೆ ಮಲ-ಮೂತ್ರ, ರಕ್ತ, ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಬಂದಿತು. ಮತ್ತೆ ಏ.23ರಂದು ಮೂಗು ಮತ್ತು ಗಂಟಲಿನ ದ್ರವವನ್ನು ತೆಗೆದು ಪರೀಕ್ಷೆಗೆ ಕಳುಹಿಸಿದರು. 24 ಗಂಟೆಯಲ್ಲಿ ಆ ವರದಿಯೂ ನೆಗೆಟಿವ್ ಬಂದಿತು. ಮರು ದಿನವೇ ನನ್ನನ್ನು ಬಿಡುಗಡೆ ಮಾಡಬೇಕಿದ್ದರೂ ಕೆಲವು ನಿಯಮಗಳನ್ನು ಪಾಲಿಸಬೇಕಿದ್ದರಿಂದ ಏ.28ರಂದು ಬಿಡುಗಡೆ ಮಾಡಿದ್ದಾರೆ. ಈಗ ಸಂಪೂರ್ಣ ಗುಣಮುಖನಾಗಿದ್ದೇನೆ. ತಂದೆ-ತಾಯಿಯೊಂದಿಗೆ ಕೂಡಿಕೊಂಡಿದ್ದೇನೆ ಎಂದು ಹೇಳಿದರು.

ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದ ನನ್ನನ್ನು ನನ್ನ ಬೀದಿಯ ನಿವಾಸಿಗಳು ಹೀರೋ ರೀತಿ ಸ್ವಾಗತಿಸಿದರು. ಬಡಾವಣೆಯ ನಿವಾಸಿಗಳ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಅವರ ಪ್ರೀತಿಯನ್ನು ಕಂಡು ನನ್ನ ಹೃದಯ ತುಂಬಿ ಬರುತ್ತಿದೆ ಎಂದು ಆನಂದ ಬಾಷ್ಪ ಸುರಿಸಿದರು.

See also  ಮುಂಗಾರು ಬೆಳೆ ಸಮೀಕ್ಷೆ ಆಪ್ ಬಿಡುಗಡೆ ಮಾಡಿದ ಸಚಿವ ಜಗದೀಶ್ ಶೆಟ್ಟರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು