News Kannada
Saturday, December 03 2022

ಕರ್ನಾಟಕ

ರಾಜ್ಯದಲ್ಲಿ ಪ್ಲಾಸ್ಮ ಥೆರಪಿ ಮುಂದುವರಿಕೆ: ಸಚಿವ ಶ್ರೀರಾಮುಲು

Photo Credit :

ರಾಜ್ಯದಲ್ಲಿ ಪ್ಲಾಸ್ಮ ಥೆರಪಿ ಮುಂದುವರಿಕೆ: ಸಚಿವ ಶ್ರೀರಾಮುಲು

ಹಾಸನ: ರಾಜ್ಯದಲ್ಲಿ ಪರಿಕ್ಷಾರ್ಥವಾಗಿ ಕೋವಿಡ್ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಪ್ರಾರಂಭಿಸಿದ್ದು, ಇದರ ಯಶಸ್ವಿಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಅದರ ಬಳಕೆಯ ಹೆಚ್ಚಳದ ಬಗ್ಗೆ ನಿರ್ಧರಿಸಲಾಗುವುದು ಎಂದು ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
 
ಹಾಸನದಲ್ಲಿ ಸಭೆ ಮುಗಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ 576 ಕೊರೋನಾ ಸೋಂಕಿತರಿದ್ದು ಅದರಲ್ಲಿ 235 ಜನರು ಈಗಾಗಲೇ ಗುಣಮುಖರಾಗಿದ್ದಾರೆ. ದಿನೇ ದಿನೇ ಕೊರೋನಾ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆಯು ಏರಿಕೆಯಾಗುತ್ತಿದ್ದು ತಜ್ಞರ ಸಲಹೆ ಮೇರೆಗೆ ಪ್ಲಾಸ್ಮಾ ಥೆರಪಿಯ ಪ್ರಯೋಗ ನಡೆಯುತ್ತಿದೆ ಎಂದರು. ಸಧ್ಯ ಪಿ.ಸಿ. ಆರ್ ಯಂತ್ರಗಳನ್ನು ಬಳಸಿಕೊಂಡು ಪರೀಕ್ಷೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರಳ ರೀತಿಯಲ್ಲಿ ಪರೀಕ್ಷೆಯನ್ನು ಮಾಡುವಂತಾಗಬೇಕು ಎಂದರು.
 
ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಸೇವಕರುಗಳಾದ ಪೊಲೀಸ್, ವೈದ್ಯರು ಮತ್ತು ಹೋಂಗಾರ್ಡ್ ಮತ್ತಿತರರ ಮೇಲೆ ಹಲ್ಲೆ ಮಾಡುವವರಿಗೆ ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ಇಂತಹ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಅವಶ್ಯಕವಾಗಿರುವ ರಕ್ತವನ್ನು ದಾನಿಗಳು ನೀಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಸಚಿವರು ಮನವಿ ಮಾಡಿದರು.
 
ಇನ್ನು ಕೊರೋನಾ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಮಾಧ್ಯಮದವರ ಶ್ರಮವು ಕೂಡ ಅಷ್ಟೇ ಇದ್ದು, ಇಂತಹ ಸಂದರ್ಭದಲ್ಲಿ ಅವರನ್ನು ಅಭಿನಂದಿಸಬೇಕಾಗುತ್ತದೆ. ಲಾಕ್ ಡೌನ್ ಸಡಿಲಿಕೆ ವಿಚಾರ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು. ಮೇ. 3 ರಂದು ಕೇಂದ್ರದಿಂದ ಆದೇಶದ ಪ್ರಕಟವಾಗಲಿದೆ. ಅದರನ್ವಯ ರಾಜ್ಯದಲ್ಲಿಯೂ ಕೆಲವು ನಿಯಮಗಳ ಅಡಿಯಲ್ಲಿ ಸಡಿಲಿಕೆ ಮಾಡಬಹುದು ಎಂದು ಭವಿಷ್ಯ ನುಡಿದರು.
 
ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಮಸ್ಯೆಯಿದೆ ಎಂದು ಶಾಸಕರುಗಳು ತಿಳಿಸಿದ್ದಾರೆ. ಆಸ್ಪತ್ರೆಗಳಿಗೆ ಬೇಕಾಗುವ ಎಲ್ಲಾ ಪರಿಕರಗಳನ್ನು ಒದಗಿಸುವಂತಹ ವ್ಯವಸ್ಥೆಯನ್ನು ಕೂಡಲೇ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
 
ಜಿಲ್ಲೆಗೆ ಹೊರಭಾಗದಿಂದ ಬಂದ 68 ಸಾವಿರಕ್ಕೂ ಹೆಚ್ಚು ಮಂದಿಯನ್ನು ಗೃಹಬಂಧನದಲ್ಲಿರುವಂತೆ ಮಾಡಿದ್ದೇವೆ. ಅದರ ಜೊತೆಗೆ ಹಾಸನವನ್ನು ಸೊಂಕು ಮುಕ್ತ ಜಿಲ್ಲೆಯಾಗಲು ಶ್ರಮಿಸಿರುವ ಜಿಲ್ಲಾಡಳಿತಕ್ಕೆ ತಾನು ಅಭಿನಂದಿಸುವುದಾಗಿ ಶ್ರೀರಾಮುಲು ಹೇಳಿದರು. 
See also  ಬಿಜೆಪಿಗೆ ರಾಜ್ಯದಲ್ಲಿ 22 ಸೀಟುಗಳಲ್ಲಿ ಗೆಲುವು ಖಚಿತ: ಕೆ.ಎಸ್. ಈಶ್ವರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು