News Kannada
Thursday, December 08 2022

ಕರ್ನಾಟಕ

ಕಲಬುರ್ಗಿ ಆಹಾರ ತಯಾರಿಕಾ ಕೇಂದ್ರಕ್ಕೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ

Photo Credit :

ಕಲಬುರ್ಗಿ ಆಹಾರ ತಯಾರಿಕಾ ಕೇಂದ್ರಕ್ಕೆ ಡಿಸಿಎಂ ಗೋವಿಂದ ಕಾರಜೋಳ ಭೇಟಿ

ಕಲಬುರಗಿ: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ಅರೋಗ್ಯ ಸಿಬ್ಬಂದಿ ಮತ್ತು ಕೊರೋನಾ ಸೋಂಕಿತರ ಸಂಪರ್ಕದಲ್ಲಿ ಬಂದು ಕಲಬುರಗಿ ನಗರದ ಕ್ವಾರಂಟೈನ್ ಸೆಂಟರ್‍ನಲ್ಲಿರುವವರಿಗೆ ಆಹಾರ ಪೂರೈಸುತ್ತಿರುವ ಕಲಬುರಗಿ ನಗರದ ರಾಮ ಮಂದಿರ ಬಳಿಯಿರುವ ಬಿ.ಸಿ.ಎಂ. ವಸತಿ ನಿಲಯದ ಆಹಾರ ತಯಾರಿಕಾ ಕೇಂದ್ರಕ್ಕೆ ಶನಿವಾರ ರಾಜ್ಯದ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ, ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಭೇಟಿ ನೀಡಿದರು.

ಅಡುಗೆ ಕೋಣೆ, ತರಕಾರಿ ಸಂಗ್ರಹಣೆ ಕೋಣೆಗಳನ್ನು ವೀಕ್ಷಿಸಿದ ಅವರು ತರಕಾರಿಗಳನ್ನು ನೀರಿನಲ್ಲಿ ಸ್ವಚ್ಛಗೊಳಿಸಿ ಅಡುಗೆ ತಯ್ಯಾರಿಸಬೇಕು ಎಂದು ಅಡುಗೆ ಸಿಬ್ಬಂದಿಗಳಿಗೆ ಸೂಚಿಸಿದರು. ಇನ್ನೂ ಮಧ್ಯಾಹ್ನ ಊಟಕ್ಕೆ ಪ್ಯಾಕ್ ಮಾಡಿ ಇಡಲಾದ ಚಪಾತಿ, ಪಲ್ಯಾ, ಅನ್ನ, ಸಾಂಬಾರ, ಹಣ್ಣು, ಮೊಟ್ಟೆ, ಡ್ರೈ ಫ್ರೂಟ್ಸ್ ಹೊಂದಿದ ಊಟವನ್ನು ಗಮನಿಸಿದ ಡಿ.ಸಿ.ಎಂ. ಗೋವಿಂದ ಕಾರಜೋಳ ಅವರು ಸ್ಟಾರ್ ಹೋಟೆಲ್‍ನಲ್ಲಿ ನೀಡುವಂತೆ ಇಲ್ಲಿ ಊಟ ಪೂರೈಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಹಾರ ತಯ್ಯಾರಿಕೆ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ ಅವರು ಮಾತನಾಡಿ ಬೆಳಿಗ್ಗೆ 700 ಜನರಿಗೆ ಉಪಹಾರ, ಮಧ್ಯಾಹ್ನ 1200 ಮತ್ತು ರಾತ್ರಿ 700 ಜನರಿಗೆ ಇಲ್ಲಿಂದ ಊಟ ಪೂರೈಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಡುಗೆ ತಯ್ಯಾರಿಕೆ ಸೇರಿದಂತೆ ಮೆಲ್ವಿಚಾರಣೆಯ ಸುಮಾರು 110 ಸಿಬ್ಬಂದಿಗಳು ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಅಜೀಂ ಪ್ರೇಮಜೀ ಸಂಸ್ಥೆಯಿಂದ ಸಾಕಷ್ಟು ಪ್ರಮಾಣದಲ್ಲಿ ಕಿರಾಣಿ ದಿನಸಿಗಳು ಪೂರೈಕೆಯಾಗುತ್ತಿದೆ. ಎ.ಪಿ.ಎಂ.ಸಿ. ಮೂಲಕ ದಾನಿಗಳಿಂದ ತಾಜಾ ತರಕಾರಿ ಪಡೆಯಲಾಗುತ್ತಿದೆ. ಶ್ರೀ ಗುರು ವಿದ್ಯಾ ಪೀಠದ ಸಂಸೈಯ ಬಸವರಾಜ ದಿಗ್ಗವಿ ವರು ಆಹಾರ ಪೂರೈಕೆಯಲ್ಲಿ ಕೈಜೋಡಿಸಿದ್ದಾರೆ. ಹಣ್ಣು, ಮೊಟ್ಟೆ, ಹಾಲು, ಮಜ್ಜಿಗೆ, ಡ್ರೈ ಫ್ರೂಟ್ಸ್, ಮೊಳಕೆ ಕಾಳು, ಗ್ಯಾಸ್ ಗಳನ್ನು ವಿಕೋಪ ಪರಿಹಾರ ನಿಧಿಯಿಂದ ಪಡೆಯಲಾಗುತ್ತಿದೆ. ಒಟ್ಟಾರೆ ಆರೋಗ್ಯ ಸಿಬ್ಬಂದಿ ಮತ್ತು ಕ್ವಾರಂಟೈನ್ ನನಲ್ಲಿರುವವರಿಗೆ ಗುಣಮಟ್ಟದ ಮತ್ತು ಪೌಷ್ಠಿಕಾಂಶದ ಅಹಾರ ವಿತರಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿಗಳಿಗೆ ರಮೇಶ ಸಂಗಾ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಲಬುರಗಿ ಸಂಸದ ಡಾ.ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ್ ಜಾಧವ್, ಕನೀಸ್ ಫತಿಮಾ, ಮೂಲಸೌಕರ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪೀಲ್ ಮೋಹನ, ಜಿಲ್ಲಾಧಿಕಾರಿ ಶರತ್ ಬಿ., ಕಲಬುರಗಿ ನಗರ ಪೆÇಲೀಸ್ ಆಯುಕ್ತ ಎನ್. ಸತೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ, ಐ.ಎ.ಎಸ್.ಪ್ರೊಬೇಷನರ್ ಅಧಿಕಾರಿ ಡಾ. ಗೋಪಾಲಕೃಷ್ಣ ಬಿ. ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

See also  ಶಿರಸಿ ಮೂಲದ ಕೊರೊನಾ ಸೋಂಕಿತ ಸಾವು: ಅವೈಜ್ಞಾನಿಕವಾರ ಅಂತ್ಯ ಸಂಸ್ಕಾರ ಜನರ ವಿರೋಧ

ಮೋಮಿನಪುರಕ್ಕೂ ಭೇಟಿ ನೀಡಿದ ಡಿ.ಸಿ.ಎಂ.: ನಂತರ ಉಪಮುಖ್ಯಮಂತ್ರಿಗಳು ಕೊರೋನಾ ಸೋಂಕು ಹೆಚ್ಚು ಕಂಡು ಬಂದ ನಗರದ ಮೋಮಿನಪುರ ಕಂಟೇನ್‍ಮೆಂಟ್ ಝೋನ್ ಪ್ರದೇಶದ ಸಾತ್ ಗುಂಬಜ್ ಸ್ಥಳಕ್ಕೆ ಭೇಟಿ ನೀಡಿ ಲಾಕ್ ಡೌನ್ ಪರಿಶೀಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು