News Kannada
Wednesday, December 07 2022

ಕರ್ನಾಟಕ

ಲಾಕ್ ಡೌನ್ ಸಡಿಲಿಕೆ: ಕೊಡಗಿಗೆ ಹೊರ ಜಿಲ್ಲೆಗಳಿಂದ 4 ಸಾವಿರ ಮಂದಿ ಆಗಮಿಸುವ ನಿರೀಕ್ಷೆ

Photo Credit :

ಲಾಕ್ ಡೌನ್ ಸಡಿಲಿಕೆ: ಕೊಡಗಿಗೆ ಹೊರ ಜಿಲ್ಲೆಗಳಿಂದ 4 ಸಾವಿರ ಮಂದಿ ಆಗಮಿಸುವ ನಿರೀಕ್ಷೆ

ಮಡಿಕೇರಿ: ಕೊರೊನಾ ಸಾಂಕ್ರಾಮಿಕದ ದ್ವಿತೀಯ ಲಾಕ್ ಡೌನ್ ಮುಕ್ತಾಯದೊಂದಿಗೆ ನೀಡಿರುವ ಕೆಲವು ಸೌಲಭ್ಯಗಳನ್ನು ಬಳಸಿಕೊಂಡು ಹೊರ ಜಿಲ್ಲೆ, ರಾಜ್ಯ ಮತ್ತು ಹೊರ ರಾಷ್ಟ್ರಗಳಿಂದ ಕೊಡಗಿಗೆ 3 ರಿಂದ 4 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ. ಮುಂದಿನ ಇಪ್ಪತ್ತು ದಿನ ಅತ್ಯಂತ ಸೂಕ್ಷ್ಮ ಅವಧಿಯದ್ದಾಗಿದ್ದು, ಪ್ರತಿಯೊಬ್ಬರು ಸಾಮಾಜಿಕ ಅಂತರದೊಂದಿಗೆ ಸಾಂಕ್ರಾಮಿಕ ತಡೆಗೆ ಕೈಜೋಡಿಸುವುದು ಅವಶ್ಯವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕೊಡಗು ಜಿಲ್ಲೆಯಲ್ಲಿರುವ ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಸ್ಭೆರಿದಂತೆ ವಿವಿಧ ರಾಜ್ಯಗಳ 3886 ಮಂದಿ ತಮ್ಮ ಊರಿಗೆ ತೆರಳುವುದಕ್ಕೆ ಸಂಬಂಧಿಸಿದಂತೆ ‘ಸೇವಾ ಸಿಂಧು’ ವೆಬ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಜನರನ್ನು ಕಳುಹಿಸುವ ಕಾರ್ಯದ ಉಸ್ತುವಾರಿಯನ್ನು ಉಪ ವಿಭಾಗಾಧಿಕಾರಿ ಜವರೇಗೌಡ ಅವರಿಗೆ ವಹಿಸಲಾಗಿದೆಯೆಂದು ಮಾಹಿತಿ ನೀಡಿದರು.

ಹೊರ ರಾಜ್ಯಗಳಿಂದ ಕೊಡಗಿಗೆ ಬರಲು ವೆಬ್ ಮೂಲಕ ಇಲ್ಲಿಯವರೆಗೆ 368 ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಹೊರ ರಾಜ್ಯಗಳಲ್ಲಿರುವವರನ್ನು ಜಿಲ್ಲೆಗೆ ಕರೆ ತರುವ ಕಾರ್ಯದ ಜವಾಬ್ದಾರಿಯನ್ನು ಕೃಷಿ ಇಲಾಖಾ ಉಪ ನಿರ್ದೇಶಕರಾದ ರಾಜು ಅವರಿಗೆ ವಹಿಸಲಾಗಿದೆಯೆಂದು ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ಜಿಲ್ಲೆಗೆ ಆಗಮಿಸುವವರಿಗೆ ಎರಡು ಚೆಕ್ ಪೋಸ್ಟ್- ಕೊಡಗು ಜಿಲ್ಲೆಗೆ ಹೊರ ಜಿಲ್ಲೆ, ರಾಜ್ಯ ಮತ್ತು ವಿದೇಶಗಳಿಂದ ಆಗಮಿಸುವವರಿಗೆ ಕುಶಾಲನಗರದ ಕೊಪ್ಪ ಮತ್ತು ಮಂಗಳೂರು ಕಡೆಯಿಂದ ಬರುವವರ ಅನುಕೂಲಕ್ಕಾಗಿ ಸಂಪಾಜೆಯಲ್ಲಿ ಚೆಕ್ ಪೋಸ್ಟ್ ಮಾಡಲಾಗಿದೆ. ಇಲ್ಲಿ ಹೊರಗಿನಿಂದ ಬರುವವರ ಪರಿಶೀಲನೆ ನಡೆಸಲಾಗುತ್ತದೆಂದರು.

ಜಿಲ್ಲೆಗೆ ಆಗಮಿಸುವವರನ್ನು ಕಡ್ಡಾಯವಾಗಿ ಗೃಹ ಬಂಧನಕ್ಕೆ ಒಳಪಡಿಸಲಾಗುತ್ತದೆ ಮತ್ತು ರೆಡ್ ಜೋನ್‍ನಿಂದ ಬರುವವರ ಮೇಲೆ ಪ್ರತಿನಿತ್ಯ ಆಯಾ ವಿಭಾಗದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ನಿಗಾವಹಿಸಲಿದ್ದು, ಕಿತ್ತಳೆ ಬಣ್ಣಕ್ಕೆ ಒಳಪಟ್ಟ ಪ್ರದೇಶಗಳಿಂದ ಬರುವವರನ್ನು ಮೂರು ದಿನಗಳಿಗೆ ಒಮ್ಮೆ ಮತ್ತು ಹಸಿರು ವಲಯದಿಂದ ಬರುವವರನ್ನು ವಾರಕ್ಕೊಮ್ಮೆ ಪರಿಶೀಲಿಸಲಾಗುತ್ತದೆಂದು ಜಿಲ್ಲಾಧಿಕಾರಿಗಳು ತಿಳಿಸಿರು.

ಚೆಕ್ ಪೋಸ್ಟ್‍ಗಳಲ್ಲಿ ವೆಬ್ ಸ್ಕ್ರೀನಿಂಗ್- ಎಸ್‍ಪಿ ಡಾ. ಸುಮನ್ ಪನ್ನೇಕರ್ ಮಾತನಾಡಿ, ಜಿಲ್ಲೆಯ 14 ಚೆಕ್ ಪೋಸ್ಟ್‍ಗಳಲ್ಲಿ 46 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದೀಗ ಚೆಕ್ ಪೋಸ್ಟ್ ಮೂಲಕ ಬರುವವರ ಪರಿಶೀಲನೆಗೆ ವೆಬ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆಯೆಂದು ತಿಳಿಸಿದರು.

ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಇರುವುದರಿಂದ ವಾಹನಗಳ ಸಂಚಾರವೂ ಹೆಚ್ಚಿದೆ. ಈ ಹಂತದಲ್ಲಿ ಅನಗತ್ಯವಾಗಿ ಸಂಚರಿಸುವ ಪರಿಪಾಠವೂ ಕಂಡು ಬರುತ್ತಿದ್ದು, ಇಲ್ಲಿಯವರೆಗೆ ಈ ರೀತಿ ಅನಗತ್ಯ ಸಂಚಾರ ಮಾಡಿದವರ 1763 ವಾಹನಗಳನ್ನು ಅಮಾನತು ಪಡಿಸಿಕೊಂಡು, ಕಟ್ಟೆಚ್ಚರ ನೀಡಿ ಇಲ್ಲವೆ, ದಂಡ ವಿಧಿಸಿ ಕಳುಹಿಸಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ನಿರ್ಬಂಧ ಸಡಿಲಿಕೆ ಅವಧಿಯ ಬಳಿಕ ಸಂಜೆ 4 ರಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಇದನ್ನು ಮೀರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

See also  ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು