News Kannada
Tuesday, November 29 2022

ಕರ್ನಾಟಕ

ಸೇವಿಸಲು ಯೋಗ್ಯವಲ್ಲದ ಮಾಂಸ ಮಾರಾಟ: ಬಂಧನ - 1 min read

Photo Credit :

ಸೇವಿಸಲು ಯೋಗ್ಯವಲ್ಲದ ಮಾಂಸ ಮಾರಾಟ: ಬಂಧನ

ಮಂಡ್ಯ: ಲಾಕ್‍ಡೌನ್ ಸಡಿಲಿಕೆಯಾದ ಕಾರಣ ಮಾಂಸ ಮಾರಾಟಕ್ಕೆ ಅನುಮತಿ ನೀಡಿದ್ದ ಮೊದಲ ದಿನವೇ ಕೆ.ಆರ್.ಪೇಟೆ ಪಟ್ಟಣದ ಮಾಂಸದ ಅಂಗಡಿಯಲ್ಲಿ ಕೆಲವು ದಿನಗಳ ಹಿಂದೆ ಕತ್ತರಿಸಿ ಪ್ರಿಜ್‍ನಲ್ಲಿಟ್ಟಿದ್ದ ತಿನ್ನಲು ಯೋಗ್ಯವಲ್ಲದ ಮಾಂಸ ಮಾರಾಟ ಮಾಡುತ್ತಿದ್ದ ಮಾಲೀಕನನ್ನು ಪುರಸಭೆ ಮುಖ್ಯಾಧಿಕಾರಿ ಸತೀಶ್‍ಕುಮಾರ್ ಅವರು ಮಾಂಸದ ಸಮೇತ  ಪೊಲೀಸರ ವಶಕ್ಕೆ ನೀಡಿರುವ ಘಟನೆ ನಡೆದಿದೆ.

ಮುಖ್ಯಾಧಿಕಾರಿಗಳು ಪುರಸಭೆ ಸಮೀಪದಲ್ಲಿರುವ ಮಾಂಸದ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ, ಸ್ವಚ್ಛತೆ ಸೇರಿದಂತೆ ತಾಲೂಕು ಆಡಳಿತದ ನಿರ್ದೇಶನಗಳನ್ನು ಪಾಲಿಸುತ್ತಿರುವುದನ್ನು ಪರೀಶೀಲಿಸಲು ಹೋಗಿದ್ದರು. ಈ ಸಂದರ್ಭದಲ್ಲಿ  ಖಾಸಗಿ ಬಸ್ ನಿಲ್ದಾಣದಲ್ಲಿರುವ  ನೂರ್ ಅಹಮದ್ ಅವರ ಮಾಂಸ ಅಂಗಡಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕತ್ತರಿಸಿ, ಸೇವಿಸಲು ಯೋಗ್ಯವಲ್ಲದ ಮಾಂಸವನ್ನು  ಪ್ರೀಜ್‍ನಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಪುರಸಭೆಯ ಆರೋಗ್ಯ ಪರಿವೀಕ್ಷಕ ಅಶೋಕ್‍ರನ್ನು ಕರೆಯಿಸಿ ಅಂಗಡಿಗೆ ಬೀಗ ಹಾಕಿಸಿದ್ದಾರೆ. ಮಾಲೀಕನನ್ನು ಪಟ್ಟಣದ ಪೊಲೀಸರ ವಶಕ್ಕೆ ನೀಡಿದ್ದಾರೆ.

ಘಟನೆ ಕುರಿತು ಪಟ್ಟಣ ಪೊಲೀಸರು ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

See also  ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳಿಗೆ ವಿಧಿಸಿದ್ದ ನಿರ್ಬಂಧ ತೆರವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು