News Kannada
Friday, December 02 2022

ಕರ್ನಾಟಕ

ಮಂಡ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆ

Photo Credit :

ಮಂಡ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆ

ಮಂಡ್ಯ: ಮುಂಬೈ ಪ್ರಯಾಣದಿಂದ ಬಂದ ಮಹಿಳೆ, ಬಾಲಕ ಸೇರಿ ನಾಲ್ಕು ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.

ಸೋಂಕಿತರನ್ನು ಪಿ-961, ಪಿ-962, ಪಿ-963, ಪಿ-964 ಎಂದು ಗುರುತಿಸಲಾಗಿದೆ. ಪಿ-961 ಸೋಂಕಿತ 48 ವರ್ಷದ ಮಹಿಳೆಯಾಗಿದ್ದು, ಹಲವಾರು ವರ್ಷಗಳಿಂದ ಮುಂಬೈನ ಅಂಧೇರಿ ಈಸ್ಟ್‍ನಲ್ಲಿ ಪತಿ ಜೊತೆ ವಾಸವಾಗಿದ್ದಾರೆ. ಪತಿ ಆಟೋ ಚಾಲಕನಾಗಿದ್ದು, ಮಗ ಬ್ಯಾಂಕ್ ಉದ್ಯೋಗಿಯಾಗಿದ್ದಾನೆ. ಇವರು ಮೂಲತಃ ಕೆ.ಆರ್.ಪೇಟೆ ತಾಲೂಕು ಜಾಗಿನಕೆರೆ ಸಮೀಪದ ಸಾರಂಗಿ ಗ್ರಾಮದವರಾಗಿದ್ದಾರೆ.

ಮುಂಬೈನಲ್ಲಿ ಜೀವನ ನಡೆಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಪಾಸ್ ತೆಗೆದುಕೊಂಡು ಮೇ 10ರಂದು ಮುಂಬೈನಿಂದ ಟಿಟಿ ವಾಹನದಲ್ಲಿ ಪ್ರಯಾಣ ಆರಂಭಿಸಿ 11ರಂದು ತುಮಕೂರು ಜಿಲ್ಲೆ ಮಾಯಸಂದ್ರ ಚೆಕ್ ಪೋಸ್ಟ್ ಮೂಲಕ ಆಗಮಿಸಿದರು. ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಮೇ 13ರಂದು ಗಂಟಲುದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಇರುವುದು ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿ ಈಕೆಯ ಪತಿ ಹಾಗೂ ಮಗನನ್ನು ಗುರುತಿಸಲಾಗಿದೆ. ಇಬ್ಬರಲ್ಲೂ ಸೋಂಕು ಇಲ್ಲದಿರುವುದು ಕಂಡುಬಂದಿದೆ ಎಂದು ನುಡಿದರು.

ಪಿ-962ರ ಸೋಂಕಿತ 38 ವರ್ಷದ ವ್ಯಕ್ತಿಯಾಗಿದ್ದು, ಮೂಲತಃ ನಾಗಮಂಗಲ ತಾಲೂಕು ಗಿಡದಹೊಸಹಳ್ಳಿ ಗ್ರಾಮದವರಾಗಿದ್ದು, ಕೆ.ಆರ್.ಪೇಟೆಯ ಜಯನಗರದಲ್ಲಿ ವಾಸವಾಗಿದ್ದರು. ಹತ್ತು ವರ್ಷದಿಂದ ಮುಂಬೈನ ನೆಹರುನಗರದ ವಿಲೆಪಾರ್ಲೆಯಲ್ಲಿರುವ ಹೋಟೆಲ್‍ನಲ್ಲಿ ಬೌನ್ಸರ್ ಆಗಿ ಕೆಲಸ ಮಾಡಿಕೊಂಡಿದ್ದನು.  ಮುಂಬೈನ ಸಾಂತಾಕ್ರೂಜ್‍ನ ವೆಸ್ಟ್‍ಲಿಂಕ್ ರಸ್ತೆಯಲ್ಲಿ ವಾಸವಾಗಿದ್ದರು. ಮೇ 10ರಂದು ಟೆಂಪೋ ಟ್ರಾವೆಲ್ ಮೂಲಕ ವಿಲೆಪಾರ್ಲೆಯಿಂದ ಪತ್ನಿ ಹಾಗೂ ಪುತ್ರನೊಂದಿಗೆ ಪ್ರಯಾಣ ಆರಂಭಿಸಿದ ವ್ಯಕ್ತಿ ಮೇ 11ರಂದು ಮಾಯಸಂದ್ರ ಮೂಲಕ ಆಗಮಿಸಿದರು. ಇವರನ್ನು  ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಗಂಟಲು ದ್ರವವನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕಿರುವುದು ಪತ್ತೆಯಾಗಿದ್ದು, ಇವರಿಗೆ ಜ್ವರ ಇದೆ ಎಂದು ತಿಳಿಸಿದರು.

ಪಿ-963ರ ಸೋಂಕಿತ 6 ವರ್ಷದ ಬಾಲಕನಾಗಿದ್ದು, ಪಿ-962ರ ಪುತ್ರನಾಗಿದ್ದಾನೆ. ಈತ ಕೂಡ ತಂದೆ-ತಾಯಿಯೊಂದಿಗೆ ಆಗಮಿಸಿದ್ದಾರೆ. ಪಿ-964ರ ಸೋಂಕಿತ 26 ವರ್ಷದ ವ್ಯಕ್ತಿಯಾಗಿದ್ದು, ಮುಂಬೈ ಸೆಂಟ್ರಲ್‍ನ ಮೆರಿನ್ ಡ್ರೈವ್‍ನಲ್ಲಿ ವಾಸವಾಗಿದ್ದರು. ಕಳೆದ ಹಲವಾರು ವರ್ಷಗಳಿಂದ ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ಬಸ್ ಮೂಲಕ ಸ್ನೇಹಿತರೊಂದಿಗೆ ಮಾ.29ರಂದು ಮುಂಬೈನಿಂದ ಮಡಗಾಂವ್‍ಗೆ ಆಗಮಿಸಿ ಮೇ 8 ರವರೆಗೂ ಅಲ್ಲಿಯೇ ವಾಸವಾಗಿದ್ದರು. ಬಳಿಕ ಮೇ 10ರಂದು ಕೆ.ಆರ್.ಪೇಟೆಗೆ ಆಗಮಿಸಿದ ಇವರನ್ನು ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅದೇ ದಿನ ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು, ಪರೀಕ್ಷಾ ವರದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ. ಇವರೊಂದಿಗೆ 7 ಜನ ಪ್ರಾಥಮಿಕ ಸಂಪರ್ಕ ಹಾಗೂ 5 ಜನರನ್ನು ಎರಡನೇ ಹಂತದ ಸಂಪರ್ಕದಲ್ಲಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

See also  ಶ್ರೀರಂಗಪಟ್ಟಣದ ಕೋಡಿಶೆಟ್ಟಿಪುರದಲ್ಲಿ ಗಣಿಧೂಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು