News Kannada
Monday, December 05 2022

ಕರ್ನಾಟಕ

ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ: ಎಸ್ಪಿ ಭೇಟಿ

Photo Credit :

ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ: ಎಸ್ಪಿ ಭೇಟಿ

ನಾಗಮಂಗಲ: ಚರಂಡಿ ನೀರಿನ ವಿಚಾರಕ್ಕೆ ದಲಿತ ಕುಟುಂಬವೊಂದಕ್ಕೆ ಸವರ್ಣಿಯರು  ಜಾತಿನಿಂದನೆ ಮಾಡಿ ಕೊಲೆಬೆದರಿಕೆ ಹಾಕಿರುವುದಲ್ಲದೆ, ಗ್ರಾಮದಲ್ಲಿ ಅಂಗಡಿಯಲ್ಲಿ ಸಾಮಾನು ನೀಡದೆ  ಕುಡಿಯಲು ನೀರು ಬಿಡದೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ತಾಲ್ಲೂಕಿನ ಬುರುಡುಗುಂಟೆ ಗ್ರಾಮದಲ್ಲಿ ನಡೆದಿದ್ದು ಈ ಸಂಬಂಧವಾಗಿ 10 ಮಂದಿ ಮೇಲೆ ಎಸ್ಸಿ, ಎಸ್ಟಿ ಕಾಯ್ದೆಯಡಿ  ಜಾತಿನಿಂದನೆ ಪ್ರಕರಣ  ದಾಖಲಾಗಿದೆ.

ತಾಲೂಕಿನ ಹೊಣಕೆರೆ ಹೋಬಳಿ ಮಣ್ಣಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬುರುಡುಗುಂಟೆ ಗ್ರಾಮದ ಪುಟ್ಟಸ್ವಾಮಿ ಎಂಬ ದಲಿತ ಕುಟುಂಬ ಸವರ್ಣಿಯರಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದು, ಗ್ರಾಮದ ಒಕ್ಕಲಿಗ ಜನಾಂಗದವರಾದ ಸರಗೂರೇಗೌಡ ಮತ್ತು ಸಾಕಮ್ಮ ಎಂಬುವರು ಧನದಕೊಟ್ಟಿಗೆಯ ಗಂಜಲ ಮತ್ತು ಗಲೀಜು ನೀರನ್ನು ಪೈಪ್ ಮೂಲಕ ಚರಂಡಿಗೆ ಹರಿಯಬಿಟ್ಟಿದ್ದರು, ಇದರಿಂದ ದಲಿತ ಕುಟುಂಬಕ್ಕೆ ಸೊಳ್ಳೆ ಹೆಚ್ಚಾಗಿದ್ದವು. ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮೇ.9 ರಂದು ಗಲಾಟೆಯಾಗಿ ಪ್ರಕರಣ ಪೊಲೀಸ್ ಠಾಣೆಗೆ ಬಂದ ಕಾರಣ ಇಬ್ಬರಿಗೂ ತಿಳುವಳಿಕೆ ಹೇಳಿ ಕಳುಹಿಸಲಾಗಿತ್ತು. ಇದರಿಂದ ಕೆರಳಿದ  ಗ್ರಾಮದ ಸವರ್ಣಿಯರು ಮೇ.11ರ ಸೋಮವಾರ ರಾತ್ರಿ ಪಂಚಾಯಿತಿ ಕಟ್ಟೆ ಸೇರಿ ದಲಿತ ಕುಟುಂಬಕ್ಕೆ ಗ್ರಾಮಗಳಲ್ಲಿನ ಅಂಗಡಿಯಲ್ಲಿ  ಯಾವುದೆ ಸಾಮಾನು ಕೊಡಕೂಡದು, ಅವರೊಂದಿಗೆ ಮಾತನಾಡುವುದಾಗಲಿ, ಜಮೀನು ಮತ್ತು ಇತರೆ ಕೆಲಸಕ್ಕೆ ಕರೆದು ಸಹಾಯ ಮಾಡುವವರಿಗೆ 25 ಸಾವಿರ ದಂಡ ಹಾಕುವುದಾಗಿ ಗ್ರಾಮಸ್ಥರು ತೀರ್ಮಾನಿಸಿದ್ದು ನಿಮಗೆ ಯಾವುದೇ ವಸ್ತುಗಳನ್ನು ಕೊಡಲ್ಲ ಎಂದು ಅಂಗಡಿಯವರು ಪುಟ್ಟಸ್ವಾಮಿ ಕುಟುಂಬದವರನ್ನು ವಾಪಸ್ ಕಳಿಸಿದ್ದಾರೆ.

ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿರುವ ಕಾರಣಕ್ಕೆ ಮಣ್ಣಹಳ್ಳಿ ಗ್ರಾಮಪಂಚಾಯಿತಿ ವಾಟರ್ ಮ್ಯಾನ್ ಕೂಡ ದಲಿತ ಕುಟುಂಬಕ್ಕೆ ಕುಡಿಯುವ ನೀರು ಕೂಡ ಬಿಟ್ಟಿರಲಿಲ್ಲ ಎನ್ನಲಾಗಿದೆ.

ಪ್ರಕರಣದ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಸರಗೂರೇಗೌಡ ಮತ್ತು ಸಾಕಮ್ಮ, ಶಿವರಾಜು ಸೇರಿದಂತೆ 10 ಮಂದಿ ಮೇಲೆ  ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ಗ್ರಾಮಕ್ಕೆ ಮಂಡ್ಯ ಎಸ್ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ಮಾಡಿ ದಲಿತ ಕುಟುಂಬಕ್ಕೆ ಸಾಂತ್ವಾನ ಹೇಳಿ ಆತ್ಮಸ್ಥೈರ್ಯ ತುಂಬಿದ್ದಾರೆ.

See also  ನಾನು ದಲಿತನಲ್ಲ ಬ್ರಾಹಣ ಎಂದ ಪ್ರಿನ್ಸ್‌ ಹೋಟೆಲ್‌ ಸಿಬ್ಬಂದಿ ಗಂಗಾಧರ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು