News Kannada
Friday, December 02 2022

ಕರ್ನಾಟಕ

ಆರೋಗ್ಯಕರ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ: ಸಚಿವ ಸಿ.ಸಿ.ಪಾಟೀಲ   

Photo Credit :

ಆರೋಗ್ಯಕರ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ: ಸಚಿವ ಸಿ.ಸಿ.ಪಾಟೀಲ   

ಗದಗ: ಕೊವಿಡ್-19 ಸೋಂಕು ನಮಗೆ ತಗುಲದೇ ಇರಲು  ಪ್ರತಿಯೊಬ್ಬರೂ ಮುಖಕ್ಕೆ ಮಾಸ್ಕ್ ಧರಿಸುವಿಕೆ, ಎಂತಹ ಧಾವಂತದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ,  ಉತ್ತಮ ಆಹಾರ ಪದ್ಧತಿ, ನಿತ್ಯ  ವ್ಯಾಯಾಮ ಅಭ್ಯಾಸಗಳನ್ನು ರೂಢಿಸಿಕೊಂಡು ನಮ್ಮ ವೆಯಕ್ತಿಕ ರೋಗ ನಿರೋಧಕ ಶಕ್ತಿ ಕಾಯ್ದುಕೊಂಡು ಆರೋಗ್ಯಕರ ಸಮಾಜ  ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ   ಎಂದು  ರಾಜ್ಯದ ಗಣಿ, ಭೂ ವಿಜ್ಞಾನ ಇಲಾಖೆ  ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು  ಕೋವಿಡ್ -19 ನಿಯಂತ್ರಣ ಕುರಿತು ಜರುಗಿದ  ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ವಿಧಿಸಲಾದ ಲಾಕ್ ಡೌನ್ ನಲ್ಲಿ ಗದಗ ಜಿಲ್ಲೆಯಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರು, ಪ್ರವಾಸಿಗರು, ಯಾತ್ರಾರ್ಥಿಗಳು ವಿದ್ಯಾರ್ಥಿಗಳು ಮುಂತಾದವರು 3,195 ಜನರನ್ನು ಕ್ವಾರಂಟೈನ್  ಮಾಡಲಾಗಿದೆ.  ಬೇರೆ ರಾಜ್ಯದಿಂದ ಬಂದಂತಹ 212 ಜನರನ್ನು 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ನಲ್ಲಿಟ್ಟು ನಿಗಾವಹಿಸಲಾಗುತ್ತಿದೆ. ಹೊರ ರಾಜ್ಯ ಗಳಲ್ಲಿ ಸಿಲಕಿರುವ ಅಥವಾ ಸ್ವಂತ ಸ್ಥಳಕ್ಕೆ ಹೋಗಲು ಬಯಸುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಪ್ರವಾಸಿಗರು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕೋವಿಡ್ -19 ನಿಯಂತ್ರಣಕ್ಕಾಗಿ   ಈ ಮೊದಲು ವಿಧಿಸಿದ  ಲಾಕ್‍ಡೌನ್ ಸಂದರ್ಭದಲ್ಲಿ  ಸುರಕ್ಷಿತವಾಗಿದ್ದೆವು. ಅದು ಇನ್ನು ಪೂರ್ಣವಾಗಿ ನಿಯಂತ್ರಣಕ್ಕ ಬಂದಿಲ್ಲ. ಕೊವಿಡ್-19 ಸೋಂಕಿಗೆ ಔಷಧವಿಲ್ಲ.  ಈಗ  ನಮ್ಮ ಸುರಕ್ಷತೆಯು ನಮ್ಮ ಕೈಯ್ಯಲ್ಲಿಯೇ ಇದೆ. ಆರ್ಥಿಕ ಚಟುವಟಿಕೆ ಹೆಚ್ಚಿಸುವ ಅನಿವಾರ್ಯತೆ ಇದೇ ಆದರೆ ಉದ್ದಿಮೆದಾರರು, ವರ್ತಕರು, ಸಾರ್ವಜನಿಕರೂ ಸಹ ಕೋವಿಡ್-19 ಸೋಂಕು ನಿಯಂತ್ರಣ ಕುರಿತು ತಮ್ಮ ಜವಾಬ್ದಾರಿಯನ್ನು ತಮ್ಮ ಸುರಕ್ಷತೆಗಾಗಿ ಅರಿತುಕೊಳ್ಳಬೇಕು ಎಂದು  ಸಚಿವ ಸಿ.ಸಿ.ಪಾಟೀಲ ನುಡಿದರು.

ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆÀ        ಜಿಮ್ಸ್ ನಲ್ಲಿಯ ಕೊರೋನಾ  ಟೆಸ್ಟ್‍ಲ್ಯಾಬ್‍ನಲ್ಲಿ   ಪ್ರತಿದಿನ  40  (ಸ್ಯಾಂಪಲ್ಸ್) ಮಾದರಿಗಳನ್ನು ಪರೀಕ್ಷೆ ಮಾಡುವ ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ ಗುರುತಿಸಲಾದ  ಹೈ  ರಿಸ್ಕ್   ಇದ್ದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಸರ್ವೆ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶದನಂತೆ ಕಂಟೈನ್ ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಾಕ್ ಡೌನ್ ನಿಂದ ವಿನಾಯತಿ ನೀಡಿದ್ದು , ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ ಕಡ್ಡಾಯ ಮಾಡಲಾಗಿದೆ. ಹೊರರಾಜ್ಯ, ಜಿಲ್ಲೆಗಳಿಂದ ಬಂದವರಿಗೆ ನೇರವಾಗಿ  ಕ್ವಾರಂಟೈನ್ ಮಾಡಲಾಗುತ್ತಿದೆ.     ಸಾರ್ವಜನಿಕರಿಗೆ  ಏನಾದರೂ ತೊಂದರೆ ಬಂದರೆ   ನೇರವಾಗಿ ಸಹಾಯವಾಣಿ 08372-231779 ಮೂಲಕ ಜಿಲ್ಲಾಡಳಿತದ ಗಮನಕ್ಕೆ ತರಬಹುದಾಗಿದೆ ಎಂದರು.

ಗದಗ ಜಿಲ್ಲೆಯ ಕೃಷಿ, ಮುಂಗಾರು ಸಿದ್ದತೆ ಕುರಿತು ಸಚಿವ ಸಿ.ಸಿ.ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಾರ್ಷಿಕ ವಾಡಿಕೆ ಮಳೆ 656 ಮಿಮೀ ಇದ್ದು 15 ನೇ ಮೇ ವರೆಗೆ 57 ಮೀಮೀ ವಾಡಿಕೆ ಮಳೆಗೆ  74  ಮಿಮೀ ಮಳೆಯಾಗಿದೆ.  ಕೃಷಿ ಚಟುವಟಿಕೆ ಕೈಗೊಳ್ಳಲು ಪೂರಕವಾದ ವಾತಾವರಣವಿದೆ.  ಮುಂಗಾರು ಹಂಗಾಮಿನ ಗುರಿ 2,80,600 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ,  ಬಿತ್ತನೆ ಬೀಜ 10 ಸಾವಿರ ಕಿಂಟಲ್ ಬೇಡಿಕೆಯಿದ್ದು 10,000 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ. ರೈತರಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ಗುಣಮಟ್ಟದ  ಬೀಜ ಸಿಗುವಂತೆ ಕ್ರಮ ಜರುಗಿಸಲಾಗಿದೆ.  ಬಿತ್ತನೆ ಬೀಜ ವಿತರಿಸಲು 11 ರೈತ ಸಂಪರ್ಕ ಕೇಂದ್ರಗಳು, 6 ಹೆಚ್ಚುವರಿ ಮಾರಾಟ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಂಗಾರು ಹಂಗಾಮಿಗೆ 41,112 ಮೆ.ಟನ್ ರಾಸಾಯನಿಕ ಗೊಬ್ಬರಗಳ  ಬೇಡಿಕೆ ಇದ್ದು ಮೇ ಅಂತ್ಯದವರೆಗೆ 10,910  ಮೆ.ಟನ್ ಬೇಡಿಕೆಗೆ  14,569 ಮೆ.ಟನ್ ದಾಸ್ತಾನು ಮಾಡಲಾಗಿದೆ.  ಬಿತ್ತನೆ ಬೀಜ ಮತ್ತು ರಾಸಾಯನಿಕ ಗೊಬ್ಬರಗಳ ಕೊರತೆಯಿರುವುದಿಲ್ಲ.

See also  ಸಿದ್ದರಾಮಯ್ಯರನ್ನು ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಲಿ: ಈಶ್ವರಪ್ಪ

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 1 ಲಕ್ಷ 70 ಸಾವಿರ ಮಾನವ ದಿನಗಳನ್ನು ಸೃಜಿಸಿ 20 ಸಾವಿರ ಜನಕ್ಕೆ ಕೆಲಸ ಕೊಡಲಾಗಿದೆ.  ಒಟ್ಟಾರೆ ಶ್ರಮಿಕ ವರ್ಗ ಹಾಗೂ ಕಾರ್ಮಿಕ ವರ್ಗಗಳಿಗೆ ಅನುಕೂಲವಾಗಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಮೈಸೂರು ಮಿನರಲ್ಸ್ ಹಾಗೂ ಹಟ್ಟಿ ಗೋಲ್ಡ್ ಲಿಮಿಟೆಡ್  ಎರಡು ಕಂಪನಿಗಳಿಗೆ ಮರಳು ತೆರೆಯಲು  ಅನುಮತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಬದಲ್ಲಿ ಆಯುಷ್ ಇಲಾಖೆಯು ಹೊರತಂದ  ಕೋವಿಡ್-19 ಕುರಿತು ಜಾಗೃತಿ ಕರಪತ್ರವನ್ನು  ಬಿಡುಗಡೆ ಮಾಡಲಾಯಿತು ಮತ್ತು ಕೊರೋನಾ ವಾರಿಯರ್ಸ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ  ಕಾರ್ಯಕರ್ತೆಯರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ   ಚ್ಯವನಪ್ರಾಶ್  ಔಷಧಿಯನ್ನು ವಿತರಿಸಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಯತೀಶ ಎನ್., ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಇದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು