News Kannada
Monday, September 26 2022

ಕರ್ನಾಟಕ

ಸುಳ್ಳು ಸುದ್ದಿ ಹರಡುವ ಸೋಶಿಯಲ್ ಮೀಡಿಯಾದವರಿಗೆ ತಕ್ಕ ಪಾಠ ಕಲಿಸಲಿದ್ದೇವೆ: ಜಿಲ್ಲಾಧಿಕಾರಿ - 1 min read

Photo Credit :

ಸುಳ್ಳು ಸುದ್ದಿ ಹರಡುವ ಸೋಶಿಯಲ್ ಮೀಡಿಯಾದವರಿಗೆ ತಕ್ಕ ಪಾಠ ಕಲಿಸಲಿದ್ದೇವೆ: ಜಿಲ್ಲಾಧಿಕಾರಿ

ಕಾರವಾರ: ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಸೋಶಿಯಲ್ ಮಿಡಿಯಾ ‘ವೀರ’ರು ಸಮಾಜ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ನಿಗಾ ಇಡಲಾಗಿದ್ದು ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇನ್ನೊಬ್ಬರ ತೊಜೇವಧೆ, ನಕಾರಾತ್ಮಕ ಸುಳ್ಳು ಸುದ್ದಿಗಳನ್ನು ಹರಡಿ ಜನರನ್ನು ಇನ್ನಷ್ಟು ಆತಂಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ. ಸಮಾಜದಲ್ಲಿ ವಿಷ ಹರಡುವ ಕೆಲಸ ಮಾಡುತ್ತಿರುವ ವೀರರಿಗೆ ಮುಂದಿನ ಕೆಲವೇ ದಿನದಲ್ಲಿ ತಕ್ಕ ಪಾಠ ಕಲಿಸಲಾಗುವುದು. ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿರುವ ಕುಚೋದ್ಯದಿಂದ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅನುಮತಿ ಕಡ್ಡಾಯ: ವಿದೇಶದಿಂದ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಗಾಗಬೇಕು. ವಿದೇಶದಿಂದ ಜಿಲ್ಲೆಗೆ ಬರುವವರು ಸರಕಾರಿ ಅಥವಾ ಹೊಟೇಲ್ ಕ್ವಾರಂಟೈನ್ ಬರುವ ಬಗ್ಗೆ  ಅವರವರೆ ನಿರ್ಧಾರ ಕೈಗೊಳ್ಳಬಹುದು. ಸರಕಾರ ಕ್ವಾರಂಟೈನ್ ಆಯ್ಕೆ ಮಾಡಿಕೊಂಡರೆ ಜಿಲ್ಲಾಡಳಿತವೇ ಎಲ್ಲ ವ್ಯವಸ್ಥೆ ಮಾಡಲಿದೆ. ಈ ಅವಧಿಯ ಮೊದಲ ದಿನದ ಹಾಗೂ 12 ದಿನದ ಕೊರೋನಾ ತಪಾಸಣಾ ವರದಿ ನೆಗೆಟಿವ್ ಬಂದರೂ ಸಹ ಮನೆಯಲ್ಲೇ 14 ದಿನ ಕ್ವಾರಂಟೈನ್ ಕಡ್ಡಾಯ ಎಂದ ಅವರು, ಅಂತರ್ ರಾಜ್ಯದಿಂದ ಬರುವವರು ಸೇವಾ ಸಿಂಧು ಮೂಲಕ ಪಾಸ್ ಪಡೆದು ಬರಬೇಕು. ಇಲ್ಲದ್ದರೇ ಚೆಕ್ ಪೋಸ್ಟ್ ನಲ್ಲಿ ಬಿಡಲಾಗುವುದಿಲ್ಲ. ಇತರ ಜಿಲ್ಲೆ, ತಾಲೂಕುಗಳಿಗೆ ತೆರಳಬೇಕಾದರೆ ಪಾಸ್ ಅಗತ್ಯವಿಲ್ಲ.

ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು. ಮದುವೆ ಸಮಾರಂಭಕ್ಕೆ 50 ಹಾಗೂ ಶವ ಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶವಿದೆ ಎಂದರು. 

See also  ಒಂದು ಕಿಮಿ ರಸ್ತೆ ನಾಪತ್ತೆ ; ಪೋಲೀಸ್‌ ದೂರು ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು